News

ಮಳೆ ಬಗ್ಗೆ ಭವಿಷ್ಯ ನುಡಿದಿದ್ದಾರೆ ಕೋಡಿ ಮಠದ ಶ್ರೀಗಳು

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಆರ್ಭಟ ಇದೀಗ ಭಾರಿ ಜೋರಾಗಿದೆ. ಕಳೆದ ಎರಡು ದಿನಗಳಂತೂ ಸಿಕ್ಕಾಪಟ್ಟೆ ಮಳೆ ಸುರಿದಿದ್ದು ತಿರುಪತಿ ಸೇರಿದಂತೆ ದೇವಾಲಯಗಳು ಕೂಡ ಈ ಮಳೆ ಬಿಡುತ್ತಿಲ್ಲ. ಕರ್ನಾಟಕ ತಮಿಳುನಾಡು ಆಂಧ್ರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆ ಆಗುತ್ತಿರುವುದರಿಂದ ಜನಜೀವನ ಅಸ್ವಸ್ಥವಾಗಿದೆ.

ಇನ್ನು ಈ ಮಳೆ ಚಂದ್ರ ಗ್ರಹಣ ಸಮಯದಲ್ಲಿ ಬಂದಿರುವುದರಿಂದ ಮಳೆ ಮತ್ತು ಚಂದ್ರಗ್ರಹಣದ ಅವಾಂತರದಿಂದ ಯಾವೆಲ್ಲ ಅಪಾಯ ಕಾದಿದೆ ಎನ್ನುವ ಭಯಾನಕ ಭವಿಷ್ಯವನ್ನ ಇದೀಗ ಕೋಡಿ ಮಠದ ಶ್ರೀಗಳು ನುಡಿದಿದ್ದಾರೆ. ಈ ಹಿಂದೆ ಕೊಡಿ ಮಠದ ಶ್ರೀಗಳು ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿವೆ. ಇದೀಗ ಶ್ರೀಗಳು ರಾಜ್ಯದಲ್ಲಿ ಮಳೆ ಕಾಟ ಕಾರ್ತಿಕ ಮುಗಿಯುವ ವರೆಗೂ ಮಳೆ ನಿಲ್ಲುವುದಿಲ್ಲ ಮಳೆ ಹೆಚ್ಚಾಗುವ ಲಕ್ಷಣ ಇದೆ ಕಾರ್ತಿಕ ಕಳೆಯುವ ವರೆಗೂ ಮಳೆ ಇದ್ದೆ ಇರುತ್ತದೆ.

ಸದ್ಯ ಪ್ರಕೃತಿ ವಿಕೋಪವಾಗಿದೆ ಏನು ಮಾಡಲು ಆಗುವುದಿಲ್ಲ. ಪ್ರಕೃತಿಯ ಮುಂದೆ ನಾವು ಏನು ಮಾಡಿದರೂ ಕೂಡ ಪ್ರಕೃತಿಯೇ ಗೆಲ್ಲುವುದು. ಸಂಕ್ರಾಂತಿ ವರೆಗೂ ಮಳೆ ಇರುತ್ತದೆ ಇದು ಅಕಾಲಿಕ ಮಳೆ ಈ ತಿಂಗಳಲ್ಲಿ ಚಳಿ ಇರುತ್ತದೆ ಮಳೆ ಆಗುವುದಿಲ್ಲ ಆದರೆ ಬಾರಿ ಮಳೆ ಆಗುತ್ತಿರುವುದು ಖಂಡಿತ ಅಪಾಯದ ಮುನ್ಸೂಚನೆ. ದೇಶ ಮತ್ತು ರಾಜ್ಯಕ್ಕೆ ಇದರಿಂದ ಖಂಡಿತ ಗಂಡಾಂತರ ಇದೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಇದು ಒಂಥರ ರಾಜ್ಯಕ್ಕೆ ಜಲ ಗಂಡಾಂತರ ಇದ್ದಂತೆ ಕೊರೋನ ಇನ್ನು ಹೆಚ್ಚಾಗಲಿದೆ ಆದರೂ ಕೂಡ ಧೈವ ಕೃಪೆಯಿಂದ ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂದು ಆಶಾ ಭಾವನೆಯನ್ನ ಕೂಡ ಕೊಡಿ ಶ್ರೀಗಳು ನುಡಿದಿದ್ದಾರೆ.

Trending

To Top