RRR ಸಿನೆಮಾದ ಕೊಮರಂ ಭಿಮುಡೋ ಪೂರ್ತಿ ಹಾಡು ಬಿಡುಗಡೆ

ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದ RRR ಸಿನೆಮಾ ಈಗಾಗಲೇ ಬಾಕ್ಸ್ ಆಫೀಸ್ ಉಡಿಸ್ ಮಾಡುವ ಮೂಲಕ ಸಾವಿರ ಕ್ಲಬ್ ಸಿನೆಮಾಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನೂ ಈ ಸಿನೆಮಾದ ಪವರ್‍ ಪುಲ್ ಸಾಂಗ್ ಕೊಮರಂ ಭೀಮಿಡೋ ಪೂರ್ತಿ ಹಾಡು ಇದೀಗ ಬಿಡುಗಡೆಯಾಗಿದ್ದು ಎನ್.ಟಿ.ಆರ್‍ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಳೆದ ಮಾರ್ಚ್ 25 ರಂದು ವರ್ಲ್ಡ್ ವೈಡ್ ಬಿಡುಗಡೆಯಾದ ಈ ಸಿನೆಮಾ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿಯನ್ನು ಗಳಿಸಿಕೊಂಡಿದೆ. ಅಮೇರಿಕಾದಲ್ಲೂ ಸಹ RRR ಸಿನೆಮಾ ತನ್ನ ಅಧಿಪತ್ಯವನ್ನು ಮೆರದಿದ್ದು, ಸುಮಾರು 100 ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ಇನ್ನೂ ರಾಜಮೌಳಿ ಯವರ ಬಾಹುಬಲಿ-2 ಸಿನೆಮಾ ಸಹ ಅಮೇರಿಕಾದಲ್ಲಿ 100 ಕೋಟಿ ಗಳಿಸಿತ್ತು. ಭಾರತದ ಈ ಎರಡೂ ಸಿನೆಮಾಗಳು ಅಮೇರಿಕಾದಲ್ಲಿ ನೂರು ಕೋಟಿ ವಸೂಲಿ ಮಾಡಿದ ಸಿನೆಮಾಗಳಾಗಿವೆ.

ಇನ್ನೂ RRR ಸಿನೆಮಾದಿಂದ ಮತ್ತೊಂದು ಶುಭ ಸುದ್ದಿ ಅಭಿಮಾನಿಗಳಿಗೆ ದೊರೆತಿದೆ. ಈ ಸಿನೆಮಾದಲ್ಲಿ ಪವರ್‍ ಪುಲ್ ಸಾಂಗ್ ಎಂದೇ ಕರೆಯಾಲಾಗುವ ಕೊಮರಂ ಭೀಮುಡೋ ಸಾಂಗ್ ಪೂರ್ತಿಯಾಗಿ ಬಿಡುಗಡೆಯಾಗಿದೆ. ಈ ಹಿಂದೆ ನಾಟು ನಾಟು, ಕೊಮ್ಮ ಉಯ್ಯಾಲಾ, ದೋಸ್ತಿ ಹಾಡುಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದೀಗ ಕೊಮರಂ ಭೀಮುಡೋ ಹಾಡು ಸಹ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ಎನ್.ಟಿ.ಆರ್‍ ನಟನೆಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ.

ಈ ಹಾಡನ್ನು ಸಂಗೀತ ನಿರ್ದೇಶಕ ಕಿರವಾಣಿ ಮಗ ಭೈರವ ಹಾಡಿದ್ದಾರೆ. ಹಾಡನ್ನು ಸುದ್ದಾಲ ಅಶೋಕ್ ತೇಜ್ ಬರೆದಿದ್ದಾರೆ. ಇನ್ನೂ ಈ ವಿಡಿಯೋ ಹಾಡನ್ನು ನೋಡಿದ ಅಭಿಮಾನಿಗಳಂತೂ ಎನ್.ಟಿ.ಆರ್‍. ನಟನೆ ಅದ್ಬುತವಾಗಿದೆ ಎಂಬ ಕಾಮೆಂಟ್ ಗಳು ಹರಿದು ಬರುತ್ತಿದೆ. RRR ಸಿನೆಮಾದಲ್ಲಿ ಈ ಹಾಡು ಹೈಲೆಟ್ ಎಂದು ಹೇಳಲಾಗುತ್ತಿದ್ದು. ಈ ಹಾಡನ್ನು ಕೇಳುತ್ತಿದ್ದರೇ ಮೈನವಿರೇಳುತ್ತದೆ.

Previous articleಬಹುನಿರೀಕ್ಷಿತ ವಿರಾಟ ಪರ್ವ ತೆರೆಗೆ ಬರಲು ಸಿದ್ದ.. ಜುಲೈ 1 ರಂದು ವಿಶ್ವದಾದ್ಯಂತ ರಿಲೀಸ್..
Next articleಸ್ಲಿಮ್ ಲುಕ್ ನಲ್ಲಿ ಅಭಿಮಾನಿಗಳ ಮನಗೆದ್ದ ಪಂಚರಂಗಿ ಹುಡುಗಿ ನಿಧಿ ಸುಬ್ಬಯ್ಯ…