Film News

ಆಚಾರ್ಯ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟನೆ!

ಹೈದರಾಬಾದ್: ಈಗಾಗಲೇ ದಕ್ಷಿಣ ಭಾರತ ಸೇರಿದಂತೆ ಇಡೀ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರುವ ಆಚಾರ್ಯ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಚರ್ಚೆ ನಡೆಯತ್ತಿದೆ.

ಕಿಚ್ಚ ಸುದೀಪ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ತೆರೆ ಹಂಚಿಕೊಂಡಿದ್ದರು. ಇದೀಗ ಆಚಾರ್ಯ ಚಿತ್ರದಲ್ಲಿ ಸುದೀಪ್ ನಟಿಸುವುದು ಪಕ್ಕಾ ಆದ್ರೆ ಮತ್ತೊಮ್ಮೆ ಇಬ್ಬರೂ ನಟರನ್ನು ಒಟ್ಟಿಗೆ ತೆರೆಮೇಲೆ ಕಾಣಬಹುದಾಗಿದೆ. ಇನ್ನೂ ಆಚಾರ್ಯ ಚಿತ್ರದಲ್ಲಿ ಅಭಿನಯಿಸುವಂತೆ ಸುದೀಪ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕಿಚ್ಚ ಸುದೀಪ್ ರವರಿಂದ ಇನ್ನೂ ಗ್ರೀನ್ ಸಿಗ್ನಲ್ ದೊರೆತಿಲ್ಲ ಎನ್ನಲಾಗಿದೆ.

ಇನ್ನೂ ಸುದೀಪ್ ರವರಿಗೆ ಆಚಾರ್ಯ ಚಿತ್ರದಲ್ಲಿ ಯಾವ ಪಾತ್ರಕ್ಕಾಗಿ ಮಾತುಕತೆ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲವಾದರೂ, ಮೆಗಾಸ್ಟಾರ್ ಚಿರಂಜೀವಿ ಮಾತ್ರ ಸುದೀಪ್ ರವರೇ ಆ ಪಾತ್ರಕ್ಕೆ ಸೂಕ್ತ ಎಂದು ಹೇಲಿದ್ದಾರಂತೆ. ಈ ಕಾರಣಕ್ಕಾಗಿಯೇ ಚಿತ್ರತಂಡ ಸುದೀಪ್ ರೊಂದಿಗೆ ಮಾತುಕತೆ ನಡೆಸಿದೆಯಂತೆ. ಅಂದಹಾಗೆ ಇತ್ತೀಚಿಗಷ್ಟೆ ಕಿಚ್ಚ ವಿಕ್ರಾಂತ್ ರೋಣ ಹಾಗೂ ಕೋಟಿಗೊಬ್ಬ-3 ಚಿತ್ರಗಳ ಶೂಟಿಂಗ್ ಮುಗಿಸಿದ್ದು, ಬಿಗ್‌ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲಿದ್ದಾರಂತೆ. ಮತ್ತೊಂದು ಇಂಟರೆಸ್ಟಿಂಗ್ ವಿಚಾರವೆಂದರೇ ಕಿಚ್ಚ ಸುದೀಪ್ ರವರೇ ನಿರ್ದೇಶನ ಸಹ ಮಾಡುವ ತಯಾರಿಯನ್ನು ಸಹ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಆಚಾರ್ಯ ಚಿತ್ರದ ವಿಚಾರಕ್ಕೆ ಬಂದರೇ ಈಗಾಗಲೇ ಆಚಾರ್ಯ ಚಿತ್ರದ ಬಿಡುಗಡೆ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಯಾಗಿದೆ ಎನ್ನಲಾಗುತ್ತಿದ್ದು, ಈ ಸಿನೆಮಾ ಮೇ.13, 2021 ರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Trending

To Top