Film News

ಕಬ್ಜ ಚಿತ್ರದಲ್ಲಿ ಸುದೀಪ್ ಪಾತ್ರ ಬಹಿರಂಗ! ವೈರಲ್ ಆಯ್ತು ಪೋಸ್ಟರ್

ಬೆಂಗಳೂರು: ಕೆಲವು ದಿನಗಳಿಂದ ಸೋಷಿಯಲ್ ಮಿಡೀಯಾದಲ್ಲಿ ಟ್ರೆಂಡಿಂಗ್ ಸೃಷ್ಟಿಸಿರುವ ಕಬ್ಜ ಚಿತ್ರದ ಸರ್ಪ್ರೈಸ್ ಬಹಿರಂಗಗೊಂಡಿದ್ದು, ನಿನ್ನೆ ಹೇಳಿದಂಗೆ ಕಬ್ಜ ಚಿತ್ರದಲ್ಲಿ ಸುದೀಪ್ ನಟಿಸುವುದು ಖಚಿತವಾಗಿದೆ. ಜೊತೆಗೆ ಚಿತ್ರದಲ್ಲಿನ ಸುದೀಪ್ ಪಾತ್ರ ಸಹ ರಿವೀಲ್ ಆಗಿದೆ.

ಮುಕುಂದಾ-ಮುರಾರಿ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ 80 ರ ದಶಕದ ರಿಯಲ್ ಸ್ಟೋರಿ ಆಧಾರಿತ ಕಬ್ಜ ಚಿತ್ರದಲ್ಲಿ ಪುನಃ ಒಂದಾಗಲಿದ್ದಾರೆ. ಆರ್.ಚಂದ್ರು ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಪಾತ್ರದ ಟೀಸರ್ ಸಹ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಭಾರ್ಗವ್ ಬಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಕಬ್ಜ ಚಿತ್ರತಂಡ ಸುದೀಪ್ ಪಾತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟೀಸರ್ ನಲ್ಲಿರುವಂತೆ ಸುದೀಪ್ ಭಾರ್ಗವ್ ಬಕ್ಷಿಯಾಗಿ 1947-1986 ಎಂದಿದ್ದು, ಈ ಅವಧಿಯಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿ ಸುದೀಪ್ ಭಾರ್ಗವ್ ಬಕ್ಷಿ ಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.

ಇನ್ನೂ ಕಬ್ಜ ಚಿತ್ರದ ಕಥೆಯನ್ನು ನಿರ್ದೇಶಕ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ರವರು ಡೆವಲೆಪ್ ಮಾಡಿದ್ದು, ಆರ್.ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. 2 ಭಾಗಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ನಡೆಯುತ್ತಿದೆ. ಅಂದಹಾಗೆ ಈಗಾಗಲೇ ಕಬ್ಜ ಚಿತ್ರದ ಹಲವು ಪೋಸ್ಟರ್ ಗಳು ರಿವೀಲ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಸದ್ಯ ನಟ ಸುದೀಪ್ ಫ್ಯಾಂಟಮ್ ಚಿತ್ರದ ಶೂಟಿಂಗ್ ಮುಗಿಸಿದ್ದು, ಅಶ್ವತ್ಥಾಮ ಎಂಬ ಚಿತ್ರದ ಶೂಟಿಂಗ್ ಸಹ ಪ್ರಾರಂಭಿಸಿದ್ದಾರೆ.

Trending

To Top