ಕರ್ನಾಟಕ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿಗೆ ಈ ವರ್ಷ, ಕರ್ನಾಟಕದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ಕಾರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳು ಭಾಜನರಾಗಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಆದ ಕೆ.ಎಸ್.ರಾಹುಲ್, ಮಾಯಾಂಕ್ ಅಗರ್ವಾಲ್, ಫವಾದ್ ಮಿರ್ಜಾ, ಈಜುಪಟು ದಿನೇಶ್, ಶ್ರೀಹರಿ ನಟರಾಜ್, ಅಥ್ಲೆಟ್ ಜೆ.ವಿಜಯಕುಮಾರಿ ಸೇರಿದಂತೆ 31 ಕ್ರೀಡಾಪಟುಗಳು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಸರ್ಕಾರ ತಮಗೆ ಏಕಲವ್ಯ ಪ್ರಶಸ್ತಿ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಓಪನಿಂಗ್ ಬ್ಯಾಟ್ಸ್ಮನ್ ಹಾಗೂ ಐಪಿಎಲ್ ನಲ್ಲಿ ಕಿಂಗ್ 11 ಪಂಜಾಬ್ ತಂಡದ ನಾಯಕ ಬೆಂಗಳೂರು ಮೂಲದ ಕೆ.ಎಲ್.ರಾಹುಲ್ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.
“ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು,” ಎಂದು ಟ್ವೀಟ್ ಮಾಡಿ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ ಕೆ.ಎಲ್.ರಾಹುಲ್.
ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ.
ಮತ್ತೊಮ್ಮೆ ಧನ್ಯವಾದಗಳು 🙏— K L Rahul (@klrahul) November 2, 2020
ರಾಹುಲ್ ಕನ್ನಡದಲ್ಲಿ ಟ್ವೀಟ್ ಮಾಡಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಐಪಿಎಲ್ ನಲ್ಲಿ ಭರ್ಜರಿಯಾಗಿ ಆಡುವ ಮೂಲಕ ಕೆ.ಎಲ್.ರಾಹುಲ್ ರ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗುತ್ತಿದೆ. ಕಿಂಗ್ಸ್ 11 ಪಂಜಾಬ್ ತಂಡದ ಸಾರಥ್ಯ ವಹಿಸಿ, ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ತಾವು ಎಂತಹ ಬಲಿಷ್ಠ ಆಟಗಾರ ಎಂಬುದನ್ನು ರಾಹುಲ್ ನಿರೂಪಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ ರಾಹುಲ್.
ರಾಹುಲ್ ಬಹಳ ಚೆನ್ನಾಗಿ ಆಟ ಆಡಿದರು ಕೂಡ ಈ ವರ್ಷ ಐಪಿಎಲ್ ನಲ್ಲಿ ಅವರ ಕಿಂಗ್ಸ್ 11 ಪಂಜಾಬ್ ಪ್ಲೇ ಆಫ್ಸ್ ತಲುಪಲು ಸಾಧ್ಯವಾಗಿಲ್ಲ. ಸಿ.ಎಸ್.ಕೆ ಜೊತೆ ನಡೆದ ಪಂದ್ಯದಲ್ಲಿ ಸೋತ ನಂತರ ಐಪಿಎಲ್ ಟೂರ್ನಿ ಇಂದ ಹೊರನಡೆಯುವ ಹಾಗಾಯಿತು. ಆದರೆ ತಂಡದ ನಾಯಕನಾಗಿ, ಕ್ರಿಕೆಟ್ ಪಟುವಾಗಿ ಕೆ.ಎಲ್.ರಾಹುಲ್ ನೀಡಿರುವ ಆಟದ ಪ್ರದರ್ಶನ ನೆನಪಿನಲ್ಲಿ ಇಟ್ಟುಕೊಳ್ಳುವಂಥದ್ದು.