News

2018 ಸಾಲಿನಲ್ಲಿ ನಮ್ಮ ಚಿತ್ರರಂಗ ಕಣ್ಣೀರಿಟ್ಟ ಭಾವುಕ ಕ್ಷಣಗಳು ಇದೆ ನೋಡಿ! ಬೇಸರದ ವಿಷ್ಯ ಕಣ್ರೀ

legends111

ಇವತ್ತು 2018 ಸಾಲಿನ ಕೊನೆಯ ದಿನ! ಒಂದು ಕಡೆ ಈ ವರ್ಷ ಕನ್ನಡದಲ್ಲಿ ಅತೀ ಹೆಚ್ಚು ಹಿಟ್ ಸಿನಿಮಾಗಳು ಬಂದಿವೆ, ಇನ್ನೊಂದೆಡೆ ಈ ವರ್ಷ ನಾವು ಕನ್ನಡದ ಲೆಜೆಂಡ್ ಗಳನ್ನೂ ಕಳೆದು ಕೊಂಡಿದ್ದೇವೆ. ನಮ್ಮ ಕನ್ನಡ ನಟರು ಹಾಗು ಕನ್ನಡಿಗರು ತೀರಿಕೊಂಡ ಲೆಜೆಂಡ್ ಗಳಿಗೆ ಕಣ್ಣೀರಿಟ್ಟಿದ್ದಾರೆ. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ. ನಮ್ಮ ಕನ್ನಡದ ಲೆಜೆಂಡ್ ನಿರ್ದೇಶಕ ಕಾಶೀನಾಥ್ ಅವರು ನಮನ್ನೆಲ್ಲ ಅಗಲಿದ್ದಾರೆ. ಇದೆ ವರ್ಷ january ತಿಂಗಳಲ್ಲಿ ಕಾಶೀನಾಥ್ ಅವರು ತಮ್ಮ 67 ವಯಸ್ಸಿನಲ್ಲಿ ವಿಧಿ ವಶರಾಗಿದ್ದರು. ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಸುಮಾರು 30 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ನಿಧನದಿಂದ ಇಡೀ ಚಿತ್ರ ರಂಗವೇ ಶಾಕ್ ನಲ್ಲಿ ಇತ್ತು. ಇದಲ್ಲದೆ ತಮ್ಮ ಗುರುಗಳ ನಿಧನದ ಸುದ್ದಿ ಕೇಳಿ ಉಪೇಂದ್ರ ಬಹಳ ಭಾವುಕರಾಗಿದ್ದರು.
ಕನ್ನಡ ಚಿತ್ರ ರಂಗದ ಮತ್ತೊಬ್ಬ ಮಹಾನ್ ಕಲಾವಿದ ಚಂದ್ರಶೇಖರ್ ಅವರು ಇದೆ ವರ್ಷ january ತಿಂಗಳಲ್ಲಿ ವಿಧಿವಶರಾಗಿದ್ದರು. ಚಂದ್ರಶೇಖರ್ ಅವರು ಎಡಕಲ್ಲು ಗುಡ್ಡದ ಮೇಲೆ, ರಾಜ ನನ್ನ ರಾಜ, ಪಡುವಾರಳ್ಳಿ ಪಾಂಡವರು, ಕೆಂಪಮ್ಮ ಕೋರ್ಟ್ ಕೇಸ್ ಹಾಗು ಇನ್ನು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಚಂದ್ರಶೇಖರ್ ಅವರು ದೂರದ ಕೆನಡಾ ದೇಶದಲ್ಲಿ ಹೃದಯಾಘಾತದಿಂದ ತೀರಿಕೊಂಡಿದ್ದರು. ಇವರ ಸಾವಿಗೆ ಇಡೀ ಚಿತ್ರರಂಗವೇ ಕಣ್ಣೀರಿಟ್ಟಿತ್ತು. ಫೆಬ್ರವರಿ ತಿಂಗಳಲ್ಲಿ ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ನಿಧನರಾಗಿದ್ದರು. ಶ್ರೀದೇವಿ ಅವರು ಕನ್ನಡದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಏಪ್ರಿಲ್ ತಿಂಗಳಲ್ಲಿ ಕನ್ನಡದ ಮತ್ತೊಬ್ಬ ಮಹಾನ್ ನಿರ್ದೇಶಕ CV ರಾಜೇಂದ್ರನ್ ಅವರು ನಿಧನರಾಗಿದ್ದರು. CV ರಾಜೇಂದ್ರನ್ ಅವರು ಕನ್ನಡಲ್ಲಿ ತ್ರಿಮೂರ್ತಿ, ಕಿಟ್ಟು ಪುಟ್ಟು , ಸಿಂಗಪೂರಿನಲ್ಲಿ ರಾಜ ಕುಳ್ಳ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ನಮ್ಮ ಕನ್ನಡದ ಮತೊಬ್ಬ ಹೆಸರಾಂತ ನಿರ್ದೇಶಕ PN ಸತ್ಯ ಅವರು ಇದೆ ವರ್ಷ ಮೇ ತಿಂಗಳಲ್ಲಿ ವಿಧಿವಶ ರಾಗಿದ್ದರು. PN ಸತ್ಯ ಅವರು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹಿತ. ದರ್ಶನ್ ಅವರ ದಾಸ, ಹಾಗು ಮೆಜೆಸ್ಟಿಕ್ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಕನ್ನಡ ಹೆಸರಾಂತ ಸಾಹಿತಿ M. N. Vyasa Rao ಅವರು, ನಿರ್ಮಾಪಕರಾದ ಭಕ್ತವತ್ಸಲ ಅವರು, ಖ್ಯಾತ ನಂತರದ Sadashiva ಬ್ರಹ್ಮಾವರ್ ಅವರು ಇದೆ ವರ್ಷ ತೀರಿಕೊಂಡಿದ್ದಾರೆ. Sadashiva ಬ್ರಹ್ಮಾವರ್ ಅವರು ಬೆಟ್ಟದ ಹೂವು, ಏಳು ಸುತ್ತಿನ ಕೋಟೆ, ಹಾಗು ಬಣ್ಣದ ಗೆಜ್ಜೆ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಮತ್ತೊಬ್ಬ ಖ್ಯಾತ ನಿರ್ದೇಶಕರಾದ M S ರಾಜಶೇಖರ್ ಅವರು ಇದೆ ವರ್ಷ ಅಕ್ಟೋಬರ್ ತಿಂಗಳಲ್ಲಿ ತೀರಿಕೊಂಡಿದ್ದರು. M S ರಾಜಶೇಖರ್ ಅವರು ಧ್ರುವ ತಾರೆ, ಡಕೋಟಾ ಎಕ್ಸ್ಪ್ರೆಸ್ ಹಾಗು ಹಲವಾರು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕರಾಗಿದ್ದರು.
ನವೆಂಬರ್ 24 ರಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ್ನ, ಕರುನಾಡ ಕರ್ಣ, ಮಂಡ್ಯದ ಗಂಡು , ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮನ್ನೆಲ್ಲ ಆಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅಂಬರೀಷ್ ಅವರು ತಮ್ಮ 66 ನೇ ವಯಸಿನಲ್ಲಿ ನಿಧನರಾಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯಿತೋ, ಅಂಬರೀಷ್ ಅವರ ಕೊನೆಯ ಚಿತ್ರವಾಗಿತ್ತು. ಈ ಚಿತ್ರವನ್ನು ಕಿಚ್ಚ ಸುದೀಪ್ ಅವರು ನಿರ್ಮಾಣ ಮಾಡಿದ್ದರು. ಅಂಬರೀಷ್ ಅವರು ವಿಧಿವಶರಾದ ಸುದ್ದಿ ಕೇಳಿ ಇಡೀ ಚಿತ್ರ ರಂಗವೇ ಶಾಕ್ ನಲ್ಲಿ ಇತ್ತು. ಅಂಬಿ ಅವರ ಅಂತ್ಯ ಸಂಸ್ಕಾರಕ್ಕೆ ಇಡೀ ಭಾರತ ದೇಶದ ಎಲ್ಲಾ ಖ್ಯಾತ ನಟರು ಕೂಡ ಬಂದಿದ್ದರು.

Trending

To Top