ಲೇಡಿ ಸೂಪರ್ ಸ್ಟಾರ್ ನಯನತಾರಾ ಬಳಿಯಿದೆಯಂತೆ ಪ್ರವೈಟ್ ಜೆಟ್..! ಶಾಕ್ ಆದ ನಟಿಯರು..!

ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯರಲ್ಲಿ ಕಾಲಿವುಡ್ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ನಯನತಾರಾ ಹಾಗೂ ವಿಘ್ನೇಶ್ ಮದುವೆಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರಲ್ಲಿ ನಯನತಾರಾ ಸಹ ಒಬ್ಬರಾಗಿದ್ದು, ಇದೀಗ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ನಲ್ಲಿ ಶಾರುಖ್ ಜೊತೆ ನಟಿಸಲು ಬರೊಬ್ಬರಿ 5 ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ನಯನ್ ಹಾಗೂ ವಿಕ್ಕಿ ರವರ ಆಸ್ತಿ ಬಗ್ಗೆ ಚರ್ಚೆಗಳು ಶುರುವಾಗಿದೆ.

ಸೌತ್ ಸಿನಿರಂಗದಲ್ಲಿ ನಟಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಚಾರ ಇತ್ತೀಚಿಗಷ್ಟೆ ಚರ್ಚೆಗೆ ಕಾರಣವಾಗಿತ್ತು. ಮೂರು ಕೋಟಿಯಿಂದ ಐದು ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರಂತೆ. ಸದ್ಯ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸಲಿರುವ ಸಿನೆಮಾಗೆ ಬರೊಬ್ಬರಿ ಐದು ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿಬರುತ್ತಿವೆ. ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆಕೆಯ ಆದಾಯ ಸಹ ಹೆಚ್ಚಾಗಿದೆ. ಇನ್ನೂ ಇತ್ತೀಚಿಗೆ ದೊಡ್ಡ ಮಿಡಿಯಾ ಸಂಸ್ಥೆಯೊಂದು ವಿಘ್ನೇಶ್ ಹಾಗೂ ಶೀವನ್ ಆಸ್ತಿಯ ವಿವರಗಳ ಬಗ್ಗೆ ಕಥನವೊಂದನ್ನು ಬರೆದಿತ್ತು. ಅದರಂತೆ ನಯನತಾರಾ ರವರೇ ವಿಘ್ನೇಶ್ ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರಂತೆ. ಇವರಿಬ್ಬರ ಒಟ್ಟು ಆಸ್ತಿ ಸುಮಾರು 270 ಕೋಟಿಯವರೆಗೂ ಇದೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೇ ನಯನತಾರಾ ತುಂಬಾ ದುಬಾರಿ ಕಾರುಗಳು ಇದೆ. ಜೊತೆಗೆ ಸೌತ್ ಇಂಡಸ್ಟ್ರಿಯಲ್ಲಿ ಯಾವುದೇ ನಟಿ ಹೊಂದಿರದ ದೊಡ್ಡ ಸಂಪತ್ತನ್ನು ನಟಿ ನಯನ್ ಹೊಂದಿದ್ದಾರೆ. ಆಕೆ ಪ್ರವೈಟ್ ಜೆಟ್ ಅನ್ನುಸಹ ಹೊಂದಿದ್ದಾರಂತೆ. ನಟಿ ನಯನತಾರಾ ನಿರಂತರವಾಗಿ ಕೇರಳ ಹಾಗೂ ಹೈದರಾಬಾದ್ ಗೆ ಸಂಚಾರ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ನಯನತಾರಾ ಪ್ರವೈಟ್ ಜೆಟ್ ಅನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಯನತಾರಾ ಜೆಟ್ ಹೊಂದಿರುವ ಬಗ್ಗೆ ಈ ಹಿಂದೆ ಚರ್ಚೆಯಾಗಿರಲಿಲ್ಲ. ಈ ಕುರಿತು ಅನೇಕರಿಗೆ ತಿಳಿದಿದ್ದರೂ ಸಹ ಆ ವೇಳೆ ಈ ಕುರಿತು ಚರ್ಚೆ ಸಹ ಆಗಿಲ್ಲ. ಆದರೆ ಇದೀಗ ದೊಡ್ಡ ಸುದ್ದಿ ಮಾದ್ಯಮದಲ್ಲಿ ಪ್ರಕಟವಾದ ಬಳಿಕ ನಯನತಾರಾ ಜೆಟ್ ಹೊಂದಿರುವ ಬಗ್ಗೆ ದೊಡ್ಡ ಚರ್ಚೆಗಳು ಶುರುವಾಗಿದೆ.

ಸದ್ಯ ನಯನತಾರಾ ಪ್ರವೈಟ್ ಜೆಟ್ ಹೊಂದಿರುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದು, ಬಾಲಿವುಡ್ ನಟಿಯರೂ ಸಹ ಶಾಕ್ ಆಗಿದ್ದಾರಂತೆ. ಬಾಲಿವುಡ್ ನಲ್ಲಿ ಸ್ಟಾರ್‍ ನಟರಾದ ಅಮಿತಾಬ್ ಬಚ್ಚನ್ ಹಾಗೂ ಒಂದೆರಡು ಸ್ಟಾರ್‍ ನಟರ ಬಳಿ ಮಾತ್ರವೇ ಇದೆಯಂತೆ. ಅದೇ ರೀತಿ ಟಾಲಿವುಡ್ ನ ಖ್ಯಾತ ನಟ ಅಕ್ಕಿನೇನಿ ಫ್ಯಾಮಿಲಿಯ ಜೊತೆಗೆ ಕೆಲವರ ಬಳಿ ಮಾತ್ರ ಪ್ರವೈಟ್ ಜೆಟ್ ಹೊಂದಿದ್ದಾರೆ. ಅಂತಹುದರಲ್ಲಿ ನಟಿ ನಯನತಾರಾ ಪ್ರವೈಟ್ ಜೆಟ್ ಹೊಂದಿದ್ದು, ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಸದ್ಯ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಚರ್ಚೆಗಳು ಶುರುವಾಗಿದೆ.

Previous articleಬೆಡ್ ಮೇಲೆ ಮಲಗಿ ಹಾಟ್ ಪೋಸ್ ಕೊಟ್ಟ ರುಹಾನಿ ಶರ್ಮಾ… ಫಿದಾ ಆದ ಅಭಿಮಾನಿಗಳು..!
Next articleಪುಷ್ಪಾ-2 ಸಿನೆಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ಮಧ್ಯದಲ್ಲೆ ಸಾಯಿಸಿ, ಫಾರಿನ್ ಬ್ಯೂಟಿ ಎಂಟ್ರಿಯಂತೆ…..!