Kannada Music

ಚಂದನ್ ಶೆಟ್ಟಿ ಹೊಸ ಹಾಡು ಕೊಲುಮಂಡೆ ಜಂಗಮದೇವ! ಹಳೆ ಹಾಡೇ ಚನ್ನಾಗಿದೆ ಎಂದ ಜನರು! ವಿಡಿಯೋ ನೋಡಿ

ನಿನ್ನೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ‘ಕೋಲು ಮಂಡೆ ಜಂಗಮ ದೇವ’ ಹೊಡ್ಸ್ ವಿಡಿಯೋ ಆಲ್ಬಂ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಸಂಸ್ಥೆಯ ಹೊಸ ಹೊಸ ಪ್ರಯತ್ನಕ್ಕೆ ಕನ್ನಡ ರಾಪರ್ ಚಂದನ್ ಶೆಟ್ಟಿ ಜೊತೆಯಾಗಿದ್ದಾರೆ..1996ರಲ್ಲಿ ತೆರೆಕಂಡ ಜನುಮದ ಜೋಡಿ ಸಿನಿಮಾದ ಹಾಡು ಕೋಲುಮಂಡೆ ಜಂಗಮ ದೇವ, ಇದೊಂದು ಜನಪ್ರಿಯ ಹಾಡಾಗಿತ್ತು, ಈ ಹಾಡಿಗೆ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿದ್ದರು. ಇಂದಿಗೂ ಸಹ ಈ ಹಾಡಿಗೆ ಅಷ್ಟೇ ಜನಪ್ರಿಯತೆ ಇದೆ. ಇದೀಗ ಈ ಹಾಡಿಗೆ ವಿನೂತನವಾದ ಶೈಲಿಯ ಹೊಸ ಟಚ್ ಕೊಟ್ಟು ಹೊಸ ರೀತಿಯಲ್ಲಿ ಸಂಯೋಜನೆ ಮಾಡಿ ಹಾಡನ್ನು ಹೊರತಂದಿದ್ದಾರೆ ಚಂದನ್ ಶೆಟ್ಟಿ. ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ನೋಡಿ, ಆದರೆ ಕೆಲವರು ಈ ಹಾಡು ಚನ್ನಾಗ್ ಇಲ್ಲ ಒರಿಜಿನಲ್ ಬೆಸ್ಟ್ ಎಂದು ಹೇಳಿದ್ದಾರೆ!

ನೋಡಿದ್ರಲ್ಲಾ ಹಲವಾರು ಜನ ಇದರ ಬಗ್ಗೆ ಏನೆಂದು ಕಾಮೆಂಟ್ ಮಾಡಿದ್ದಾರೆಂದು! ಕನ್ನಡದ ಹಲವಾರು ಯಶಸ್ವಿ ಸಿನಿಮಾಗಳ ಆಡಿಯೋ ಹಕ್ಕನ್ನು ಪಡೆಯುವ ಮ‌ೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಆನಂದ್ ಆಡಿಯೋ ಸಂಸ್ಥೆ, ‘ಕೋಲುಮಂಡೆ’ ಎಂಬ ವಿಡಿಯೋ ಆಲ್ಬಂ ಅನ್ನು ನಿರ್ಮಾಣ ಮಾಡಿದೆ. ಗಣಪತಿ ಹಬ್ಬದ ಶುಭದಿನದಂದು ಈ ವಿಡಿಯೋ ಆಲ್ಬಮ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಚಂದನ್ ಶೆಟ್ಟಿ ಅವರ ಕಂಠಸಿರಿಯಲ್ಲಿ ಈ ಹಾಡು ಕೇಳಿಬಂದಿದೆ. ಈ ಕೆಳಗಿನ ವಿಡಿಯೋ ನೋಡಿ

ಈ ಹಾಡಿಗೆ ಚಂದನ್ ಶೆಟ್ಟಿ ಅವರೇ ಸಂಗೀತ ಸಂಯೋಜನೆ ಮಾಡಿರುವುದು ಮತ್ತೊಂದು ವಿಶೇಷ. ಈ ವಿಡಿಯೋ ಆಲ್ಬಮ್ ಅನ್ನು ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸಿದ್ದಾರೆ ಹಾಗೂ ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಈ ಹಾಡಿಗೆ ಚಿನ್ನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಅವರು ಸಂಕಲನ ಮಾಡಿದ್ದಾರೆ. ಇದರ ಪರಿಕಲ್ಪನೆ ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಮಯೂರಿ ಉಪಾಧ್ಯ ಅವರದ್ದು. ಈ ವಿಡಿಯೋ ಆಲ್ಬಮ್ ನಲ್ಲಿ ಶಿವು, ನಂದಿನಿ ಹಾಗೂ ಇನ್ನಷ್ಟು ಸಹ ಕಲಾವಿದರ ನಟಿಸಿದ್ದಾರೆ.

Trending

To Top