ಕನ್ನಡದ ಹಿರಿಯ ನಟರಾದ ಲೋಕನಾಥ್ ಅವರು ಇಂದು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಲೋಕನಾಥ್ ಅವರು ಸುಮಾರು 1000 ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗು ಸುಮಾರು 650 ಕ್ಕೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಲೋಕನಾಥ್ ಅವರು ನಮ್ಮ ಡಾ ರಾಜ್ಕುಮಾರ್ ಅವರ ಜೊತೆ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಜೊತೆ ಕೂಡ ನಟಿಸಿದ್ದಾರೆ. ಲೋಕನಾಥ್ ಅವರು ಬಹಳ ದಿನಗಳಿಂದ ಅರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದರು. ಲೋಕನಾಥ್ ಅವರು ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದ್ದಿದ್ದಾರೆ. ಲೋಕನಾಥ್ ಅವರ ಸಾವಿನ ಸುದ್ದಿ ಕೇಳಿ ಕನ್ನಡದ ಬಹಳಷ್ಟು ನಟರು ಕಣ್ಣೀರಿಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಹಿರಿಯ ನಟ ಲೋಕನಾಥ್ ಅವರು Bhootayyana Maga Ayyu ಚಿತ್ರದಲ್ಲಿ ತಮ್ಮ ಪಾತ್ರದಿಂದ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಇದಲ್ಲದೆ ಲೋಕನಾಥ್ ಅವರು ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. 2016 ತೆರೆಕಂಡ ರೇ ಎಂಬ ಕನ್ನಡ ಚಿತ್ರಗಲ್ಲಿ ಕೂಡ ನಟಿಸಿದ್ದರು. ಲೋಕನಾಥ್ ಅವರು ಕನ್ನಡದ ಮತ್ತೊಬ್ಬ ನಟ ಅನಂತ್ ನಾಗ್ ಅವರ ಜೊತೆ ಕೂಡ ಬೆಳದಿಂಗಳ ಬಾಳೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರ ಡಕೋಟಾ ಎಕ್ಸ್ಪ್ರೆಸ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಕೂಡ ವಿಶೇಷ ಪಾತ್ರವನ್ನು ಮಾಡಿದ್ದರು.
ಲೋಕನಾಥ್ ಅವರ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 12 ರಿಂದ 2 ಘಂಟೆಯ ವರೆಗೆ ಸಾಮ್ಯವನ್ನು ನೀಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಂಗಳೂರಿನ ಪದ್ಮನಾಭನಗರದ ತಮ್ಮ ಮನೆಯಲ್ಲಿ ಕೊನೆ ಉಸಿರನ್ನು ಎಳೆದಿದ್ದಾರೆ ಹಿರಿಯ ನಟ ಲೋಕನಾಥ್ ಅವರು. ಲೋಕನಾಥ್ ಅವರು ಬೂತಯ್ಯನ ಮಗ ಅಯ್ಯು, ಕಿಟ್ಟು ಪುಟ್ಟು, ಡಕೋಟಾ ಎಕ್ಸ್ಪ್ರೆಸ್, ಸೇರಿದಂತೆ ಸುಮಾರು 650 ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
