ಶೀಘ್ರದಲ್ಲೇ ಬಾಲಿವುಡ್ ನಲ್ಲಿ ರಾಹುಲ್ ಹಾಗೂ ಆತಿಯಾ ಜೋಡಿಯ ಮದುವೆ..!

ಟೀಂ ಇಂಡಿಯಾದ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನ ಸ್ಟಾರ್‍ ಕಿಡ್ ಆತಿಯಾ ಶೆಟ್ಟಿ ಪ್ರೇಮ ಪ್ರಕ್ಷಿಗಳಂತೆ ಉರೂರು ಸುತ್ತುತ್ತಿದ್ದಾರೆ. ಈಗಾಗಲೇ ದೇಶ ವಿದೇಶಗಳೆಂದು ಪ್ರೇಮ ಪಕ್ಷಗಳಂತೆ ಹಾರಾಡುತ್ತಿದ್ದಾರೆ. ದೇಶದದಲ್ಲಿ ಕ್ರಿಕೆಟ್ ಹಾಗೂ ಸಿನೆಮಾ ರಂಗಗಳು ಅತೀ ಶ್ರೀಮಂತ ಉದ್ಯಮಗಳಾಗಿವೆ. ಎರಡೂ ರಂಗಗಳಿಗೂ ದೊಡ್ಡ ಅಭಿಮಾನಿ ಬಳಗವೇ ಇದೆ. ಈಗಾಗಲೇ ಸಿನೆಮಾ ತಾರೆಯರನ್ನು ಅನೇಕ ಕ್ರಿಕೆಟಿಗರು ವರಿಸಿ ಸಪ್ತಪದಿ ಸಹ ತುಳಿದಿದ್ದು, ಇದೀಗ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿಯವರ ಸರದಿಯಾಗಿದೆ. ಇನ್ನೂ ಈ ಜೋಡಿಯ ಮದುವೆ ದಿನಾಂಕ ಸಹ ಶೀಘ್ರದಲ್ಲೆ ರಿವೀಲ್ ಆಗಲಿದೆ.

ಸುಮಾರು ದಿನಗಳಿಂದ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಸುನೀಲ್ ಶೆಟ್ಟಿ ಮಗಳಾದ ಆತಿಯಾ ಶೆಟ್ಟಿ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಈಗಾಗಲೇ ಅವರು ಫ್ರೀ ಬರ್ಡ್ಸ್ ಗಳಂತೆ ಹಾರಾಡುತ್ತಿದ್ದಾರೆ. ಇವರು ಪ್ರೀತಿಸುತ್ತಿರುವ ವಿಚಾರವನ್ನು ಸಹ ಇತ್ತೀಚಿಗಷ್ಟೆ ಈ ಜೋಡಿ ಸೋಷಿಯಲ್ ಮಿಡಿಯಾ ಮೂಲಕವೇ ಬಹಿರಂಗಪಡಿಸಿದ್ದರು. ಜೊತೆಗೆ ಇವರ ಮದುವೆಗೆ ಸುನೀಲ್ ಶೆಟ್ಟಿ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ನಟಿ ಆತಿಯಾ ಶೆಟ್ಟಿ ಇತ್ತೀಚಿಗಷ್ಟೆ ನಿಧಾನಕ್ಕೆ ಸಿನೆಮಾಗಳಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಸಿನಿರಂಗಕ್ಕೆ ಎಂಟ್ರಿಕೊಟ್ಟ ಬೆನ್ನೆಲ್ಲೆ ಆತಿಯಾ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆ ಪ್ರೀತಿಗೆ ಬಿದ್ದರು. ಇದರಿಂದ ಆತಿಯಾಗೆ ಸಿನೆಮಾಗಳಲ್ಲಿ ಆಫರ್‍ ಗಳು ಬರುತ್ತಿಲ್ಲ ಎಂಬ ಮಾತುಗಳು ಸಹ ಬಾಲಿವುಡ್ ಸಿನಿರಂಗದಲ್ಲಿ ಹರಿದಾಡುತ್ತಿದೆ.

ಸದ್ಯ ರಾಹುಲ್ ಹಾಗೂ ಆತಿಯಾ ಮದುವೆಗೆ ಸಿದ್ದವಾಗಿದ್ದಾರೆ. ಈಗಾಗಲೇ ಮದುವೆಗೆ ಸಂಬಂಧಿಸಿದ ಕೆಲಸಗಳೂ ಸಹ ಪ್ರಾರಂಭವಾಗಿದೆಯಂತೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ರಾಹುಲ್ ಹಾಗೂ ಆತಿಯಾ ಶೆಟ್ಟಿ ಕುಟುಂಬಗಳು ಪರಸ್ಪರ ಮಾತನಾಡಿಕೊಂಡಿದ್ದಾರಂತೆ. ಮುಂದಿನ ಮೂರು ತಿಂಗಳ ಒಳಗೆ ಮೂಹೂರ್ತವನ್ನು ಸಹ ಫಿಕ್ಸ್ ಮಾಡಿದ್ದಾರಂತೆ. ಇನ್ನೂ ಈ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟ ಮಾಡುವ ಸಾಧ್ಯತೆ ಸಹ ಹೆಚ್ಚಾಗಿದೆ ಎನ್ನಲಾಗಿದೆ. ಜೊತೆಗೆ ಮದುವೆ ಕಾರ್ಯಕ್ರಮ ಮುಂಬೈನಲ್ಲಿ ಅದ್ದೂರಿಯಾಗಿ ಮಾಡಲು ಪ್ಲಾನ್ ಗಳನ್ನು ಮಾಡುತ್ತಿದ್ದಾರಂತೆ. ಮದುವೆಯ ಬಳಿಕ ಆತಿಯಾ ಹಾಗೂ ರಾಹುಲ್ ಜೀವನ ಸಾಗಿಸಲು ಮುಂಬೈನಲ್ಲೆ ದುಬಾರಿ ಮನೆಯೊಂದನ್ನು ಸಹ ಖರೀದಿ ಮಾಡಿದ್ದಾರಂತೆ. ಮದುವೆ ಕೆಲಸಗಳೂ ಸಹ ಅಲ್ಲಿದಂಲೇ ನಡೆಯಲಿದೆ ಎಂದು ಸಹ ಹೇಳಲಾಗುತ್ತಿದೆ.

ಸದ್ಯ ರಾಹುಲ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆಗಾಗಿ ರಾಹುಲ್ ಹಾಗೂ ಆತಿಯಾ ಜರ್ಮನಿಗೆ ತೆರಳಿದ್ದಾರೆ. ಅಲ್ಲೆ ಒಂದು ತಿಂಗಳ ಕಾಲ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆ.ಎಲ್.ರಾಹುಲ್ ಸಹ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಜವಾಭ್ದಾರಿ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ಜೋಡಿಯ ಮದುವೆಯ ವಿಚಾರ ಬಾಲಿವುಡ್ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

Previous articleಕಡಲ ತೀರದಲ್ಲಿ ಬಿಕಿನಿಯಲ್ಲಿ ಪೋಸ್ ಕೊಟ್ಟ ಪೂಜಾ ಹೆಗ್ಡೆ, ಮಳೆಗಾಲದಲ್ಲೂ ಬಿಸಿ ಏರಿಸಿದ ನಟಿ..!
Next articleಒಂದು ಎಪಿಸೋಡ್ ಗೆ ಕಾಜೋಲ್ ತೆಗೆದುಕೊಂಡಿದ್ದು 5 ಕೋಟಿಯಂತೆ…!