ಯಂಗ್ ಬ್ಯೂಟಿ ಕೃತಿ ಶೆಟ್ಟಿಗೆ ಆ ಇಬ್ಬರು ನಟರ ಜೊತೆ ನಟಿಸುವ ಆಸೆಯಂತೆ, ಆ ನಟರು ಯಾರು ಗೊತ್ತಾ…?

ಟಾಲಿವುಡ್ ನ ಸೂಪರ್‍ ಹಿಟ್ ಸಿನೆಮಾ ಉಪ್ಪೆನಾ ಸಿನೆಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಕೃತಿ ಶೆಟ್ಟಿ. ಮೊದಲನೇ ಸಿನೆಮಾದ ಮೂಲಕವೇ ಸ್ಟಾರ್‍ ಹಿರೋಯಿನ್ ಪಟ್ಟಕ್ಕೆ ಏರಿದರು. ಟಾಲಿವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿ, ಸಾಲು ಸಾಲು ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಇನ್ನೂ ಆಕೆಗೆ ಇದೀಗ ಹೊಸ ಬಯಕೆಯೊಂದು ಮೂಡಿದೆಯಂತೆ. ಇಬ್ಬರು ಸ್ಟಾರ್‍ ನಟರ ಜೊತೆ ನಟಿಸುವ ಆಸೆಯಾಗಿದೆಯಂತೆ ನಟಿ ಕೃತಿ ಶೆಟ್ಟಿಗೆ, ಜೊತೆಗೆ ಅವರನ್ನು ಕ್ಯೂಟ್ ಅಂಡ್ ಹ್ಯಾಂಡ್ ಸಮ್ ಎಂತಲೂ ಕೊಂಡಾಡಿದ್ದಾರೆ. ಅಷ್ಟಕ್ಕೂ ಆ ನಟರು ಯಾರು ಎಂಬ ವಿಚಾರಕ್ಕೆ ಬಂದರೇ,

ನಟಿ ಕೃತಿ ಶೆಟ್ಟಿಗೆ ಮೆಗಾ ಕುಟುಂಬದ ರಾಮ್ ಚರಣ್ ತೇಜ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸುವ ಆಸೆಯಾಗಿದೆಯಂತೆ. ಇನ್ನೂ ಅವರ ಜೊತೆ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಅವರಲ್ಲಿ ಒಬ್ಬರು ಕ್ಯೂಟ್ ಮತ್ತೊಬ್ಬರು ಸೂಪರ್‍ ಹ್ಯಾಂಡ್ ಸಮ್ ಎಂದು ಕೊಂಡಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನೂ ಆಕೆ ಓಪೆನ್ ಆಗಿ ಹೇಳಿದ್ದಾರೆ.  ಸದ್ಯ ನಟಿ ಕೃತಿ ಶೆಟ್ಟಿ ದಿ ವಾರಿಯರ್‍ ಸಿನೆಮಾದಲ್ಲಿ ನಟಿಸಿದ್ದಾರೆ. ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿದೆ. ಈ ಸಿನೆಮಾ ಜುಲೈ 14 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ರಾಮ್ ಪೋತುನೇನಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದ ನಿಮಿತ್ತ ಸಂದರ್ಶನ ಒಂದರಲ್ಲಿ ಆಕೆ ತಮ್ಮ ಮನಸ್ಸಲ್ಲಿನ ಕೋರಿಕೆಯನ್ನು ಹೊರ ಹಾಕಿದ್ದಾರೆ. ಆಕೆಗೆ ನಟ ರಾಮ್ ಚರಣ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸುವ ಆಸೆಯಾಗಿದೆಯಂತೆ.

ಸಂದರ್ಶನವೊಂದರಲ್ಲಿ ನಟಿ ಕೃತಿ ಶೆಟ್ಟಿ ನಟ ರಾಮ್ ಚರಣ್ ಹಾಗೂ ಮಹೇಶ್ ಬಾಬು ಜೊತೆ ಸಿನೆಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ರಾಮಚರಣ್ ತುಂಬಾ ಕ್ಯೂಟ್ ಆಗಿರುತ್ತಾರೆ. ಮಹೇಶ್ ಬಾಬು ಸೂಪರ್‍ ಹ್ಯಾಂಡ್ ಸಮ್ ಆಗಿರುತ್ತಾರೆ. ಈ ಇಬ್ಬರೂ ನಟರ ಜೊತೆಗೆ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ತಮ್ಮ ಮನಸ್ಸಲ್ಲಿನ ಆಸೆಯನ್ನು ಹೊರಹಾಕಿದ್ದಾರೆ. ಇನ್ನೂ ಕೃತಿ ಈ ವಿಚಾರವನ್ನು ಹೊರಹಾಕಿದ ಬೆನ್ನಲ್ಲೆ ಮಹೇಶ್ ಹಾಗೂ ರಾಮ್ ಚರಣ್ ಫ್ಯಾನ್ಸ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ವಾರಿಯರ್‍ ಸಿನೆಮಾ ಗೆ ಶುಭ ಕೋರುತ್ತಿದ್ದಾರೆ. ಸದ್ಯ ಕೃತಿ ಕಾಲಿವುಡ್ ಸ್ಟಾರ್‍ ನಟ ಸೂರ್ಯ ಜೊತೆ ಹಾಗೂ ಟಾಲಿವುಡ್ ನಲ್ಲಿ ನಾಗಚೈತನ್ಯ ಜೊತೆ ಒಂದು ಸಿನೆಮಾವನ್ನು ಘೋಷಣೆ ಮಾಡಿದ್ದಾರೆ. ಜೊತೆಗೆ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಹಾಗೂ ಮಾಚರ್ಲ ನಿಯೋಜಕವರ್ಗಂ ಎಂಬ ಸಿನೆಮಾಗಳಲ್ಲೂ ಸಹ ಕಾಣಿಸಿಕೊಳ್ಳಲಿದ್ದು, ಮತಷ್ಟು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಹರಿಸಿ ಬರುತ್ತಿವೆ ಎನ್ನಲಾಗಿದೆ.

ನಟಿ ಕೃತಿ ಉಪ್ಪೆನಾ ಸಿನೆಮಾ ಮೂಲಕ ಬಣ್ಣದ ಲೀಕ್ಕೆ ಕಾಲಿಟ್ಟು, ಬಹುಬೇಡಿಕೆ ನಟಿಯಾದರು. ಶ್ಯಾಮ್ ಸಿಂಗರಾಯ್, ಬಂಗರಾಜು ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಆಗಿದೆ. ಆ ಮೂಲಕ ಹ್ಯಾಟ್ರಿಕ್ ಗಳಿಸಿಕೊಂಡಿದ್ದಾರೆ. ಸದ್ಯ ಆಕೆ ದಿ ವಾರಿಯರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದೆ. ಸಿನೆಮಾದ ಮೇಲೆ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ.

Previous articleಪ್ಯಾಂಟ್ ಲೆಸ್ ಆಗಿ ಥಂಡರ್ ಥೈಸ್ ಶೋ ಮೂಲಕ ಹಾಟ್ ಟ್ರೀಟ್ ಕೊಟ್ಟ ತಾಪ್ಸಿ…!
Next articleಪಿಂಕ್ ಕಲರ್ ಸೀರೆಯಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟ ಬಾಲಿವುಡ್ ಬ್ಯೂಟಿ… !