Film News

ಸೀತೆಯ ಪಾತ್ರದಲ್ಲಿ ನಟಿ ಕೃತಿ ಸನೋನ್!

ಮುಂಬೈ: ಬಾಲಿವುಡ್ ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿ ಕೃತಿ ಸನೋನ್ ರಾಮಾಯಣ ಕುರಿತ ಚಲನಚಿತ್ರವೊಂದರಲ್ಲಿ ಸೀತೆಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸುತ್ತಿರುವ ಆದಿಪುರುಷ್ ಎಂಬ ಸಿನಿಮಾದಲ್ಲಿ ಕೃಷಿ ಸನೋನ್ ಸೀತಾ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ 2021 ರಲ್ಲಿ ಪ್ರಾರಂಭವಾಗಲಿದ್ದು, ತಂಡ ಈಗಾಗಲೇ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಜೊತೆಗೆ ಪ್ರಭಾಸ್ ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿರುವುದು ವಿಶೇಷವಾಗಿದ್ದು, ಲಂಕಾಧಿಪತಿಯ ವೇಶದಲ್ಲಿ ಸೈಫ್ ಅಲಿ ಖಾನ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಕೃತಿ ಸನೋನ್ ರವರು ತೆಲುಗಿನ ಸಾಹೋ ಚಿತ್ರದ ನಂತರ ಅನೇಕ ಸಿನೆಮಾಗಳಿಗೆ ಒಪ್ಪಿಗೆ ನೀಡಿದ್ದಾರೆ. ಪ್ರಸ್ತುತ ಅವರ ರಾಧೆಶ್ಯಾಮ್ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಆದಿಪುರುಷ್ ಚಿತ್ರಕ್ಕೆ ನಾಯಕಿಯಾಗಿ ಅನುಷ್ಕಾ ಶರ್ಮಾ, ಕೀರ್ತಿ ಸುರೇಶ್, ಅನುಷ್ಕಾ ಶೆಟ್ಟಿ ಮೊದಲಾದವರ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ ಅಂತಿಮವಾಗಿ ಕೃತಿ ಸನೋನ್ ರವರಿಗೆ ಅವಕಾಶ ಒಲಿದಿದೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆಯೊಂದಷ್ಟೆ ಬಾಕಿಯಿದೆ. ಇದರ ಜೊತೆಗೆ ಮಿಮಿ ಎಂಬ ಸಿನೆಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರಕ್ಕಾಗಿ ೧೫ ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.

ಇನ್ನೂ ಆದಿಪುರುಷ್ ಚಲನಚಿತ್ರ ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬರಲಿದ್ದು, ಸಂಪೂರ್ಣವಾಗಿ 3ಡಿ ರೂಪದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದಾರಂತೆ. ಜನವರಿ 2021 ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ ಆಗಸ್ಟ್ 2021 ತಿಂಗಳಲ್ಲಿ ಕನ್ನಡ, ಹಿಂದಿ ಸೇರಿದಂತೆ ೫ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿ ಚಿತ್ರ ತಂಡವಿದೆ ಎನ್ನಲಾಗಿದೆ.

Trending

To Top