ನ್ಯುಮೋನಿಯಾ ಇರುವ ಮಗುವಿಗೆ ಚಿಕಿತ್ಸೆಯೆಂದು ಬಿಸಿ ಕಬ್ಬಿಣದ ಸಲಾಕೆಯಿಂದ 40 ಬರೆ ಹಾಕಿದ ಪಾಪಿಗಳು…..!

ನಾಗರೀಕತೆ ಬೆಳೆದರೂ, ತಂತ್ರಜ್ಞಾನ ಬೆಳೆದರೂ ಇಂದಿಗೂ ಸಹ ಕೆಲವೊಂದು ಕಡೆ ಮೌಡ್ಯತೆ ಇರುತ್ತದೆ. ಈ ಹಾದಿಯಲ್ಲೇ ಒಂದೂವರೆ ತಿಂಗಳ ಮಗುವಿಗೆ ನ್ಯುಮೋನಿಯಾ ಚಿಕಿತ್ಸೆ ಎಂದು ವ್ಯಕ್ತಿಯೊಬ್ಬ ಬಿಸಿ ಕಬ್ಬಿಣದ ರಾಡ್ ನಿಂದ 40 ಕಡೆ…

ನಾಗರೀಕತೆ ಬೆಳೆದರೂ, ತಂತ್ರಜ್ಞಾನ ಬೆಳೆದರೂ ಇಂದಿಗೂ ಸಹ ಕೆಲವೊಂದು ಕಡೆ ಮೌಡ್ಯತೆ ಇರುತ್ತದೆ. ಈ ಹಾದಿಯಲ್ಲೇ ಒಂದೂವರೆ ತಿಂಗಳ ಮಗುವಿಗೆ ನ್ಯುಮೋನಿಯಾ ಚಿಕಿತ್ಸೆ ಎಂದು ವ್ಯಕ್ತಿಯೊಬ್ಬ ಬಿಸಿ ಕಬ್ಬಿಣದ ರಾಡ್ ನಿಂದ 40 ಕಡೆ ಬರೆ ಹಾಕಿರುವ ಮನಕಲಕುವಂತಹ ಘಟನೆಯೊಂದು ನಡೆದಿದೆ.

ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಗುವಿನ ಸ್ಥಿತಿ ಹದೆಗೆಟ್ಟಾಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಹೇಳುವಂತೆ ಮಗುವಿನ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಲ್ಲಿ 40 ಕ್ಕೂ ಹೆಚ್ಚು ಗಾಯದ ಗುರುತುಗಳನ್ನು ಕಂಡಿದ್ದಾರೆಂತೆ. ಹಳ್ಳಿಗಳಲ್ಲಿ ಸಂಪ್ರದಾಯತಿಕವಾಗಿ ಜನ್ಮ ಪರಿಚಾರಕರಾಗಿ ಕೆಲಸ ಮಾಡುವಂತಹ ಮಹಿಳೆ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಸಂಪ್ರದಾಯಿಕವಾಗಿ ಜನ್ಮ ಪರಿಚಾರಕರಾಗಿ ಕೆಲಸ ಮಾಡುವ ಮಹಿಳೆಯನ್ನು ಡಾಯಿ ಎಂದು ಕರೆಯಲಾಗುತ್ತದೆ. ಇದೀಗ ಡಾಯಿ ವಿರುದ್ದ ಪ್ರಕರಣ ದಾಖಲಾಗಿದೆ.

ಮಗುವಿನ ತಂದೆಯನ್ನು ಬಾಯಿ ಬೈಗಾ ಹಾಗೂ ತಾಯಿಯನ್ನು ಬೆಟ್ಲವಾಟಿ ಬೈಗಾ ಎಂದು ಗುರ್ತಿಸಲಾಗಿದೆ. ಈ ಕುಟುಂಬ ಶಾಹದೋಲ್ ಜಿಲ್ಲೆಯ ಹಾರ್ಡಿ ಎಂಬ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ನ.4 ರಂದು ತಮ್ಮ ಮಗುವಿಗೆ ನ್ಯುಮೋನಿಯಾ ಚಿಕಿತ್ಸೆಗಾಗಿ ಡಾಯಿ ಬಳಿ ಹೋದಾಗ ಆಕೆ ಮಗುವಿಗೆ 40 ಬಾರಿ ಬರೆ ಎಳೆದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮಗುವಿನ ಆರೋಗ್ಯ ಹದೆಗಟ್ಟೆಗಾ ಮಗುವನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ನಡೆದ ಘಟನೆ ಹೊರಬಂದಿದೆ. ಈ ಕುರಿತು ತನಿಖೆ ನಡೆಸಲು ಆರೋಗ್ಯಾಧಿಕಾರಿಗಳ ತಂಡ ಸಹ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.