ಕೃತಿ ಶೆಟ್ಟಿ ಬ್ಯುಸಿಯಿದ್ದೀನಿ ಅಂದರೂ ಕಾಯುತ್ತೇನೆ ಎಂದಿದ್ದಾರಂತೆ ಕಾಲಿವುಡ್ ನಟ..!

ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ದಕ್ಕಿಸಿಕೊಂಡ ನಟಿ ಕೃತಿ ಶೆಟ್ಟಿ, ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೆನಾ ಎಂಬ ಸಿನೆಮಾದ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ದಕ್ಕಿಸಿಕೊಂಡ ಈಕೆ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ಕಳೆದ 2021 ರಲ್ಲಿ ಬಿಡುಗಡೆಯಾದ ಈ ಉಪ್ಪೆನಾ ಸಿನೆಮಾ ಆಕೆಯ ದಿಕ್ಕನ್ನೇ ಬದಲಾಯಿಸಿಬಿಟ್ಟಿದೆ. ಈ ಸಿನೆಮಾದ ಬಳಿಕ ಶ್ಯಾಮ್ ಸಿಂಗರಾಯ್, ಬಂಗರರಾಜು ಸಿನೆಮಾಗಳೂ ಸಹ ಆಕೆಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿದೆ. ಇದೀಗ ಆಕೆ ಸಿನೆಮಾ ಒಂದರಲ್ಲಿ ನಟಿಸಲು ಒಪ್ಪದೇ ಇದ್ದರೂ ಸಹ ಕಾಲಿವುಡ್ ನಟ ಆಕೆಗಾಗಿ ಕಾಯುತ್ತೇನೆ ಎಂದಿದ್ದಾರಂತೆ.

ನಟಿ ಕೃತಿ ಶೆಟ್ಟಿ ಸದ್ಯ ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗಂ ಹಾಗೂ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.. ಇನ್ನೂ ಕಾಲಿವುಡ್ ನಲ್ಲಿ ಖ್ಯಾತ ಸ್ಟಾರ್‍ ನಟ ಸೂರ್ಯ ಬಾಲ ನಿರ್ದೇಶನದಲ್ಲಿ ಸಿದ್ದವಾಗುತ್ತಿರುವ ಸಿನೆಮಾದಲ್ಲೂ ಸಹ ನಟಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಕಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ ಕೃತಿ. ಇನ್ನೂ ಈ ಸಿನೆಮಾಗೂ ಮುಂಚೆಯೇ ದಿ ವಾರಿಯರ್‍ ಎಂಬ ಸಿನೆಮಾದ ಮೂಲಕ ತಮಿಳಿನ ಸಿನಿರಸಿಕರನ್ನು ರಂಜಿಸಲಿದ್ದಾರೆ. ಟಾಲಿವುಡ್ ಯಂಗ್ ಹಿರೋ ರಾಮ್ ಪೋತುನೇನಿ ಹಾಗೂ ಕಾಲಿವುಡ್ ನಿರ್ದೇಶಕ ಲಿಂಗುಸ್ವಾಮಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಮಾಸ್ ಎಂಟರ್‍ ಟ್ರೈನರ್‍ ಮೂವಿ ದಿ ವಾರಿಯರ್‍. ಈ ಸಿನೆಮಾ ಜುಲೈ 14 ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ನಟಿ ಕೃತಿ ರೆಡಿಯೋ ಜಾಕಿಯಾಗಿ ರಂಜಿಸಲಿದ್ದಾರೆ.

ಇನ್ನೂ ನಟಿ ಕೃತಿ ಶೆಟ್ಟಿಗೆ ಮತ್ತೊಂದು ಕಾಲಿವುಡ್ ಸಿನೆಮಾದಿಂದಲೂ ಆಫರ್‍ ಬಂದಿದೆಯಂತೆ. ಆದರೆ ಆಕೆ ಈಗಾಗಲೇ ಬೇರೆ ಸಿನೆಮಾಗಳಲ್ಲಿ ಬ್ಯುಸಿಯಿರುವ ಕಾರಣ ನೋ ಎಂದು ಹೇಳಿದ್ದಾರಂತೆ. ಆದರೂ ಸಹ ಆಕೆಯ ಡೇಟ್ಸ್ ಗಾಗಿ ಕಾಯೋಣ ಎಂದು ಕಾಲಿವುಡ್ ನಟ ಹೇಳಿದ್ದಾರಂತೆ. ಆ ನಟ ಬೇರೆ ಯಾರೂ ಅಲ್ಲ ಕಾಲಿವುಡ್ ಸ್ಟಾರ್‍ ನಟ ವಿಶಾಲ್. ಆತನ ಮುಂದಿನ ಸಿನೆಮಾದಲ್ಲಿ ಕೃತಿ ಶೆಟ್ಟಿಯವರನ್ನು ನಾಯಕಿಯನ್ನಾಗಿ ತೆಗೆದುಕೊಳ್ಳಿ ಎಂದು ಸಿನಿತಂಡಕ್ಕೆ ತಿಳಿಸಿದಾರಂತೆ. ವಿಶಾಲ್ ಮಾತಿನಂತೆ ಚಿತ್ರತಂಡ ಸಹ ಕೃತಿ ಶೆಟ್ಟಿಯವರನ್ನು ಸಂಪರ್ಕ ಮಾಡಿದ್ದಾರಂತೆ. ಆದರೆ ಆಕೆ ಮಾತ್ರ ಬೇರೆ ಸಿನೆಮಾಗಳಲ್ಲಿ ಬ್ಯುಸಿಯಿರುವ ಕಾರಣ ಒಪ್ಪಿಗೆ ನೀಡಲಿಲ್ಲವಂತೆ. ಆದರೆ ವಿಶಾಲ್ ಮಾತ್ರ ನಿಮಗೆ ಫ್ರೀ ಇದ್ದಾಗಲೇ ಡೇಟ್ಸ್ ಕೊಡಿ ಎಂದು ಹೇಳಿದ್ದು, ಇದರಿಂದ ಕೃತಿ ಶೆಟ್ಟಿ ಸಹ ಸಿನೆಮಾಗೆ ಒಪ್ಪಿಗೆ ನೀಡಿದ್ದಾರೆ ಎಂದು ಸಿನಿರಂಗದಲ್ಲಿ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜವೋ ಏನೋ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಟ್ರೆಂಡ್ ಆಗಿದೆಯಂತೆ.

ಈಗಾಗಲೇ ಕೃತಿ ಶೆಟ್ಟಿ ಉಪ್ಪೆನಾ, ಶ್ಯಾಮ್ ಸಿಂಗರಾಯ್ ಹಾಗೂ ಬಂಗಾರರಾಜು ಎಂಬ ಸಿನೆಮಾದ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದೀಗ ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗಂ ಹಾಗೂ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಎಂಬ ಸಿನೆಮಾಗಳ ಮೂಲಕ ಮತ್ತೊಂದು ಹ್ಯಾಟ್ರಿಕ್ ಹೊಡೆಯಲು ಕಾಯುತ್ತಿದ್ದು, ಮತ್ತೆ ಕೆಲವೊಂದು ಸಿನೆಮಾಗಳನ್ನು ಆಕೆ ಕೈಯಲ್ಲಿಟ್ಟುಕೊಂಡಿದ್ದಾರೆ.

Previous articleಬ್ಯೂಟಿಪುಲ್ ಅಂಡ್ ಹಾಟ್ ಪೊಟೋಗಳನ್ನು ಹಂಚಿಕೊಂಡ ಅಖಂಡ ಬ್ಯೂಟಿ ಪ್ರಗ್ಯಾ ಜೈಸ್ವಾಲ್….!
Next articleಎದೆಯ ಸೌಂದರ್ಯವನ್ನು ಕ್ಲೋಜ್ ಅಪ್ ಆಂಗಲ್ ನಲ್ಲಿ ತೋರಿಸಿದ ಚಿರುತ ನಟಿ..!