Film News

ಲೈಗರ್ ಸಿನೆಮಾ ಬಿಡುಗಡೆ ದಿನಾಂಕ ಘೋಷಣೆ

ಹೈದರಾಬಾದ್: ಬಹುಬೇಡಿಕೆ ನಟ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರಲಿರುವ ಲೈಗರ್ ಚಿತ್ರ ಬಿಡುಗಡೆ ದಿನಾಂಕ ಚಿತ್ರತಂಡ ಬಹಿರಂಗಪಡಿಸಿದೆ. ಸೆಪ್ಟೆಂಬರ್ 9, 2021 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಈಗಾಗಲೇ ಸಿನಿರಂಗದಲ್ಲಿ ಸಂಚಲನ ಮೂಡಿಸಿರುವ ಲೈಗರ್ ಚಿತ್ರ ಮೊದಲ ಬಾರಿಗೆ ವಿಜಯ್ ದೇವರಕೊಂಡ ನಟಿಸುತ್ತಿರುವ ಹೈ ವೋಲ್ಟೇಜ್ ಚಿತ್ರವಾಗಿದೆ. ಚಿತ್ರದ ಘೊಷಣೆಯಾದ 1 ವರ್ಷದ ಬಳಿಕ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಬಿಡುವಿಲ್ಲದೇ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಧಿಕೃತವಾಗಿ ಚಿತ್ರವನ್ನು ಸೆಪ್ಟೆಂಬರ್ ೯ ರಂದು ಅದ್ದೂರಿಯಾಗಿ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ ಚಿತ್ರತಂಡ.

ಇನ್ನೂ ಮೊದಲ ಬಾರಿಗೆ ಪೂರಿ ಜಗನ್ನಾಥ್ ಪಾನ್ ಇಂಡಿಯಾ ಸಿನೆಮಾ ನಿರ್ದೇಶನ ಮಾಡುತ್ತಿದ್ದು, ಬಿಗ್ ಬಜೆಟ್ ಸಿನೆಮಾ ಇದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಲೈಗರ್ ಸಿನೆಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ಮತಷ್ಟು ಕ್ರೇಜ್ ಕ್ರಿಯೇಟ್ ಮಾಡಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೊಷಣೆ ಮಾಡುವ ಮೂಲಕ ಮತಷ್ಟು ಕ್ರೇಜ್ ಹುಟ್ಟಿಸಿದೆ.

ಇನ್ನೂ ಚಿತ್ರದ ಬಜೆಟ್ ವಿಷಯಕ್ಕೆ ಬಂದರೇ ನಟ ವಿಜಯ್ ದೇವರಕೊಂಡ ಸಿನಿ ಲೈಫ್ ನಲ್ಲಿ ಇಲ್ಲಿಯವರೆಗೂ ಇರದಂತಹ ಬಜೆಟ್ ಚಿತ್ರ ಇದಾಗಲಿದೆಯಂತೆ. ಇನ್ನೂ ಚಿತ್ರವನ್ನು ತ್ವರಿತವಾಗಿ ಮುಗಿಸುವ ನಿಟ್ಟಿನಲ್ಲಿ ಬಜೆಟ್ ಸಹ ಜಾಸ್ತಿಯಾಗಿದೆ ಎನ್ನುವ ರೂಮರ್‍ಸ್ ಸಹ ಬರುತ್ತಿದೆ. ಈಗಾಗಲೇ ಸುಮಾರು 110 ಕೋಟಿವರೆಗೂ ಚಿತ್ರಕ್ಕಾಗಿ ಖರ್ಚಾಗಿದೆ ಎನ್ನಲಾಗುತ್ತಿತ್ತು, ಚಿತ್ರ ಸಿನಿರಸಿಕರಲ್ಲಿ ಕಿಕ್ ಹೆಚ್ಚಿಸಲಿದೆ ಎನ್ನಲಾಗುತ್ತಿದೆ.

Trending

To Top