ಹೈದರಾಬಾದ್: ಕೊರೋನಾ ನಿಯಮಗಳ ನಡುವೆ ಬಿಡುಗಡೆಯಾದ ಮಾಸ್ ಮಹಾರಾಜ ರವಿತೇಜ ಅಭಿನಯದ ಕ್ರ್ಯಾಕ್ ಸಿನೆಮಾ ಭರ್ಜರಿಯಾಗಿ ಪ್ರದರ್ಶನವಾಗುತ್ತಿದ್ದು, ದೊಡ್ಡ ಮಟ್ಡದ ಯಶಸ್ಸು ಗಳಿಸಿದೆ. ಇದೀಗ ಬಂದ ಮಾಹಿತಿ ಪ್ರಕಾರ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಹಿಂದಿ ನಿರ್ಮಾಪಕರು ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಬಹಳ ದಿನಗಳ ನಂತರ ರವಿತೇಜ ಕ್ರ್ಯಾಕ್ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ದೂಳು ಎಬ್ಬಿಸುತ್ತಿದೆ. ಬಹಳ ಚಿತ್ರಗಳ ಬಳಿಕ ರವಿತೇಜ ಸಿನೆಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದೆ. ತೆಲುಗು ಭಾಷೆಯಲ್ಲಿ ಬ್ಲಾಕ್ ಬಸ್ಟರ್ ಸಿನೆಮಾ ಎಂದೇ ಹೇಳಲಾಗುತ್ತಿದ್ದು, ಈ ಚಿತ್ರ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದೆ ಎಂಬ ಸುದ್ದಿ ಸಿನಿರಂಗದಲ್ಲಿ ಚರ್ಚೆ ಆಗುತ್ತಿದೆ.
ಇನ್ನೂ ಕ್ಯ್ರಾಕ್ ಸಿನೆಮಾ ನಿರ್ದೇಶಕ ಗೋಪಿಚಂದ್ ಮಲಾನೆನಿ ಈ ಕುರಿತು ಖಾಸಗಿ ಮಾದ್ಯಮವೊಂದಕ್ಕೆ ಮಾಹಿತಿ ನೀಡಿರುವ ಪ್ರಕಾರ ಕ್ರ್ಯಾಕ್ ಚಿತ್ರವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡಲು ಪ್ಲಾನ್ ಮಾಡುತ್ತಿದ್ದು, ಸೌತ್ ಇಂಡಿಯಾ ಚಿತ್ರಗಳನ್ನು ಹಿಂದಿ ಸಿನಿಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಾರೆ. ಜೊತೆಗೆ ಕ್ರ್ಯಾಕ್ ಚಿತ್ರದಲ್ಲಿ ಬಾಲಿವುಡ್ ಸಿನಿರಸಿಕರು ಇಷ್ಟಪಡುವಂತಹ ಅನೇಕ ಸನ್ನಿವೇಶಗಳಿದ್ದು, ಶೀಘ್ರದಲ್ಲಿಯೇ ಬಾಲಿವುಡ್ ಗೆ ಹೊಂದಿಕೊಳ್ಳುವ ಹಾಗೆ ರಿಮೇಕ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಟಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಕ್ರ್ಯಾಕ್ ಸಿನೆಮಾದ ನಾಯಕ ರವಿತೇಜ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಬಿ.ಮಧು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
