Saturday, May 21, 2022
HomeFilm Newsಕಮಲ್ ಹಾಸನ್ ವಿಕ್ರಮ್ ಸಿನೆಮಾದಲ್ಲಿ ನಾಲ್ಕು ಮಂದಿ ಹಿರೋಗಳು….

ಕಮಲ್ ಹಾಸನ್ ವಿಕ್ರಮ್ ಸಿನೆಮಾದಲ್ಲಿ ನಾಲ್ಕು ಮಂದಿ ಹಿರೋಗಳು….

ಯೂನಿವರ್ಸಲ್ ಹಿರೋ ಕಮಲ್ ಹಾಸನ್ ನಟಿಸಿರುವ ಬಹುನಿರೀಕ್ಷಿತ ವಿಕ್ರಮ್ ಸಿನೆಮಾದಲ್ಲಿ ನಾಲ್ಕು ಮಂದಿ ಹಿರೋಗಳು ಕಾಣಿಸಿಕೊಳ್ಳಲಿದ್ದಾರೆ. ಸುಮಾರು ವರ್ಷಗಳ ಬಳಿಕ ಕಮಲ್ ಹಾಸನ್ ಬಿಗ್ ಕಮರ್ಷಿಯಲ್ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಈ ಸಿನೆಮಾ ಮೇಲೆ ಈಗಾಗಲೇ ದೊಡ್ಡದಾಗಿಯೇ ನಿರೀಕ್ಷೆ ಹುಟ್ಟಿಕೊಂಡಿದೆ. ಲೊಕೇಶ್ ಕನಕರಾಜು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನೆಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಗಳು ನಡೆಯುತ್ತಿವೆ.

ಈಗಾಗಲೇ ಅನೇಕ ಹಿಟ್ ಸಿನೆಮಾಗಳನ್ನು ಮಾಡಿರುವ ಲೊಕೇಶ್ ಕನಕರಾಜು ಬಿಗ್ ಬಜೆಟ್ ವಿಕ್ರಮ್ ಸಿನೆಮಾ ಮೂಲಕ ತಮ್ಮ ಹೈಪ್ ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಈ ವಿಕ್ರಮ್ ಸಿನೆಮಾದಲ್ಲಿ ಕಾಲಿವುಡ್ ನ ಸ್ಟಾರ್‍ ನಟರಾದ ವಿಜಯ್ ಸೇತುಪತಿ, ಮಲಯಾಳಂ ಸ್ಟಾರ್‍ ಫಹಾದ್ ಫಾಸಿಲ್ ಸಹ ಬಣ್ಣ ಹಚ್ಚಿರುವುದು ಈ ಸಿನೆಮಾದ ಕ್ರೇಜ್ ಮತಷ್ಟು ಕಾರಣವಾಗಿದೆ ಎನ್ನಲಾಗುತ್ತಿದೆ. ಇನ್ನೂ ಇದೇ ಸಿನೆಮಾದಲ್ಲಿ ಮತ್ತೊರ್ವ ಸ್ಟಾರ್‍ ನಟ ಸಹ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖ ಅತಿಥಿ ಪಾತ್ರದಲ್ಲಿ ಈ ನಟ ಕಾಣಿಸಿಕೊಳ್ಳಲಿದ್ದು, ಈ ಕುರಿತು ಸಿನಿರಂಗದಲ್ಲಿ ಹರಿದಾಡುತ್ತಿದೆ.

ಇನ್ನೂ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಈ ಮೂರು ಜನ ಸ್ಟಾರ್‍ ಗಳು ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುವ ವಿಚಾರ ಅಭಿಮಾನಿಗಳಿಗೆ ಸಿನೆಮಾದ ಮೇಲೆ ಕುತೂಹಲ ಹೆಚ್ಚಲು ಕಾರಣವಾಗಿದೆ. ಇನ್ನೂ ಇದೀಗ ಮತ್ತೊಂದು ಸುದ್ದಿಯ ಪ್ರಕಾರ ಕಾಲಿವುಡ್ ಸ್ಟಾರ್‍ ಸೂರ್ಯ ಸಹ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತ್ಯಂತ ಪ್ರಮುಖ ಅತಿಥಿ ಪಾತ್ರದಲ್ಲಿ ಸೂರ್ಯ ಎಂಟ್ರಿ ನೀಡಲಿದ್ದಾರಂತೆ. ಈ ನಾಲ್ವರು ಸ್ಟಾರ್‍ ಗಳನ್ನು ಒಂದೇ ತೆರೆ ಮೆಲೆ ತರಲು ನಿರ್ದೇಶಕ ಲೊಕೇಶ್ ಕನಗರಾಜ್ ಸಿದ್ದವಾಗಿದ್ದು ಸಿನೆಮಾ ಮೇಲಿನ ಕ್ರೇಜ್ ಅನ್ನು ಹೆಚ್ಚಿಸಿದ್ದಾರೆ.

ಇನ್ನೂ ಕಮಲ್ ಹಾಸನ್ ರವರ ರೇಂಜಿಗೆ ತಕ್ಕಂತೆ ಈ ಸಿನೆಮಾ ಸಿದ್ದವಾಗಿದೆ. ಕಮಲ್ ಹಾಸನ್ ಸಹ ನಿರ್ದೇಶಕ ಲೊಕೇಶ್ ಕನಗರಾಜ್ ರವರ ಮೇಲಿನ ನಂಬಿಕೆಯ ಮೇರೆಗೆ ಸಿನೆಮಾವನ್ನು ಒಪ್ಪಿಕೊಂಡಿದ್ದರಂತೆ. ಇನ್ನೂ ಸಿನೆಮಾದಲ್ಲಿ ನಾಲ್ಕು ಮಂದಿ ಸ್ಟಾರ್‍ ಹಿರೋಗಳು ಇರುವ ಕಾರಣ ಸಿನೆಮಾ ಬೇರೆ ಲೆವೆಲ್ ನಲ್ಲೇ ಇರುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ನಟ ಸೂರ್ಯ ಎಂಟ್ರಿ ಕೊಡುವ ಕಾರಣ ಸಿನೆಮಾ ಮೇಲೆ ದುಪ್ಪಟ್ಟು ನಿರೀಕ್ಷೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಟ್ರೈಲರ್‍ ಸಹ ಇದೇ ಮೇ.15 ರಂದು ಬಿಡುಗಡೆಯಾಗಲಿದೆ.

- Advertisement -

You May Like

More