ಕನ್ನಡದ ಸ್ಟಾರ್ ಆಂಕರ್ ಅನುಶ್ರೀ ದಾಖಲೆಯನ್ನು ಮುರಿದ ಲಿಟಲ್ ಆಂಕರ್ ವಂಶಿಕ, ಒಂದು ಶೋಗೆ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಅನೇಕ ಶೋಗಳ ಮೂಲಕ ಸ್ಟಾರ್‍ ಆಂಕರ್‍ ಆಗಿ ಖ್ಯಾತಿ ಪಡೆದುಕೊಂಡ ಅನುಶ್ರೀ ಬಹುತೇಕ ಕನ್ನಡದ ಸಿನೆಮಾಗಳ ಎಲ್ಲಾ ಈವೆಂಟ್ ಶೋಗಳನ್ನು ಹೋಸ್ಟ್ ಮಾಡುತ್ತಾರೆ. ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಆಂಕರ್‍ ಆಗಿಯೂ ಅನುಶ್ರೀ ಖ್ಯಾತಿ ಪಡೆದುಕೊಂಡಿದ್ದಾರೆ.  ಇದೀಗ ಲಿಟಲ್ ಆಂಕರ್‍ ಒಬ್ಬರು ಅನುಶ್ರೀ ಪಡೆಯುವ ಸಂಭಾವನೆಯ ದಾಖಲೆಯನ್ನು ಸಹ ಮುರಿದಿದ್ದಾರೆ. ಆ ಲಿಟಲ್ ಆಂಕರ್‍ ಬೇರೆ ಯಾರೂ ಅಲ್ಲ ವಂಶಿಕಾ.

ಹೌದು ಕಿರುತೆರೆಯಲ್ಲಿ ಇತ್ತೀಚಿಗಷ್ಟೆ ತುಂಬಾನೆ ಫೇಮಸ್ ಆಗಿರುವ ಪುಟಾಣಿ ಮಗು ವಂಶಿಕಾ ಅಂಜನಿ ಕಶ್ಯಪ್ ಅನುಶ್ರೀ ಪಡೆದುಕೊಳ್ಳುತ್ತಿದ್ದ ಸಂಭಾವನೆಯನ್ನು ಸಹ ಮೀರಿ ಸಂಭಾವನೆ ಪಡೆದುಕೊಂಡಿದ್ದಾರೆ. ಮಾಸ್ಟರ್‍ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಈ ಮಗು ನನ್ನಮ್ಮ ಸೂಪರ್‍ ಸ್ಟಾರ್‍ ಶೋ ಮೂಲಕ ಫೇಮಸ್ ಆದರು. ಈ ಶೋ ನಲ್ಲಿ ಯಶಸ್ವಿನಿ ಆನಂದ್ ಹಾಗೂ ವಂಶಿಕಾ ಕರುನಾಡಿನ ಜನತೆಗೆ ತುಂಬಾನೆ ಮನರಂಜನೆ ಕೊಟ್ಟಿದ್ದರು. ಅದರಲ್ಲೂ ವಂಶಿಕ ಮುದ್ದಿನ ಮಾತುಗಳು ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಜೊತೆಗೆ ಈ ಶೋನಲ್ಲಿ ಆಕೆ ವಿನ್ನರ್‍ ಆಗಿ ಮತಷ್ಟು ಮನೆಮಾತಾದರು. ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚ ಗಿಲಿ ಗಿಲಿ ಎಂಬ ಶೋನಲ್ಲೂ ಸಹ ಕಾಣಿಸಿಕೊಂಡಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಗಿಚ್ಚ ಗಿಲಿ ಗಿಲಿ ಶೋನಲ್ಲಿ ವಂಶಿಕಾ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ವಂಶಿಕಾ ಮಾತನಾಡುವ ಮಾತುಗಳಿಗೆ, ಆಕೆಯ ಅಭಿನಯಕ್ಕೆ ಶೋನಲ್ಲಿದ್ದ ಜಡ್ಜ್ ಗಳೂ ಸಹ ತುಂಬಾನೆ ಮನರಂಜನೆ ಪಡೆದುಕೊಂಡರು ಜೊತೆಗೆ ಫಿದಾ ಸಹ ಆಗಿದ್ದರು. ವಂಶಿಕಾ ಶಾಲೆಗೆ ಹೋಗುತ್ತಾ, ಈ ಶೋಗಳಲ್ಲಿ ಸಹ ಭಾಗವಹಿಸಿದ್ದರು. ಇನ್ನೂ ಈ ಶೋ ಮುಗಿದಿದೆ. ಈ ಶೋನಲ್ಲೂ ಸಹ ವಂಶಿಕಾ ಹಾಗೂ ಶಿವು ಇಬ್ಬರೂ ಸ್ಪರ್ಧಾಳುಗಳು ಜಯಗಳಿಸಿದ್ದಾರೆ. ಆಕ್ಟರ್‍ ವಿಭಾಗದಲ್ಲಿ ವಂಶಿಕಾ, ನಾನ್ ಆಕ್ಟರ್‍ ವಿಭಾಗದಲ್ಲಿ ಶಿವು ವಿನ್ನರ್‍ ಆಗಿದ್ದಾರೆ. ಇನ್ನೂ ಕಲರ್ಸ್ ಕನ್ನಡ ವಾಹಿನಿಗೆ ವಂಶಿಕಾ ಪುಟಾಣಿಯಿಂದ ಟಿ.ಆರ್‍.ಪಿ. ಏರಿದೆ ಎಂದರೇ ತಪ್ಪಾಗಲಾರದು ಎನ್ನಬಹುದಾಗಿದೆ.

ಇನ್ನೂ ವಂಶಿಕಾ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫೇಮಸ್ ಸಹ ಆಗಿದ್ದಾರೆ. ಆಕೆಯ ಫ್ಯಾನ್ ಪೇಜ್ ಗಳೂ ಸಹ ಹುಟ್ಟಿಕೊಂಡಿವೆ. ಇದೀಗ ಕೆಲವೊಂದು ಮೂಲಗಳ ಪ್ರಕಾರ ವಂಶಿಕಾ ರಿಯಾಲಿಟಿ ಶೋ ಒಂದನ್ನು ನಿರೂಪಣೆ ಮಾಡಲಿದ್ದಾರಂತೆ. ನನ್ನಮ್ಮ ಸೂಪರ್‍ ಸ್ಟಾರ್‍ ಸೀಸನ್-2 ಎಂಬ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರಂತೆ. ಈ ಶೋ ಗೆ ವಂಶಿಕಾ ಅನುಶ್ರೀ ಪಡೆಯುತ್ತಿದ್ದ ಸಂಭಾವನೆಯನ್ನೂ ಸಹ ಮೀರಿ ಪಡೆದುಕೊಂಡಿದ್ದಾರಂತೆ. ಒಂದು ಎಪಿಸೋಡ್ ಗೆ ಸುಮಾರು 1.8 ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Previous articleಕೇದಾರನಾಥಗೆ ಹೋಗಿದ್ದಾಗ ಜಾನ್ವಿ ಹಾಗೂ ಸಾರಾ ಗೆ ಸಾವಿನ ಅನುಭವ ಆಗಿತ್ತಂತೆ, ಏನಾಗಿತ್ತು ಗೊತ್ತಾ?
Next articleರಮ್ಯಾ ಅಭಿಮಾನಿಗಳಿಗೆ ವಿಜಯದಶಮಿಯಂದು ಗುಡ್ ನ್ಯೂಸ್, ನಟಿಯಾಗಿ ಎಂಟ್ರಿ…!