ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ ಹಾಗೂ ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾರೆ. ಇನ್ನೂ ವಿಶೇಷ ಕಾರ್ಯಕ್ರಮವೊಂದಕ್ಕೆ ದುಬೈ ಗೆ ಭೇಟಿ ನೀಡಿದ ಕಿಚ್ಚ ಸುದೀಪ್ ರವರಿಗೆ ಭರ್ಜರಿ ಸ್ವಾಗತ ದೊರೆತಿದೆ.
ಚಿತ್ರರಂಗದಲ್ಲಿ ಕಿಚ್ಚ ಸುದೀಪ್ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದುಬೈನಲ್ಲಿನ ಪ್ರಪಂಚದ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದಿರುವ ಬುರ್ಜಾ ಖಲೀಫ ಮೇಲೆ ಸುದೀಪ್ ರವರ ದೊಡ್ಡ ಕಟೌಟ್ ಪ್ರದರ್ಶನವಾಗಲಿದೆ. ಜೊತೆಗೆ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಪೋಸ್ಟರ್ ಸಹ ಪ್ರದರ್ಶನವಾಗಲಿದೆ. ಈ ಕಾರ್ಯಕ್ರಮಕ್ಕಾಗಿ ಸುದೀಪ್ ದುಬೈಗೆ ತೆರಳಿದದ್ದು, ಅಲ್ಲಿ ದುಬೈ ಸಂಸ್ಕೃತಿಯಂತೆ ಭವ್ಯವಾಗಿ ಸುದೀಪ್ರನ್ನು ಸ್ವಾಗತ ಮಾಡಿಕೊಂಡಿದ್ದಾರೆ. ಹೂವಿನ ಮಾಲೆ ಹಾಕಿ, ಹೂಗುಚ್ಚ ನೀಡಿ ಹಾಗೂ ಸ್ಪೆಷಲ್ ಗಿಫ್ಟ್ ಅನ್ನು ಸಹ ನೀಡಿ ಬರಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಹಾಗೂ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ಈ ದೊಡ್ಡ ಕಾರ್ಯಕ್ರಮ ಜ.31 ರಂದು ನಡೆಯಲಿದ್ದು, ಕೋರನಾ ನಿಯಮಗಳು ಜಾರಿಯಲ್ಲಿರುವ ಕಾರಣ ನಾಲ್ಕು ದಿನಗಳ ಮುಂಚೆಯೇ ಸುದೀಪ್ ದುಬೈಗೆ ತೆರಳಿದ್ದಾರೆ. ದೇಶದ ದೊಡ್ಡ ಸ್ಟಾರ್ಗಳ ಪೊಟೋಗಳು ಮಾತ್ರ ಈ ಬುರ್ಜಾ ಖಲೀಫ ಕಟ್ಡದಲ್ಲಿ ಅನಾವರಣಗೊಂಡಿದ್ದು, ಇದೀಗ ಸುದೀಪ್ ರವರ ಪೊಟೋ ಪ್ರದರ್ಶನವಾಗುತ್ತಿರುವುದು ಇಡೀ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಇನ್ನೂ ಈಗಾಗಲೇ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಚಿತ್ರದ ಕೆಲವೊಂದು ಪೋಸ್ಟರ್ ಹಾಗೂ ಟೀಸರ್ಗಳ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಇದೀಗ 3 ನಿಮಿಷಗಳ ಕಾಲ ಇರುವಂತಹ ಟೀಸರ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
