ಪ್ರೇಯಸಿಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿ ಕೆ.ಎಲ್.ರಾಹುಲ್, ವೈರಲ್ ಆಯ್ತು ರಾಹುಲ್ ಪೋಸ್ಟ್….!

ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನ ಸ್ಟಾರ್‍ ಕಿಡ್ ಆತಿಯಾ ಶೆಟ್ಟಿ ಪ್ರೇಮ ಪ್ರಕ್ಷಿಗಳಂತೆ ಉರೂರು ಸುತ್ತುತ್ತಿದ್ದಾರೆ. ಈಗಾಗಲೇ ದೇಶ ವಿದೇಶಗಳೆಂದು ಪ್ರೇಮ ಪಕ್ಷಗಳಂತೆ ಹಾರಾಡುತ್ತಿದ್ದಾರೆ. ಶೀಘ್ರದಲ್ಲೇ ಇವರ ಮದುವೆ ಸಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಕೆ.ಎಲ್.ರಾಹುಲ್ ತನ್ನ ಪ್ರೀತಿಯ ಹುಡುಗಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ವಿಶೇಷವಾಗಿ ಕೋರಿದ್ದಾರೆ. ಸದ್ಯ ರಾಹುಲ್ ಶುಭಾಷಯ ಕೋರಿರುವ ಪೋಸ್ಟ್ ವೈರಲ್ ಆಗಿದೆ.

ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಕ್ರಿಕೆಟ್ ಹಾಗೂ ಸಿನೆಮಾ ರಂಗಗಳೂ ಸಹ ಸೇರಿದೆ. ಈಗಾಗಲೇ ಕ್ರಿಕೆಟಿಗರು ಹಾಗೂ ಸಿನಿರಂಗದ ಅನೇಕರು ಮದುವೆಯಾಗಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಹಾಗೂ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಇವರು ಪ್ರೀತಿಸುತ್ತಿರುವ ವಿಚಾರವನ್ನು ಸಹ ಸೋಷಿಯಲ್ ಮಿಡಿಯಾ ಮೂಲಕವೇ ಬಹಿರಂಗಪಡಿಸಿದ್ದರು. ಜೊತೆಗೆ ಇವರ ಮದುವೆಗೆ ಸುನೀಲ್ ಶೆಟ್ಟಿ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗಷ್ಟೆ ಆತಿಯಾ ಶೆಟ್ಟಿ ಸಿನೆಮಾಗಳಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಾಹುಲ್ ಜೊತೆಗೆ ಪ್ರೀತಿಗೆ ಬಿದ್ದ ಬಳಿಕ ಸಿನೆಮಾಗಳಲ್ಲಿ ಅವಕಾಶಗಳೂ ಸಹ ಕಡಿಮೆಯಾಗಿದೆ ಎಂಬ ಮಾತುಗಳು ಸಹ ಕೇಳಿಬಂದಿದೆ.

ಇನ್ನೂ ನ.5 ರಂದು ಆತಿಯಾ ಶೆಟ್ಟಿ ಹುಟ್ಟಹಬ್ಬವಾಗಿದ್ದು, ಸಿನೆಮಾ ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ಆತಿಯಾ ಶೆಟ್ಟಿಗೆ ಶುಭಾಷಯಗಳ ಸುರಿಮಳೆಯಾಗಿದೆ. ಆದರೆ ಆತಿಯಾಗೆ ರಾಹುಲ್ ಕೋರಿದ ಶುಭಾಷಯ ತುಂಬಾನೆ ಸ್ಪೇಷಲ್ ಎನ್ನಲಾಗಿದೆ. ಕೆ.ಎಲ್.ರಾಹುಲ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಶುಭಾಷಯ ಕೋರಿದ್ದಾರೆ. ನನ್ನ ಜೋಕರ್‍ ಗೆ ಹುಟ್ಟುಹಬ್ಬದ ಶುಭಾಷಯಗಳು, ನೀನು ಪ್ರತಿಯೊಂದು ವಿಷಯವನ್ನೂ ಗ್ರೇಟ್ ಆಗಿ ಮಾಡಬೇಕು ಎಂದು ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಗೆ ನಟ ಸುನೀಲ್ ಶೆಟ್ಟಿ ಸಹ ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಆತಿಯಾ ಶೆಟ್ಟಿ ಸಹ ಲವ್ ಯು ಎಂದು ರಿಪ್ಲೆ ಕೊಟ್ಟಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್  ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಈ ಜೋಡಿಯ ಮದುವೆ ಮುಂದಿನ ಜನವರಿ ಮಾಹೆಯಲ್ಲಿ ನಡೆಯಲಿದ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನೂ ತಮ್ಮ ಮಗಳ ಮದುವೆಯ ಬಗ್ಗೆ ಸುನೀಲ್ ಶೆಟ್ಟಿ ಸಹ ಒಮ್ಮೆ ಮಾತನಾಡಿದ್ದರು. ಕೆ.ಎಲ್.ರಾಹುಲ್ ಎಂದರೇ ನನಗೆ ತುಂಬಾ ಇಷ್ಟ ಅವರಿಬ್ಬರೂ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಇನ್ನೂ ಅವರ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಹೊರಬಂದಿಲ್ಲ.

Previous articleಅಲ್ಲರಿ ನರೇಶ್ ನನ್ನ ಗೌರವವನ್ನು ಕಾಪಾಡಿದರು ಎಂದ ಹಾಸ್ಯ ನಟಿ ಗೀತಾಸಿಂಗ್, ಆಕೆಯನ್ನು ಅವಮಾನಿಸಿದ್ದು ಯಾರು?
Next articleಮದುವೆಯಾಗಿ ಏಳು ತಿಂಗಳ ಕಳೆಯುವುದಕ್ಕೂ ಮುಂಚೆಯೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಆಲಿಯಾ, ಸಿಕ್ಕಾಪಟ್ಟೆ ಟ್ರೋಲ್ಸ್….!