ಯಂಗ್ ನಟಿ ಮಾಳವಿಕಾಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸ್ಟಾರ್ ನಟಿ ನಯನತಾರಾ, ಆಕೆ ಕೌಂಟರ್ ಕೊಡಲು ಕಾರಣವೇನು?

ಸಿನಿರಂಗದಲ್ಲಿ ಆಗಾಗ ಹೇಳಿಕೆಗಳು, ಅದಕ್ಕೆ ಕೌಂಟರ್‍ ಗಳು ನಡೆಯುತ್ತಲೇ ಇರುತ್ತವೆ. ಇದೀಗ ಸೌತ್ ಸಿನಿರಂಗದ ಸ್ಟಾರ್‍ ನಟಿ ನಯನತಾರಾ ಯುವನಟಿ ಮಾಳವಿಕಾ ಮೋಹನನ್ ಗೆ ಕೌಂಟರ್‍ ಕೊಟ್ಟಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ನಯನತಾರಾ ಕುರಿತಂತೆ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದರು. ಸಿನೆಮಾದ ದೃಶ್ಯವೊಂದಕ್ಕೆ ಸಂಬಂಧಿಸಿದಂತೆ ಮಾಳವಿಕಾ ಕಾಮೆಂಟ್ ಮಾಡಿದ್ದರು. ಇದೀಗ ಅದಕ್ಕೆ ನಯನತಾರಾ ಸಹ ಕೌಂಟರ್‍ ಕೊಟ್ಟಿದ್ದಾರೆ.

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡ ನಯನತಾರಾ ಮದುವೆಯಾದರೂ ಸಹ ಅತ್ಯಧಿಕ ಸಂಭಾವನೆ ಪಡೆದುಕೊಳ್ಳುತ್ತಾ ಬಿಗ್ ಬಜೆಟ್ ಸಿನೆಮಾಗಳ ಮೂಲಕ ಬ್ಯುಸಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಕನೆಕ್ಟ್ ಎಂಬ ಸಿನೆಮಾದ ಮೂಲಕ ತೆರೆಗೆ ಬಂದಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿ ನಡೆದಿತ್ತು. ಈ ಹಾದಿಯಲ್ಲೇ ಆಕೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಆಕೆಯ ಬಗ್ಗೆ ಎದುರಾದ ಕೆಲವೊಂದು ವಿಮರ್ಶೆಗಳಿಗೆ ಕೌಂಟರ್‍ ಕೊಟ್ಟಿದ್ದಾರೆ. ಈ ಹಾದಿಯಲ್ಲೇ ಮಾಳವಿಕ ಮೋಹನನ್ ನೀಡಿದ ಹೇಳಿಕೆಗಳಿಗೂ ನಯನತಾರಾ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಮಾಳವಿಕಾ ಮಾತನಾಡುತ್ತಾ, ಒಬ್ಬ ಮಹಿಳಾ ಸೂಪರ್‍ ಸ್ಟಾರ್‍ ಮುಖಕ್ಕೆ ತುಂಬಾ ಮೇಕಪ್ ಮಾಡಿಕೊಂಡು ಆಸ್ಪತ್ರೆಯ ಸನ್ನಿವೇಶದಲ್ಲಿ  ಕಾಣಿಸಿಕೊಂಡರು. ಅಂತಹ ಎಮೋಷನಲ್ ದೃಶ್ಯದಲ್ಲೂ ಸಹ ಮೇಕಪ್ ಹಾಕಿಕೊಂಡು ಹೇಗೆ ನಟಿಸುತ್ತಾರೋ ಎಂಬುದು ಅರ್ಥವಾಗುತ್ತಿಲ್ಲ ಎಂದು ನಯನತಾರಾ ರವರ ಹೆಸರ ಹೇಳದೇನೇ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದರು. ಇದೇ ವಿಚಾರಕ್ಕೆ ನಯನತಾರಾ ಕೌಂಟರ್‍ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ನಯನತಾರಾ ಆ ಹಿರೋಯಿನ್ ಸಂದರ್ಶನವನ್ನು ನೋಡಿದ್ದೇನೆ. ಆ ಮಾತುಗಳನ್ನು ಕೇಳಿದಾಗ ಆಕೆ ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ಅರ್ಥವಾಗಿದೆ. ನಾನು ನಿರ್ದೇಶಕರು ಹೇಳಿದಂಗೆ ಮಾಡಿದ್ದೇನೆ. ಪ್ರೇಕ್ಷಕರನ್ನು ರಂಜಿಸಲು ಸಿನೆಮಾಗಳನ್ನು ಮಾಡುತ್ತಿದ್ದಾರೆ, ಒಂದು ಆಸ್ಪತ್ರೆಯಲ್ಲಿ ನಾನು ಮೇಕಪ್ ನೊಂದಿಗೆ ನನ್ನ ಜಡೆ, ಉಗುರುಗಳು ಸಹ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಮಾತ್ರಕ್ಕೆ ಯಾರೂ ಉದ್ದೇಶಪೂರ್ವಕವಾಗಿ ಗಡಿಬಿಡಿಯಾಗಿ ಕಾಣಿಸಿಕೊಳ್ಳುವುದು ಅವಸರವೇ, ರಿಯಾಲಿಟಿ ಸಿನೆಮಾಗೂ ಹಾಗೂ ಕಮರ್ಷಿಯಲ್ ಸಿನೆಮಾಗಳ ನಡುವೆ ತುಂಬಾನೆ ವ್ಯತ್ಯಾಸ ಇರುತ್ತದೆ. ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸುವಾಗ ನಾವು ಪ್ರೇಕ್ಷಕರನ್ನು ಆಕರ್ಷಣೆ ಮಾಡಬೇಕು. ಆ ಸಿನೆಮಾದಲ್ಲಿ ನನ್ನ ಪಾತ್ರ ಡಿಮ್ಯಾಂಡ್ ಮಾಡಿದ ಕಾರಣದಿಂದಾಗಿ ಆ ರೀತಿ ಕಾಣಿಸಿಕೊಂಡಿದ್ದೇನೆ ಅದರಲ್ಲೂ ನಿರ್ದೇಶಕರ ಸೂಚನೆಯಂತೆ ನಟಿಸಿದ್ದೇನೆ. ಸಿನೆಮಾ ಡಿಮ್ಯಾಂಡ್ ಮಾಡಿದಾಗ ಮೇಕಪ್ ಇಲ್ಲದೇ ಸಹ ನಾನು ನಟಿಸಿದ ಸಂದರ್ಭಗಳೂ ಸಹ ಇದೆ ಎಂದಿದ್ದಾರೆ.

ನಾನು ಸಿನೆಮಾ ಮಾಡುವುದು ಪ್ರೇಕ್ಷಕರಿಗಾಗಿ ಮಾತ್ರ. ವಿಮರ್ಶೆ ಮಾಡುವವರಿಗಾಗಿ ಆಗಲೀ ಅಥವಾ, ರಿವ್ಯೂ ಬರೆಯುವವರಿಗಾಗಲಿ ಅಲ್ಲ. ನನ್ನನ್ನು ಇಷ್ಟಪಡದೇ ಇರುವವರು ನನ್ನ ಬಗ್ಗೆ ಮಾಡುವ ಕಾಮೆಂಟ್ ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಬೇರೆಯವರನ್ನು ವಿಮರ್ಶೆ ಮಾಡುವಂತಹ ಬಿಡುವು ಸಮಯ ಇರಬಹುದು. ಆದರೆ ನನಗೆ ಖಾಲಿ ಸಮಯವಿಲ್ಲ. ಅಂತಹ ಕಾಮೆಂಟ್ ಗಳ ಬಗ್ಗೆ ತಲೆಕಡೆಸಿಕೊಳ್ಳುವಷ್ಟು ನನಗೆ ಸಮಯ ಇಲ್ಲ ಎಂದು ಹೇಳಿದ್ದಾರೆ. ಸದ್ಯ ನಯನತಾರಾ ಈ ಹೇಳಿಕೆಗೆ ತಡವಾದರೂ ಸಹ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ ಎಂದು ನಯನತಾರಾ ಅಭಿಮಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.

Previous articleಶಾಕಿಂಗ್ ಪೋಸ್ಟ್ ಮಾಡಿದ ಹಾಟ್ ಆಂಕರ್, ನಾನು ತುಂಬಾ ನೋವು ಪಟ್ಟಿದ್ದೇನೆ ಎಂದ ಅನಸೂಯ…!
Next articleಎಲ್ಲಾ ಸಿನಿರಂಗವನ್ನೂ ಗೌರವಿಸೋಣ, ಬಾಲಿವುಡ್ ಸಿನಿರಂಗದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ನೇರ ನುಡಿಗಳು….!