News

(video)ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಹಾಗು ಪ್ರತಾಪ್ ಸಿಂಹ ಸಾಂಪ್ರದಾಯಕ ಬಟ್ಟೆ! ಏನ್ ಹೇಳಿದ್ರು, ವಿಡಿಯೋ ನೋಡಿ

tejaswi-soorya

ಇತ್ತೀಚಿಗೆ ನಡೆದ ದೇಶದ ಚುನಾವಣೆಯಲ್ಲಿ ನಮ್ಮ ಕರ್ನಾಟಕದಲ್ಲಿ, ಸುಮಲತಾ ಅಂಬರೀಷ್ ಅವರು, ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಅವರು, ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರು ಭರ್ಜರಿ ಆಗಿ ಗೆದಿದ್ದರು. ನೆನ್ನೆ ಡೆಲ್ಲಿ ಅಲ್ಲಿ, ಪಾರ್ಲಿಮೆಂಟ್ ಅಲ್ಲಿ, ನಮ್ಮ ಹೆಮ್ಮೆಯ ಕನ್ನಡಿಗರಾದ ಸುಮಲತಾ ಅಂಬರೀಷ್ ಅವರು, ತೇಜಸ್ವಿ ಸೂರ್ಯ ಅವರು ಹಾಗು ಪ್ರತಾಪ್ ಸಿಂಹ ಅವರು ತಮ್ಮ ಪ್ರಮಾಣ ವಚನವನ್ನು ಸ್ವೀಕರಿಸಿ ಕನ್ನಡದಲ್ಲೇ ತಮ್ಮ ಮಾತುಗಳನ್ನು ಶುರು ಮಾಡಿದ್ದಾರೆ! ಇದಲ್ಲದೆ ನಮ್ಮ ತೇಜಸ್ವಿ ಸೂರ್ಯ ಹಾಗು ಪ್ರತಾಪ್ ಸಿಂಹ ಅವರು ಕರ್ನಾಟಕದ ಸಾಂಪ್ರದಾಯಕ ಉಡುಗೆಯನ್ನು ತೊಟ್ಟು ಪ್ರಮಾಣವಚನ ಸ್ವೀಕರಿಸಿದರು! ಪ್ರತಾಪ್ ಸಿಂಹ ಹಾಗು ತೇಜಸ್ವಿ ಸೂರ್ಯ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಅಮರ್ ಚಿತ್ರ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ನಮ್ಮ ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಟಿಸಿದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಅವರದ್ದು ಮೊದಲ ಚಿತ್ರ. ಈ ಚಿತ್ರವನ್ನು ನಮ್ಮ ಮೈನಾ ಖ್ಯಾತಿಯ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಅಮರ್ ಚಿತ್ರ ಇಂದು ಬಿಡುಗಡೆ ಆಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುಮಾರು 125 ಸೆಂಟರ್ ಗಳಲ್ಲಿ ಅಮರ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಅಮರ್ ಚಿತ್ರ ನಮ್ಮ ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿದೆ. ಕನ್ನಡಿಗರು ಅಮರ್ ಚಿತ್ರವನ್ನು ಹೃದಯ ತುಂಬಿ ಒಪ್ಪಿಕೊಂಡಿದ್ದಾರೆ! ಹಾಗಾದ್ರೆ ಅಮರ್ ಚಿತ್ರ ಹೇಗಿದೆ! ನಟರು ಹೇಗೆ ನಟನೆ ಮಾಡಿದ್ದಾರೆ? ಅಮರ್ ಚಿತ್ರದ ಬಗ್ಗೆ ನಮ್ಮ ಪ್ರತಿಕ್ರೆಯೆ!
ಅಮರ್ ಚಿತ್ರ ಸುಮಾರು ಒಂದೂವರೆ ವರ್ಷಗಳಿಂದ ಚಿತ್ರೀಕರಣ ಶುರು ಆಗಿತ್ತು. ಕನ್ನಡದ ಅಮರ್ ಚಿತ್ರ, ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರನಾದ ಅಭಿಷೇಕ್ ಅಂಬರೀಷ್ ಅವರ ಮೊದಲ ಕನ್ನಡ ಚಿತ್ರ. ಅಭಿಷೇಕ್ ಅಂಬರೀಷ್ ಅವರು ಸುಮಾರು 8 ವರ್ಷಗಳ ಕಾಲ ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿದ್ದಾರೆ. ಇದಾದ ಮೇಲೆ ಭಾರತಕ್ಕೆ ಬಂದ ಅಭಿಷೇಕ್ ಅವರು ಸಿನಿಮಾ ಫೀಲ್ಡನ್ನು ಆಯ್ಕೆ ಮಾಡಿಕೊಂಡರು. ಇದಾದ ನಂತರ ಅಂಬರೀಷ್ ಅವರ ಮೂಲಕ ನಮ್ಮ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ ಅಭಿಷೇಕ್ ಅಂಬರೀಷ್ ಅವರು ಒಂದು ಹೊಸ ಚಿತ್ರವನ್ನು ಮಾಡಲು ಶುರು ಮಾಡಿದರು. ಈ ಚಿತ್ರವನ್ನು ಮೈನಾ ಖ್ಯಾತಿಯ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ.
ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರ ಜೊತೆ, ಯಜಮಾನ ಖ್ಯಾತಿಯ ತಾನ್ಯಾ ಹೋಪ್ ಅವರು ನಾಯಕಿ ಯಾಗಿ ನಟಿಸಿದ್ದಾರೆ. ಇದು ಅಭಿಷೇಕ್ ಅಂಬರೀಷ್ ಅವರ ಮೊದಲ ಚಿತ್ರವಾದರೂ, ಚಿತ್ರದಲ್ಲಿ ಎಲ್ಲೂ ಕೂಡ ಇದು ಅವರ ಮೊದಲ ಚಿತ್ರ ವೆಂದು ಅನಿಸುವುದಿಲ್ಲ! ಅಮರ್ ಚಿತ್ರದಲ್ಲಿ ನಟಿ ತಾನ್ಯಾ ಹೋಪ್ ಅವರು ಕೂಡ ಅದ್ಭುತವಾಗಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮುಖ್ಯ ಅತಿಥಿ ಪಾತ್ರ ಮಾಡಿದ್ದಾರೆ! ದರ್ಶನ್ ಅವರು ಅಮರ್ ಸ್ಕ್ರೀನ್ ನಲ್ಲಿ 5 ರಿಂದ 6 ನಿಮಿಷ ಕಾಣಿಸಿಕೊಳ್ಳುತ್ತಾರೆ.
ಇದಲ್ಲದೆ ಅಮರ್ ಚಿತ್ರದಲ್ಲಿ ದೊಡ್ಡ ತಾರೆಗಳ ಹಿಂಡೇ ಇದೆ. ಅಮರ್ ಚಿತ್ರದಲ್ಲಿ ಅಭಿಷೇಕ್, ತಾನ್ಯಾ ಹೋಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹೊರೆತುಪಡಿಸಿ ನಟ ದೇವರಾಜ್ , ಸುಧಾ ರಾಣಿ , ಸಾಧು ಕೋಕಿಲ, ಚಿಕ್ಕಣ್ಣ, ದೀಪಕ್ ಶೆಟ್ಟಿ, ಅನೂಪ್ ಭಂಡಾರಿ, ರಚಿತಾ ರಾಮ್ ಅವರು ಕೂಡ ನಟಿಸಿದ್ದಾರೆ. ರಚಿತಾ ರಾಮ್ ಅವರು ಒಂದು ಹಾಡಿನಲ್ಲಿ ಬರುತ್ತಾರೆ. ಒಟ್ಟಿನಲ್ಲಿ ಅಮರ್ ಒಂದೊಳ್ಳೆ ಫ್ಯಾಮಿಲಿ ಚಿತ್ರ! ಕುಟುಂಬಸಮೇತರಾಗಿ ಚಿತ್ರವನ್ನು ಆರಾಮಾಗಿ ನೋಡಬಹುದು. ಚಿತ್ರ ಬಿಡುಗಡೆ ಆದ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ! ತಪ್ಪದೆ ಇಂದೇ ಚಿತ್ರವನ್ನು ಥಿಯೇಟರ್ ನಲ್ಲಿ ಹೋಗಿ ನೋಡಿರಿ!

Trending

To Top