ನಾನು ಪ್ರೀತಿಸುವ ಹುಡುಗಿ ಯಾರು ಎಂಬುದನ್ನು ಶೀಘ್ರದಲ್ಲೇ ಹೇಳುತ್ತೇನೆ ಎಂದ ತಮಿಳು ನಟ..!

ಕಾಲಿವುಡ್ ನ ಸ್ಟಾರ್‍ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದಾರೆ. ಆತ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಸದ್ಯ ವಿಶಾಲ್ 44 ರ ವಯಸ್ಸಿನವರಾಗಿದ್ದಾರೆ. ಆದರೂ ಸಹ ಈತ ಇನ್ನೂ ಮದುವೆಯಾಗಿಲ್ಲ. ವಿಶಾಲ್ ರವರ ವಯಸ್ಸಿನ ಹಾಗೂ ಅವರಿಗಿಂತ ಚಿಕ್ಕವರೂ ಸಹ ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಆದರೆ ವಿಶಾಲ್ ಮಾತ್ರ ಇನ್ನೂ ಮದುವೆಯಾಗಿಲ್ಲ. ಕಳೆದ ಮೂರು ವರ್ಷಗಳ ಹಿಂದೆಯೇ ವಿಶಾಲ್ ಮದುವೆಯಾಗಬೇಕಿತ್ತು. ಕಾರಣಾಂತರಗಳಿಂದ ನಡೆದಿಲ್ಲ. ಇದೀಗ ವಿಶಾಲ್ ಮದುವೆಯ ವಿಚಾರ ಮತ್ತೆ ಚರ್ಚೆ ಶುರುವಾಗಿದೆ.

ಇನ್ನೂ ಸಿನಿರಂಗದಲ್ಲಿ ಇನ್ನೂ ಅನೇಕ ಸ್ಟಾರ್‍ ನಟರು ಮದುವೆಯಾಗಿಲ್ಲ. ಕೆಲವು ದಿನಗಳ ಕಾಲ ವಿಶಾಲ್ ವರಲಕ್ಷ್ಮೀ ಶರತ್ ಕುಮಾರ್‍ ಜೊತೆ ಡೇಟಿಂಗ್ ನಡೆಸಿದ್ದರು.  ಬಳಿಕ ತೆಲುಗು ಹುಡುಗಿ ಅನಿಷಾ ರೆಡ್ಡಿಯವರ ಜೊತೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ಈಕೆಯ ಜೊತೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಸಹ ಸಿದ್ದರಾಗಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಮದುವೆ ಕ್ಯಾನ್ಸಲ್ ಆಗಿದೆ. ಬಳಿಕ ಅನಿಷಾ ರೆಡ್ಡಿ ಉದ್ಯಮಿಯೊಬ್ಬರ ಜೊತೆ ವಿವಾಹವಾದರು. ಬಳಿಕ ವಿಶಾಲ್ ಜೊತೆಗಿನ ನಿಶ್ಚಿತಾರ್ಥದ ಪೊಟೋಗಳನ್ನು ಸಹ  ಡಿಲೀಟ್ ಮಾಡಿದ್ದರು.  ಇನ್ನೂ ಸದ್ಯ ವಿಶಾಲ್ ನಡಿಗರ್‍ ಎಂಬ ಸಂಘದ ಅಧ್ಯಕ್ಷರಾಗಿದ್ದಾರೆ. ಸಂಘದ ಕಟ್ಟಡ ನಿರ್ಮಾಣವಾದ ಬಳಿಕ ಮದುವೆಯಾಗುವುದಾಗಿ ಸಹ ತಿಳಿಸಿದ್ದಾರೆ.

ನಟ ವಿಶಾಲ್ ನಡಿಗರ್‍ ಎಂಬ ಸಂಘದ ಅಧ್ಯಕ್ಷರಾಗಿ ಸಂಘದ ಅಭಿವೃದ್ದಿಗಾಗಿ ತುಂಬಾನೆ ಶ್ರಮ ವಹಿಸುತ್ತಿದ್ದಾರೆ. ಸಂಘದ ಕಟ್ಟಡ ನಿರ್ಮಾಣಕ್ಕಾಗಿ ತುಂಬಾನೆ ಶ್ರಮಿಸುತ್ತಿದ್ದಾರೆ. ಸದ್ಯ ಆತ ಸಂಘದ ಕಟ್ಟಡ ನಿರ್ಮಾಣವಾದ ಬಳಿಕ ಆತ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಜೊತೆಗೆ ಆತ ಪ್ರೀತಿಯಲ್ಲಿ ಬಿದ್ದಿರುವುದಾಗಿ ಸಹ ಹೇಳಿದ್ದಾರೆ. ತಾನು ಸದ್ಯ ಒಂದು ಹುಡುಗಿಯ ಜೊತೆಗೆ ಪ್ರೀತಿಯಲ್ಲಿದ್ದು, ಶೀಘ್ರದಲ್ಲೇ ಆಕೆ ಯಾರು ಎಂಬುದನ್ನು ಹೇಳುತ್ತೇನೆ, ಜೊತೆಗೆ ಶೀಘ್ರದಲ್ಲೇ ಮದುವೆ ಸಹ ಆಗುತ್ತೇನೆ ಎಂದು ಹೇಳಿದ್ದಾರೆ. ದೊಡ್ಡವರು ಮಾಡಿದ ಮದುವೆ ನನಗೆ ಸೆಟ್ ಆಗುತ್ತಿಲ್ಲ. ಆದ ಕಾರಣ ಪ್ರೀತಿಸಿ ಮದುವೆಯಾಗಲು ಸಿದ್ದವಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇನ್ನೂ ವಿಶಾಲ್ ತಾನು ಪ್ರೀತಿಸಿದ ಹುಡುಗಿಯ ಹೆಸರನ್ನೂ ಸಹ ಶೀಘ್ರದಲ್ಲೇ ರಿವೀಲ್ ಮಾಡುವುದಾಗಿ ಹೇಳಿದ್ದು, ಆಕೆಯನ್ನೇ ಮದುವೆಯಾಗುತ್ತಾರಂತೆ. ಈ ವಿಚಾರಗಳನ್ನು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ವಿಶಾಲ್ ನಿಜಕ್ಕೂ ಪ್ರೀತಿಸಿ ಮದುವೆಯಾಗಲಿದ್ದಾರಾ, ಅಥವಾ ಸುಳ್ಳು ಹೇಳಿದರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಎ.ವಿನೋದ್ ಕುಮಾರ್‍ ಎಂಬ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬರುತ್ತಿರುವ ಲಾಠಿ ಸಿನೆಮಾದಲ್ಲಿ ನಟ ವಿಶಾಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಮಯದಲ್ಲಿ ವಿಶಾಲ್ ಗೆ ಅಪಘಾತವಾಗಿ ಶೂಟಿಂಗ್ ಸ್ಥಗಿತಗೊಂಡಿತ್ತು.

Previous articleಆರ್.ಜಿ.ವಿ ಸಿನೆಮಾ 40 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆಯಂತೆ…, ಹೊಸ ರೆಕಾರ್ಡ್ ಸೃಷ್ಟಿಸಬಹುದೇ?
Next articleಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಮಾಡುವ ಲುಕ್ಸ್ ಕೊಟ್ಟ ಮೌನಿ ರಾಯ್…!