Film News

ಮಾರ್ಚ್ 11 ರಂದು ಪವನ್-ಕ್ರಿಷ್ ಮೂವಿ ಬಿಗ್ ಅಪ್ಡೇಟ್!

ಹೈದರಾಬಾದ್: ಟಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಷ್ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರವೊಂದಕ್ಕೆ ಸಂಬಂಧಿಸಿದ ಬಿಗ್ ಅಪ್ಡೇಟ್ ಒಂದನ್ನು ಮಾರ್ಚ್ 11 ಶಿವರಾತ್ರಿ ಹಬ್ಬದಂದು ಬಹಿರಂಗ ಪಡಿಸುವುದಾಗಿ ತಿಳಿದು ಬಂದಿದೆ.

ನಟ ಪವನ್ ಕಲ್ಯಾಣ್ ಹಾಗೂ ನಿರ್ದೇಶಕ ಕ್ರಿಷ್ ಕಾಂಬಿನೇಷನ್‌ನಲ್ಲಿ ಪ್ರಾಜೆಕ್ಟ್‌ವೊಂದು ಈ ಹಿಂದೆಯೇ ಪ್ರಾರಂಭವಾಗಿತ್ತು. ಆದರೆ ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ಎಲ್ಲಾ ಉಲ್ಟಾಪಲ್ಟಾ ಆಗಿದೆ. ಇದೀಗ ಲಾಕ್‌ಡೌನ್ ಸಹ ಸಡಿಲಿಕೆಯಾಗಿದ್ದು, ಕ್ರಿಷ್ ತಮ್ಮ ಚಿತ್ರವನ್ನು ಪ್ರಾರಂಭವಾಗಲು ಮುಂದಾಗಿದ್ದಾರಂತೆ. ವಕೀಲ್ ಸಾಭ್ ಚಿತ್ರದ ನಂತರ ಪ್ರಾರಂಭ ಮಾಡಬೇಕೆಂದುಕೊಂಡಿದ್ದರು, ಆದರೆ ಇದಾದ ಬಳಿಕ ಅಯ್ಯುಪ್ಪುನಮ್ ಕೋಶಿಯಮ್ ಚಿತ್ರದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಈ ರಿಮೇಕ್ ಚಿತ್ರಕ್ಕೆ ಕಡಿಮೆ ಡೇಟ್ಸ್ ಪವನ್ ಕಲ್ಯಾಣ್ ಕೊಟ್ಟಿದ್ದು, ಶೀಘ್ರದಲ್ಲೇ ಶೂಟಿಂಗ್ ಸಹ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.

ಇದೀಗ ಈ ಸ್ಟಾರ್ ಕಾಂಬಿನೇಷನ್ ನಲ್ಲಿ ಶೂಟಿಂಗ್ ಕೊನೆಗೂ ಪ್ರಾರಂಭವಾಗುವ ಸೂಚನೆ ದೊರೆತಿದೆ. ಮಾರ್ಚ್ ೧೧ ಶಿವರಾತ್ರಿ ಹಬ್ಬದಂದು ಈ ಚಿತ್ರಕ್ಕೆ ಸಂಬಂಧಿಸಿದಂತೆ ಟೈಟಲ್ ಹಾಗೂ ಫಸ್ಟ್ ಲುಕ್ ಸಹ ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ೧೭ನೇ ಶತಮಾನದಲ್ಲಿನ ಪರಿಸ್ಥಿತಿಗಳನ್ನು ಪುನಃ ತೆರೆಗೆ ತರಲು ಭಾರಿ ಸೆಟ್ ಅನ್ನು ಸಹ ಹಾಕಲಾಗಿದೆಯಂತೆ. ಇದನ್ನೆಲ್ಲಾ ಗಮನಿಸಿದರೇ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರ ಬರಲಿದೆ ಎನ್ನಬಹುದಾಗಿದೆ.

ಅಷ್ಟೇ ಅಲ್ಲದೇ ನಿರ್ದೇಶಕ ಕ್ರಿಷ್ ತಾವು ನಿರ್ದೇಶನ ಮಾಡುವಂತಹ ಸಿನೆಮಾಗಳಿಗೆ ಆಕರ್ಷಿಸುವಂತಹ ಟೈಟಲ್ ಗಳನ್ನು ಇಡುತ್ತಾರೆ. ಟೈಟಲ್ ಗಾಗಿಯೇ ಸಾಕಷ್ಟು ಶ್ರಮ ವಹಿಸುತ್ತಾರೆ. ಗಮ್ಯಂ, ಕೃಷ್ಣವಂದೇ ಜಗದ್ಗುರಂ, ಕಂಚೆ ಹೀಗೆ ಅವರ ಸಿನೆಮಾ ಟೈಟಲ್ ಗಳೆ ತುಂಬಾ ಆಕರ್ಷಣೆಯಿಂದ ಕೂಡಿರುತ್ತದೆ. ಇದೀಗ ಪವನ್ ಕಲ್ಯಾಣ್ ಚಿತ್ರಕ್ಕೆ ಯಾವ ರೀತಿಯಲ್ಲಿನ ಟೈಟಲ್ ಇಡುತ್ತಾರೆ ಎಂಬುದನ್ನು ತಿಳಿಯಲು ಮಾರ್ಚ್ ೧೧ ರವರೆಗೂ ಕಾಯಬೇಕಿದೆ.

 

Trending

To Top