Film News

ಕಾರ್ಗಿಲ್ ಯುದ್ದಭೂಮಿಯಲ್ಲಿ ಅಮೀರ್ ಖಾನ್ ಶೂಟಿಂಗ್!

ಮುಂಬೈ: ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರದ ಶೂಟಿಂಗ್ ಗಾಗಿ ಕಾರ್ಗಿಲ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಈ ಹಿಂದೆ ಕಾರ್ಗಿಲ್ ನಲ್ಲಿ ನಡೆದ ಯುದ್ದದ ಕೆಲವೊಂದು ಸನ್ನಿವೇಶಗಳಿದ್ದು, ಇದೀಗ ಶೂಟಿಂಗ್ ಗಾಗಿ ಕಾರ್ಗಿಲ್ ಗೆ ತೆರಳಲಿದೆ ಚಿತ್ರತಂಡ.

ಕಳೆದ 1999 ರಲ್ಲಿ ಭಾರತ-ಪಾಕಿಸ್ಥಾನದ ನಡುವೆ ನಡೆದ ಭೀಕರ ಯುದ್ದಕ್ಕೆ ಸಾಕ್ಷಿಯಾದ ಸ್ಥಳವೇ ಕಾರ್ಗಿಲ್. ಈ ಯುದ್ದದಲ್ಲಿ ಭಾರತ ಸೇನೆ ಪಾಕಿಸ್ಥಾನ ಸೈನ್ಯವನ್ನು ಸೆದೆಬಡೆದು ಹಿಮ್ಮೆಟ್ಟಿಸಿದರು. ಇದೀಗ ಅಮೀರ್ ಖಾನ್ ಶೀಘ್ರದಲ್ಲೇ ಕಾರ್ಗಿಲ್ ಯುದ್ದ ಭೂಮಿಯಲ್ಲಿ ಶೂಟಿಂಗ್‌ಗಾಗಿ ತೆರಳಲಿದ್ದಾರೆ. ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನೆಮಾದಲ್ಲಿ ಕೆಲವೊಂದು ಕಾರ್ಗಿಲ್ ಯುದ್ದದ ಸನ್ನಿವೇಶಗಳಿವೆಯಂತೆ. ಇದಕ್ಕಾಗಿ ಚಿತ್ರತಂಡ ಕಾರ್ಗಿಲ್‌ಗೆ ತೆರಳಲಿದೆ ಎನ್ನಲಾಗಿದೆ.

ಸದ್ಯ ಕಾರ್ಗಿಲ್ ಪ್ರದೇಶದಲ್ಲಿ ಅತಿಯಾಗಿ ಮಂಜು ಸುರಿಯುತ್ತಿದ್ದು, ಕಡಿಮೆಯಾದ ಕೂಡಲೇ ಚಿತ್ರತಂಡ ಕಾರ್ಗಿಲ್ ನತ್ತ ಪ್ರಯಾಣ ಬೆಳೆಸಲಿದೆಯಂತೆ. ಇನ್ನೂ ಇಲ್ಲಿಯೇ ಲಾಲ್ ಸಿಂಗ್ ಛಡ್ಡಾ ಕೊನೆಯ ಹಂತದ ಶೂಟಿಂಗ್ ನಡೆಯಲಿದೆ. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುನ್ನುಗ್ಗಲಿದೆ ಚಿತ್ರತಂಡ.

ಇನ್ನೂ ಈ ಚಿತ್ರವನ್ನು ಫಾರೆಸ್ಟ್ ಗಂಪ್ ಎಂಬ ಕಾದಂಬರಿಯನ್ನು ಆಧರಿಸಿ ತೆಗೆಯಲಾಗುತ್ತಿದ್ದು, ಈಗಾಗಲೇ ಇದೇ ಹೆಸರಿನಲ್ಲಿ ಹಾಲಿವುಡ್‌ನಲ್ಲಿ ಸಿನೆಮಾವೊಂದು ಬಿಡುಗಡೆಯಾಗಿದ್ದು, ಆಸ್ಕರ್ ಪ್ರಶಸ್ತಿಯನ್ನು ಸಹ ಗಳಿಸಿತ್ತು. ಈ ಚಿತ್ರದಲ್ಲಿ ಅಮೀರ್‌ಖಾನ್ ಹಾಗೂ ಕರೀನಾ ಕಪೂರ್ ನಟಿಸಿದ್ದು, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಹ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

Trending

To Top