Cinema

ಯಾರು ಇಲ್ಲದ ಬೆಟ್ಟ ಹತ್ತಿ ಸಕತ್ ಎಂಜಾಯ್ ಮಾಡಿದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ,ಚಂದನ್, ಕವಿತಾ,ಇತರರು

ಕರೊನಾ ಸೋಂಕು ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದ್ದರೂ ಲಾಕ್ ಡೌನ್ ಸಂಪೂರ್ಣವಾಗಿ ಸಡಿಲಗೊಂಡಿದೆ. ಎಲ್ಲರೂ ಕರೊನಾದ ಜೊತೆಯೇ ಜೀವನಕ್ಕೆ ಅಡ್ಜಸ್ಟ್ ಆಗುತ್ತಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ಜನರು ಮತ್ತು ಸೆಲೆಬ್ರಿಟಿಗಳು ಹೊರಬರುತ್ತಿದ್ದಾರೆ. ಇದೀಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್, ನಟಿ ನೇಹಾ ರಾಮಕೃಷ್ಣ, ನಟಿ ಕವಿತಾ ಗೌಡ, ನಟಿ ರಶ್ಮಿ ಪ್ರಭಾಕರ್ ನಾಲ್ವರು ಟ್ರೆಕಿಂಗ್ ಹೋಗಿದ್ದಾರೆ.ಟ್ರೆಕಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈ#ರಲ್ ಆಗಿದ್ದು ಜೊತೆಗೆ ವಿವಾ#ದಕ್ಕೆ ಕಾರಣವಾಗಿದೆ.
ಪ್ರವಾಸಿ ಸ್ಥಳಗಳನ್ನು ರಕ್ಷಿಸುವುದು ಮತ್ತು ಪ್ರವಾಸಿ ಕ್ಷೇತ್ರದ ಪವಿತ್ರತೆಯನ್ನು ಕಾಪಾಡಿಕೊಳ್ಳುವುದು ಸಾರ್ವಜನಿಕರಾಗಿ ನಮ್ಮೆಲ್ಲರ ಕರ್ತವ್ಯ. ನಮ್ಮ ಸೆಲೆಬ್ರಿಟಿಗಳು ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ ಜಾಗೃತಿ ಮೂಡಿಸಬೇಕಾದ ಸೆಲೆಬ್ರಿಟಿಗಳೇ ಸ್ಥಳದಲ್ಲಿ ಎಂಜಾಯ್ ಮಾಡಿ, ಅಲ್ಲಿನ ಪವಿತ್ರತೆಯನ್ನು ಕಾಪಾಡದೆ ಇರುವ ಘಟನೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕಲಾವಿದರಿಂದ ನಡೆದಿದೆ. ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತುದಿಯಲ್ಲಿರುವ ತೀರ್ಥ ಕಂಬದ ಸ್ಥಳವನ್ನು ಅಪವಿತ್ರ ಮಾಡಿರುವ ಆರೋಪ ಕಿರುತೆರೆ ನಟ ಚಂದನ್ ಮತ್ತು ನಟಿ ಕವಿತಾ ಗೌಡ ಮೇಲೆ ಬಂದಿದೆ.
ಈ ಕಲಾವಿದರು ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗಾಗಿ ತೆರಳಿದ್ದಾರೆ. ಅಲ್ಲಿನ ತೀರ್ಥ ಕಂಬದ ಬಳಿ ಶೂ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ತೀರ್ಥ ಕಂಬದ ಮುಂದೆ ನಿಂತಿರುವ ಫೋಟೋಗಳನ್ನು ನಟ ಚಂದನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ದೊಡ್ಡದೊಂದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಭಕ್ತರಿಗೆ ಬೇಸರ ತರಿಸಿದೆ. ದಕ್ಷಿಣಕಾಶಿ ಪುರಾಣ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ. ಪ್ರತಿವರ್ಷ ಜನವರಿ 15ರ ಮಕರ ಸಂಕ್ರಾಂತಿಯ ದಿನ ಈ ತೀರ್ಥ ಕಂಬದಲ್ಲಿ ಉದ್ಭವಾದ ಜಲದಿಂದಲೇ ಪ್ರಸಿದ್ಧ ಗಿರಿಜಾ ಕಲ್ಯಾಣ ನೆರವೇರುತ್ತದೆ. ತೀರ್ಥೋದ್ಭವವಾಗುವ ಸ್ಥಳ ಇವರು ಶೂ ಧರಿಸಿ ಪೋಸ್ ನೀಡಿರುವುದರಿಂದ ಈಗ ಅಪವಿತ್ರವಾಗಿದೆ. ಪವಾಡದ ಹಾಗೆ ಗಂಗೆ ಉತ್ಪತ್ತಿಯಾಗುವ ಶಿವಗಂಗೆ ಕ್ಷೇತ್ರದಲ್ಲಿ ಇವರಿಂದ ಅಪಚಾರವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಇದೀಗ ಇವರಿಬ್ಬರ ವಿರುದ್ಧ ವಿರುದ್ಧ ಜನರು ಟೀಕೆ ಮಾಡುತ್ತಿದ್ದಾರೆ. ದೇವರ ಮಹಿಮೆ ತಿಳಿಯದೆ ಶೂ ಧರಿಸಿ ಫೋಟೋ ತೆಗೆಸಿಕೊಂಡಿರುವ ಇವರ ವಿರುಧ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ನಟ ನಟಿಯ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.ಕರೊನಾ ಸೋಂಕು ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದ್ದರೂ ಲಾಕ್ ಡೌನ್ ಸಂಪೂರ್ಣವಾಗಿ ಸಡಿಲಗೊಂಡಿದೆ. ಎಲ್ಲರೂ ಕರೊನಾದ ಜೊತೆಯೇ ಜೀವನಕ್ಕೆ ಅಡ್ಜಸ್ಟ್ ಆಗುತ್ತಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ಜನರು ಮತ್ತು ಸೆಲೆಬ್ರಿಟಿಗಳು ಹೊರಬರುತ್ತಿದ್ದಾರೆ. ಇದೀಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್, ನಟಿ ನೇಹಾ ರಾಮಕೃಷ್ಣ, ನಟಿ ಕವಿತಾ ಗೌಡ, ನಟಿ ರಶ್ಮಿ ಪ್ರಭಾಕರ್ ನಾಲ್ವರು ಟ್ರೆಕಿಂಗ್ ಹೋಗಿದ್ದಾರೆ.ಟ್ರೆಕಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈ#ರಲ್ ಆಗಿದ್ದು ಜೊತೆಗೆ ವಿವಾ#ದಕ್ಕೆ ಕಾರಣವಾಗಿದೆ.

Trending

To Top