health-Kannada

ಕಿಡ್ನಿ ಬಗ್ಗೆ ಕಾಳಜಿ ಇರುವವರು ತಪ್ಪದೆ ಇದನ್ನು ಓದಿರಿ ಹಾಗು ಇದನ್ನು ಆದಷ್ಟು ಶೇರ್ ಮಾಡಿರಿ

healthy-kidney

ಕಿಡ್ನಿ (ಮೂತ್ರ ಪಿಂಡ) ನಮ್ಮ ದೇಹದ ಒಂದು ಬಹು ಮುಖ್ಯವಾದ ಅಂಗ! ನಾವು ನಮ್ಮ ದಿನ ದಿತ್ಯ ಜೀವನದಲ್ಲಿ ಏನ್ ಏನು ತಿನ್ನುತ್ತೀವೋ ಅದನ್ನೆಲ್ಲಾ ನಮ್ಮ ಕಿಡ್ನಿ ದೇಹದಿಂದ ಹೊರ ಹಾಕುತ್ತದೆ. ಕಿಡ್ನಿ ಅಲ್ಲಿ ಒಂದು ಚೂರು ತೊಂದರೆ ಆದರೆ ನಮ್ಮ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ! ನಿತ್ಯದ ಚಟುವಟಿಕೆಗಳಿಗೆ ಅಗತ್ಯವಿರುವ ಶಕ್ತಿಯನ್ನು ಪಡೆಯಲು ನಾವು ಘನ ಮತ್ತು ದ್ರವ ಆಹಾರವನ್ನು ಸೇವಿಸ ಬೇಕಾಗುತ್ತದೆ. ನಾವು ತಿನ್ನುವ ಆಹಾರಗಳು ಆರೋಗ್ಯಕರವಾಗಿರುವ ಜೊತೆಗೆ ರುಚಿಕರವಾಗಿಯೂ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ನಾವೆಲ್ಲಾ ರುಚಿಗೆ ಹೆಚ್ಚು ಮಹತ್ವ ನೀಡುವ ಕಾರಣ, ನಮ್ಮ ದೇಹಕ್ಕೆ ಬೇಕಾಗುವ ಅಗತ್ಯ ಅಂಶಗಳು ನಾವು ಸೇವಿಸದ ಕಾರಣ ನಮ್ಮ ದೇಹದಲ್ಲಿರುವ ಅಂಗಗಳಿಗೆ ಇದ್ದರಿಂದ ಪರಿಣಾಮ ಬೀರುತ್ತದೆ. ಕಿಡ್ನಿ ನಮ್ಮ ಹೊಟ್ಟೆಯ ಹಿಂಬಾಗದಲ್ಲಿ, ನಡುಬೆನ್ನಿನಲ್ಲಿ ಇರುವ, ಪಿಕ್ಕೆಲುಬುಗಳ ಕೆಳಗೆ ಇರುತ್ತದೆ. ನಿಮ್ಮ ಕಿಡ್ನಿ ಅಲ್ಲಿ ತೊಂದರೆ ಇದೆ ಎಂದು ಈ 6 ಸೂಚನೆಗಳಿಂದ ನಿಮಗೆ ತಿಳಿಯುತ್ತದೆ, ತಪ್ಪದೆ ಇದನ್ನು ಓದಿರಿ ಹಾಗು ಶೇರ್ ಮಾಡಿರಿ, ಯಾರಿಗ್ ಆದರು ಸಹಾಯ ಆಗುತ್ತದೆ.
ಸೂಚನೆ 01 – ಸತತ ವಾಗಿ ಮೂತ್ರ ವಿಸರ್ಜನೆಗೆ ಅವಸರ ವಾಗುವುದು – ಒಂದು ವೇಳೆ ನಿಮಗೆ ದಿನ ನಿತ್ಯ ಬಹಳಷ್ಟು ಸಲ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸಿದರೆ, ಅದು ನಿಮ್ಮ ಕಿಡ್ನಿ ಅಲ್ಲಿ ತೊಂದರೆ ಇದೆ ಎಂದರ್ಥ. ಸಾಮಾನ್ಯವಾಗಿ ಕಿಡ್ನಿ ಅಲ್ಲಿ ತೊಂದರೆ ಇದ್ದರೆ, ನಿಮಗೆ sugar (ಸಕ್ಕರೆ ಖಾಯಿಲೆ) ಇದ್ದರೆ ಇಂತಹ ಅನುಭವ ಆಗುತ್ತದೆ. ನಿಮ್ಮ ಕಿಡ್ನಿ ಅಲ್ಲಿ ಸೋಂಕು ಇದ್ದರೆ, ಇಂತಹ ಅನುಭವ ನಿಮಗೆ ಆಗುತ್ತದೆ! ದಯವಿಟ್ಟು ನಿಮಗೆ ಇಂತಹ ಅನುಭವ ಆಗಿದ್ದರೆ ಈಗಲೇ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳಿ. ಸೂಚನೆ 02 – ಮೂತ್ರದಿಂದ ಘನ ಘೋರವಾದ ವಾಸನೆ – ಇದು ಸಾಮಾನ್ಯವಾಗಿ ನಿಮ್ಮ ಕಿಡ್ನಿ ಅಲ್ಲಿ ಏನಾದರು ಇನ್ಫೆಕ್ಷನ್ ಇದ್ದರೆ ನಿಮ್ಮ ಮೂತ್ರದಿಂದ ಬಹಳ ಕೆಟ್ಟ ವಾಸನೆ ಬರುತ್ತದೆ! ಇದನ್ನು ತಡೆಯಲು ನೀವು ದಿನ ನಿತ್ಯ ಆದಷ್ಟು, ಹಣ್ಣುಗಳು, ತರಕಾರಿಗಳು, ತಿನ್ನಲೇಬೇಕು! ದಿನನಿತ್ಯ ಇದನ್ನೇ ಸೇವಿಸಿದರೆ ನಿಮ್ಮ ಕಿಡ್ನಿ ಯಾ ಅರೋಗ್ಯ ಚನ್ನಾಗ್ ಆಗುತ್ತಾದೆ.
ಸೂಚನೆ 03 – ಮೂತ್ರ ವಿಸರ್ಜನೆಯ ಸಮದಲ್ಲಿ ತಡೆಯಲಾರದ ನೋವು – ನೀವು ಮೂತ್ರ ವಿಸರ್ಜನೆ ಮಾಡುತ್ತಾ ಇರುವಾಗ ಅಕಸ್ಮಾತ್ ಆಗಿ ನಿಮ್ಮ ಹೊಟ್ಟೆಯ ಕೆಳ ಭಾಗದಲ್ಲಿ ತಡೆಯಲಾರದ ನೋವು ಕಾಣಿಸಿಕೊಂಡರೆ ಅದು ನಿಮ್ಮ ಕಿಡ್ನಿ ಅಲ್ಲಿ ತೊಂದರೆ ಇದೆ ಎಂದರ್ಥ. ಈ ನೋವು ಏಕೆ ಬರುತ್ತದೆ ಎಂದರೆ, ನೀವು ಅತಿಯಾಗಿ ಮಾಂಸ ಆಹಾರವನ್ನು ಸೇವಿಸಿದಾಗ, ನೀವು ನೀರು ಕಡಿಮೆ ಕುಡಿದರೆ ಇಂತಹ ತೊಂದರೆ ಉಂಟಾಗುತ್ತದೆ. ನಾವು ಆಗಲೇ ಹೇಳಿದ ಹಾಗೆ ದಯವಿಟ್ಟು ದಿನ ನಿತ್ಯ ನೀವು ತರಕಾರಿ ಹಾಗು ಹಣ್ಣುಗಳನ್ನು ಸೇವಿಸಿದರೆ ಇಂತಹ ತೊಂದರೆಗಳನ್ನು ತಡೆಗಟ್ಟ ಬಹುದು. ಸೂಚನೆ 04 – ಮೂತ್ರ ವಿಸರ್ಜನೆಯ ಪ್ರಾರಂಭ ಬಹಳ ತಡವಾಗುವುದು – ಇದಕ್ಕೆ ಮೂಲ ಕಾರಣ, ನಿಮ್ಮ ದೇಹದಲ್ಲಿ ಇರುವ ನೀರಿನ ಅಂಶ! ಒಂದು ದಿನಕ್ಕೆ ಕಡಿಮೆ ಅಂದರು ನೀವು 3 ರಿಂದ 4 ಲೀಟರ್ ನೀರನ್ನು ಕುಡಿಯಲೇ ಬೇಕು. ಬೇಸಿಗೆ ಕಾಲದಲ್ಲಿ ಇನ್ನು ಹೆಚ್ಚಾಗಿ ನೀರನ್ನು ಕುಡಿಯಬೇಕು! ನೀವು ಎಷ್ಟು ನೀರು ಕುಡಿಯುತ್ತೀರಾ ನಿಮ್ಮ ಕಿಡ್ನಿಯ ಅರೋಗ್ಯ ಅಷ್ಟು ಚಂದವಾಗಿರುತ್ತದೆ. ನಿಮಗೆ ಮೂತ್ರ ಮಾಡುವ ಸಮಯದಲ್ಲಿ ತಡವಾದರೆ ಈಗಲೇ ಅತಿ ಹೆಚ್ಚು ನೀರನ್ನು ಕುಡಿಯಲು ಪ್ರಾರಂಭ ಮಾಡಿ ಹಾಗು ಆದಷ್ಟು ಬೇಗ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ.
ಸೂಚನೆ 05 – ಬೆನ್ನು ನೋವು – ನಮ್ಮ ಬೆನ್ನಲ್ಲಿ ನೋವು ಇದ್ದರೆ ಅದು ಎರಡು ಕಾರಣದಿಂದ ಬರಬಹುದು. ಒಂದು ನೀವು ಬಹಳ ಸ್ಟ್ರೆಸ್ ಆಗಿದ್ದರೆ, ನಿಮ್ಮ ಕೆಲಸಗಳಲ್ಲಿ ಬಹಳ ಕಷ್ಟ ಪಡುತ್ತಿದ್ದರೆ, ನಿಮ್ಮ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ . ಬೆನ್ನು ನೋವಿಗೆ ಇನ್ನೊಂದು ಕಾರಣ ವೆಂದರೆ, ನಿಮ್ಮ ಕಿಡ್ನಿ ಅಲ್ಲಿ ಏನಾದರು ತೊಂದರೆ ಇದ್ದರೆ, ಏನಾದರು ಇನ್ಫೆಕ್ಷನ್ ಇದ್ದರೆ, ಕಿಡ್ನಿಯ ಅರೋಗ್ಯ ಸರಿ ಇಲ್ಲದಿದ್ದರೆ ಇಂತಹ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನಿಮಗೆ ಕಿಡ್ನಿ ತೊಂದರೆ ಇಂದ ಬೆನ್ನು ನೋವು ಇದ್ದರೆ, ತಡಮಾಡದೆ ಈಗಲೇ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ!
ಸೂಚನೆ 06 – ಮೂತ್ರದಲ್ಲಿ ರಕ್ತ – ನಿಮಗೆ ಇಂತಹ ಅನುಭವ ವಾಗಿದ್ದರೆ, ಇದು ದೊಡ್ಡ ತೊಂದರೆ ಎಂದು ಪರಿಗಣಿಸಬೇಕು. ನಿಮ್ಮ ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆ ಇದ್ರೆ ಇಂತಹ ತೊಂದರೆ ಆಗುತ್ತದೆ. ದಯವಿಟ್ಟು ನಿಮ್ಮ ಕಿಡ್ನಿಯ ಆರೋಗ್ಯವನ್ನು ನೋಡಿಕೊಳ್ಳಿ, ದಯವಿಟ್ಟು ಹೊರಗೆ ತಿನ್ನುವುದು ಕಡಿಮೆ ಮಾಡಿರಿ, ದಿನ ನಿತ್ಯ ನೀವು ಎಷ್ಟು ಆಗುತ್ತೋ ಅಷ್ಟು ನೀರನ್ನು ಸೇವಿಸಿ, ಅಥವಾ ಮಜ್ಜಿಗೆ, ಹಣ್ಣಿನ ರಸವನ್ನು ಸೇವಿಸಿರಿ. ಕಿಡ್ನಿ ಅಲ್ಲಿ ತೊಂದರೆ ಇದ್ದರೆ, ಮುಂದೆ ಬಹಳ ಕಷ್ಟ ವಾಗುತ್ತದೆ, ಹಾಗು ಇದ್ದರಿಂದ ನಿಮ ದೇಹದ ಬೇರೆ ಅಂಗಗಳಿಗೂ ಬಹಳ ತೊಂದರೆ ಆಗುತ್ತದೆ.

Trending

To Top