Film News

ಕಾಲಿವುಡ್ ನಟ ವಿಶಾಲ್ ಮನೆಯ ಮೇಲೆ ಧಾಳಿ, ಕಾರಣವಾದರೂ ಏನು?

ತಮಿಳು ಸಿನಿರಂಗದ ಸ್ಟಾರ್‍ ನಟ ವಿಶಾಲ್ ರವರ ಮನೆಯ ಮೇಲೆ ಕೆಲವು ದುರುಳರು ಧಾಳಿ ಮಾಡಿದ್ದು, ವಿಶಾಲ್ ಮನೆಯ ಕಿಟಕಿ ಗ್ಲಾಸ್ ಗಳು ಹೊಡೆದು ಹೋಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಘಟನೆಯಿಂದ ವಿಶಾಲ್ ಅಭಿಮಾಣಿಗಳು ಆಂತಕಕ್ಕೆ ಗುರಿಯಾಗಿದ್ದಾರೆ. ಇನ್ನೂ ನಟ ವಿಶಾಲ್ ಮನೆಯ ಮೇಲೆ ಧಾಳಿ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ನಟ ವಿಶಾಲ್ ಮನೆಯ ಮೇಲೆ ಕೆಲ ದುರುಳರು ಕಲ್ಲುಗಳ ಮೂಲಕ ಧಾಳಿ ನಡೆಸಿದ್ದು, ಇದರಿಂದಾಗಿ ವಿಶಾಲ್ ಮನೆಯ ಕಿಟಕಿ ಗ್ಲಾಸ್ ಗಳು ಹೊಡೆದು ಹೋಗಿದೆ. ಕೆಲವು ದುರುಳರು ಕೆಂಪು ಬಣ್ಣದ ಕಾರಿನ ಮೂಲಕ ಬಂದು ವಿಶಾಲ್ ಮನೆಯ ಮೇಲೆ ಏಕಾಏಕಿ ಕಲ್ಲುಗಳ ಮೂಲಕ ಧಾಳಿ ಮಾಡಿದ್ದಾರೆ. ಬಳಿಕ ಅಲ್ಲಿಂದ ಅದೇ ಕಾರಿನ ಮೂಲಕ ಓಡಿ ಹೋಗಿದ್ದಾರೆ. ಈ ದಾಳಿಯ ದೃಶ್ಯಗಳು ವಿಶಾಲ್ ಮನೆಯ ಸುತ್ತಮುತ್ತಲಿನ ಕೆಲವೊಂದು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಆದರೆ ಈ ದಾಳಿ ನಡೆಯುವಾಗ ವಿಶಾಲ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಶೂಟಿಂಗ್ ಕೆಲಸ ನಿಮಿತ್ತ ವಿಶಾಲ್ ಬ್ಯುಸಿಯಾಗಿದ್ದಾರೆ. ಅನೇಕ ವರ್ಷಗಳಿಂದ ವಿಶಾಲ್ ಅನ್ನಾ ನಗರ್‍ ಎಂಬಲ್ಲಿರುವ ಮನೆಯಲ್ಲಿ ತನ್ನ ತಂದೆತಾಯಿಯೊಂದಿಗೆ ವಾಸವಾಗಿದ್ದರು. ಇದೀಗ ಇದೇ ಮನೆಯ ಮೇಲೆಯೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೂ ಈ ದಾಳಿಯ ಕುರಿತಂತೆ ನಟ ವಿಶಾಲ್ ಮ್ಯಾನೇಜರ್‍ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪೊಲೀಸರು ಸಹ ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ವಿಶಾಲ್ ಮನೆಯ ಮೇಲೆ ಈ ದಾಳಿ ನಡೆಸಲು ಯಾರು ಕಾರಣ ಏನು ಎಂಬುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಸಿನಿರಂಗದಲ್ಲಿ ವಿಶಾಲ್ ರವರಿಗೆ ತುಂಬಾ ಶತ್ರುಗಳಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ನಡಿಗರ್‍ ಎಂಬ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ತಮಿಳುನಾಡಿಗೆ ಸೇರಿದ ನಡಿಗರ್‍ ಎಂಬ ಸಂಘಟನೆಯ ಮೇಲೆ ತೆಲುಗಿಗೆ ಸೇರಿದ ವಿಶಾಲ್ ಕಾರ್ಯದರ್ಶಿಯಾಗಿರುವುದು ಯಾಕೆ ಎಂಬ ಪ್ರಶ್ನೆಗಳು ಸಹ ಕೇಳಿಬರುತ್ತಿವೆ. ವಿಶಾಲ್ ಸ್ಥಳೀಯರಲ್ಲ ಅವರಿಗೆ ಆ ಜವಬ್ದಾರಿಯಿಂದ  ತೊಲಗಿಸಬೇಕೆಂದೂ ಸಹ ಹೇಳಿಕೆಗಳು ಕೇಳಿಬರುತ್ತಿವೆ.

ಅಷ್ಟೇಅಲ್ಲದೇ ಬೃಹತ್ ನಿರ್ಮಾಣ ಸಂಸ್ಥೆ ಲೈಕಾ ಹಾಗೂ ವಿಶಾಲ್ ನಡುವೆ ವಿವಾದವೊಂದು ಸಹ ನಡೆಯುತ್ತಿದೆ. ಇನ್ನೂ ಸದ್ಯ ವಿಶಾಲ್ ಲಾಠಿ, ಮಾರ್ಕ್ ಆಂಟೋನಿ ಮೊದಲಾದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಲಾಠಿ ಸಿನೆಮಾದ ಕೆಲಸಗಳೂ ಸಹ ಪೂರ್ಣ ಗೊಂಡಿದ್ದು ಶೀಘ್ರದಲ್ಲೇ ಬಿಡುಗಡೆ ಸಹ ಆಗಲಿದೆ. ಲಾಠಿ ಸಿನೆಮಾದ ಶೂಟಿಂಗ್ ಸಮಯದಲ್ಲಿ ಸಹ ವಿಶಾಲ್ ಕೆಲವು ಬಾರಿ ಪ್ರಮಾದಕ್ಕೆ ಗುರಿಯಾಗಿದ್ದಾರೆ. ಇದೀಗ ನಟ ವಿಶಾಲ್ ಮನೆಯ ಮೇಲೆ ದಾಳಿ ನಡೆದಿದ್ದು, ಅವರ ಅಭಿಮಾನಿಗಳಲ್ಲಿ ಆಂತಕ ಮನೆ ಮಾಡಿದೆ.

Trending

To Top