Film News

ಶೀಘ್ರದಲ್ಲೇ ಆ ನಟಿಯೊಂದಿಗೆ ಕಾಲಿವುಡ್ ಸ್ಟಾರ್ ನಟ ವಿಶಾಲ್ ಮದುವೆ, ಆ ನಟಿ ಯಾರು?

ನಟ ವಿಶಾಲ್ ಮದುವೆಯ ವಿಚಾರ ಮತ್ತೊಮ್ಮೆ ಹರಿದಾಡುತ್ತಿದ್ದು, ಆತ ಒಬ್ಬ ಫೇಮಸ್ ನಟಿಯೊಂದಿಗೆ ಪ್ರೀತಿಗೆ ಬಿದ್ದಿದ್ದಾರಂತೆ. ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರಂತೆ. ಸದ್ಯ ಈ ವಿಚಾರ ಕಾಲಿವುಡ್ ವಲಯದಲ್ಲಿ ಹಾಟ್ ಟಾಪಿಕ್ ಆಗಿ ಎಲ್ಲಾ ಕಡೆ ಹರಿದಾಡುತ್ತಿದೆ. ನಟ ವಿಶಾಲ್ ಪ್ರೀತಿಸಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ವೈರಲ್ ಆಗುತ್ತಿದೆ. ಸುಮಾರು ದಿನಗಳ ಹಿಂದೆಯೇ ನಟ ವಿಶಾಲ್ ಹೈದರಾಬಾದ್ ಮೂಲದ ಯುವತಿಯನ್ನು ವಿವಾಹವಾಗಬೇಕಿತ್ತು. ಎಂಗೇಜ್ ಮೆಂಟ್ ಸಹ ಆಗಿತ್ತು. ಮದುವೆಯಾಗುವುದಕ್ಕೂ ಮುಂಚೆಯೇ ಕೆಲವೊಂದು ಕಾರಣಗಳಿಂದ ಈ ಸಂಬಂಧ ಮುರಿದುಬಿತ್ತು. ಬಳಿಕ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸಹ ಪ್ರಚಾರವಾಗಿತ್ತು. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ತೆಲುಗು ಹಾಗೂ ತಮಿಳು ಸಿನಿರಂಗದಲ್ಲಿ ಜೋರಾಗಿಯೇ ಕೇಳಿಬಂದಿತ್ತು. ಬಳಿಕ ಈ ಸುದ್ದಿಯೂ ಸಹ ರೂಮರ್‍ ಆಗಿಯೇ ಮರೆಯಾಯಿತು.

ಇದೀಗ ನಟ ವಿಶಾಲ್ ನಟಿ ಅಭಿನಯ ಎಂಬಾಕೆಯ ಪ್ರೀತಿಯಲ್ಲಿದ್ದಾರಂತೆ. ಅನೇಕ ಸಿನೆಮಾಗಳಲ್ಲಿ ನಟರಿಗೆ ತಂಗಿಯಾಗಿ, ಅಕ್ಕ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಸಿನೆಮಾಗಳಲ್ಲಿ ನಟರಿಗೆ ಹೆಂಡತಿಯ ಪಾತ್ರದಲ್ಲೂ ಸಹ ನಟಿಸಿದ್ದಾರೆ. ಇದೀಗ ಆಕೆ ವಿಶಾಲ್ ಜೊತೆಗೆ ಮಾರ್ಕ್ ಆಂಟೋನಿ ಸಿನೆಮಾದಲ್ಲಿ ಪತ್ನಿಯಾಗಿ ನಟಿಸುತ್ತಿದ್ದಾರೆ. ಈ ಕಾರಣದಿಂದ ಇಬ್ಬರ ನಡುವೆ ಲವ್ ಟ್ರಾಕ್ ನಡೆಯುತ್ತಿದೆ, ಶೀಘ್ರದಲ್ಲೇ ಇಬ್ಬರೂ ಮದುವೆ ಸಹ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಭಿನಯ ಇದೆಲ್ಲಾ ಸುಳ್ಳು ಸುದ್ದಿ, ಆ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ರೂಮರ್‍ ಗಳನ್ನು ತಳ್ಳಿಹಾಕಿದ್ದಾರೆ.

ಸದ್ಯ ಮಾರ್ಕ್ ಆಂಟೋನಿ ಸಿನೆಮಾದಲ್ಲಿ ಅಭಿನಯ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ವಿಶಾಲ್ ಗೆ ಪತ್ನಿಯಾಗಿ ನಟಿಸುತ್ತಿದ್ದರುವ ಅಭಿನಯ ರಿಯಲ್ ಲೈಪ್ ನಲ್ಲಿ ಹೆಂಡತಿಯಾಗಲು ಸಾಧ್ಯವೆ ಎಂದು ಹೇಳುವ ಮೂಲಕ ಈ ರೂಮರ್‍ ಗಳನ್ನು ತಳ್ಳಿಹಾಕಿದ್ದಾರೆ. ಇನ್ನೂ ಅಭಿನಯ ನೇನಿಂತೆ, ದಮ್ಮು, ಕಿಂಗ್, ಧೃವ, ರಾಜುಗಾರಿ ಗದಿ 2 ಹಾಗೂ ಸೀತಾರಾಮಂ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಇನ್ನೂ ವಿಶಾಲ್ ಸಹ ಲಾಠಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಆತನ ಪ್ರತಿಯೊಂದು ಸಿನೆಮಾ ತೆಲುಗಿನಲ್ಲೂ ಸಹ ಬಿಡುಗಡೆಯಾಗುತ್ತಿರುತ್ತದೆ. ತಮಿಳು ನಟನಾದರೂ ಆತ ತೆಲುಗಿನಲ್ಲೂ ಸಹ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

Trending

To Top