ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ರವರ ಸಾರಥ್ಯದಲ್ಲಿ ರಾಮ್ ಚರಣ್ ತೇಜ್ ನಾಯಕನಾಗಿ ನಟಿಸಲಿರುವ ಚಿತ್ರದಲ್ಲಿ ವಿದೇಶಿ ನಟಿಯೊಬ್ಬರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ನಟ ರಾಮ್ ಚರಣ್ ಆರ್.ಆರ್.ಆರ್ ಹಾಗೂ ಆಚಾರ್ಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ನಿರ್ದೇಶಕ ಶಂಕರ್ ರವರೊಂದಿಗೆ ತಮ್ಮ ಮುಂದಿನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಸಹ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ಮತ್ತೊಂದು ಸುದ್ದಿ ಹೊರಬಂದಿದ್ದು ಈ ಚಿತ್ರದಲ್ಲಿ ದಕ್ಷಿಣ ಕೊರಿಯಾದ ನಟಿ ಯೊಬ್ಬರು ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಗೆ ಜೋಡಿಯಾಗಿ ನಟಿಸಲಿರುವುದು ದಕ್ಷಿಣ ಕೊರಿಯಾದ ಸುಜಿ ಬೀ ಎಂಬ ನಟಿಯನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಸುಜಿ ನಟಿಸಲಿರುವ ಮೊದಲ ವಿದೇಶಿ ಭಾಷಾ ಸಿನೆಮಾ ಇದಾಗಲಿದೆ.
ಇನ್ನೂ ನಟ ಸುಜಿ ಬೀ ನಾಲ್ಕು ಸಿನೆಮಾಗಳಲ್ಲಿ, ಒಂದು ಶಾರ್ಟ್ ಮೂವಿ ಹಾಗೂ ಕೊರಿಯನ್ ಸಿನೆಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಟಿವಿ ಶೋ ಗಳಲ್ಲಿಯೂ ಸಹ ನಟಿ ಭಾಗವಹಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ಚಿತ್ರ ಶಂಕರ್ ನಿರ್ದೇಶನದ 50ನೇ ಸಿನೆಮಾ ಆಗಿದ್ದು, ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಶ್ರೀ ವೆಂಕಟೇಶ್ವರ ಕ್ರಿಯೇಷನ್ನಲ್ಲಿ ಮೂಡಿಬರುತ್ತಿದ್ದು, ರಾಮ್ ಚರಣ್ ಗೆ 15ನೇ ಸಿನೆಮಾ ಇದಾಗಲಿದೆ.
ಇನ್ನೂ ಈ ಚಿತ್ರದ ಕುರಿತಂತೆ ಮತ್ತೊಂದು ಹಾಟ್ ಟಾಪಿಕ್ ಸಹ ಇದೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ನಟ ಯಶ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ಆದರೆ ಈ ಕುರಿತು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆಚಾರ್ಯ ಚಿತ್ರದ ಶೂಟಿಂಗ್ ಮುಗಿದ ನಂತರ ಸಿನೆಮಾದ ಕೆಲಸಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ.
