ಕಿಚ್ಚ ಮನಸಾರೆ ಹೊಗಳಿದ ಕನ್ನಡ ಸಿನೆಮಾ, ಸಿನೆಮಾ ಅತ್ಯದ್ಬುತವಾಗಿದೆ ಎಂದು ಟ್ವೀಟ್……

ಸ್ಯಾಂಡಲ್ ವುಡ್ ನಟಸಾರ್ವಭೌಮ ಕಿಚ್ಚ ಸುದೀಪ್ ಕನ್ನಡ ಸಿನೆಮಾವನ್ನು ಮನಸಾರೆ ಹೊಗಳಿದ್ದು, ಸಿನೆಮಾ ಅತ್ಯದ್ಬುತವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಒಳ್ಳೆಯ ಕನ್ನಡ ಸಿನೆಮಾಗಳನ್ನು ಪ್ರೋತ್ಸಾಹ ಮಾಡುತ್ತಾರೆ. ಇಡೀ ಚಿತ್ರತಂಡವನ್ನು ಮನಸಾರೆ ಹೊಗಳುವುದು ಅವರ ವ್ಯಕ್ತಿತ್ವವಾಗಿದೆ.

ಕಿಚ್ಚ ಸುದೀಪ್ ರವರು ಶೂಟಿಂಗ್ ಸೇರಿದಂತೆ ಇತರೆ ಬ್ಯುಸಿ ಶೆಡ್ಯೂಲ್ ನಿಂದಾಗಿ ಸಿನೆಮಾಗಳನ್ನು ನೋಡಲು ಆಗುತ್ತಿಲ್ಲ ಎಂಬ ವಿಚಾರವನ್ನು ಇತ್ತೀಚಿಗೆ ಹೇಳಿದ್ದರು. ಬಿಡುವು ಮಾಡಿಕೊಂಡು ಕಿಚ್ಚ ಸುದೀಪ್ ಒಂದು ಕನ್ನಡ ಸಿನೆಮಾ ನೋಡಿದ್ದು ಸಿನೆಮಾವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್ ಮೆಚ್ಚಿಕೊಂಡ ಸಿನೆಮಾ ‘ಗರುಡ ಗಮನ ವೃಷಭ ವಾಹನ’. ಈ ಸಿನೆಮಾವನ್ನು ಕಿಚ್ಚ ಸುದೀಪ್ ಮೇ.5 ಅಂದರೇ ನಿನ್ನೆಯಷ್ಟೆ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಸಿನೆಮಾದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟರ್‍ ಮೂಲಕ ಶುಭ ಹಾರೈಸಿದ್ದಾರೆ.

ರಾಜ್ ಬಿ ಶೆಟ್ಟಿ ನಿರ್ದೇಶನದ ಗಡುಡ ಗಮನ ವೃಷಭ ವಾಹನ ಸಿನೆಮಾವನ್ನು ಕಿಚ್ಚ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್‍ ನಲ್ಲಿ ಮಾಹಿತಿ ಹಂಚಿಕೊಂಡ ಕಿಚ್ಚ ಒಳ್ಳೆಯ ಸಿನೆಮಾಗಾಗಿ ಕ್ರಿಯೇಟರ್‍ ಒಬ್ಬ ನಡೆಸುವ ಹುಡುಕಾಟ ನಿರಂತರವಾದುದು ಆಗಿದೆ. ಸಿನೆಮಾ ಮಾಡುವಾಗ ಎಲ್ಲರಲ್ಲೂ ಉತ್ಸಾಹ ತುಂಬುವಂತಹ ಚಿತ್ರಕತೆ ಸಿನೆಮಾ ನೋಡುವಾಗ ವೀಕ್ಷಕರಿಗೆ ವಿಭಿನ್ನ ಅನುಭೂತಿ ನೀಡುವ ಚಿತ್ರಕಥೆ ಎಂದು ಹೇಳಿದ್ದಾರೆ ಜೊತೆಗೆ ಈ ಮಾತನ್ನು ನಾನು ನನ್ನ ಅಭಿಪ್ರಾಯವಾಗಿ ಹೇಳಿಲ್ಲ. ಬದಲಿಗೆ ಇಡೀ ಸಿನಿ ತಂಡಕ್ಕೆ ನನ್ನ ಅಭಿನಂದನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಹೇಳುತ್ತಿದ್ದೇನೆ. ನೀವೊಂದು ಅದ್ಬುತವಾದ ಸಿನೆಮಾ ನೀಡಿದ್ದೀರಿ ಎಂದು ಮನಸಾರೆ ಹೊಗಳಿದ್ದಾರೆ.

https://twitter.com/KicchaSudeep/status/1522453042779414528

ನಿನ್ನೆಯಷ್ಟೆ ಗರುಡ ಗಮನ ವೃಷಭ ವಾಹನ ಸಿನೆಮಾವನ್ನು ನೋಡಿದೆ. ಸಿನೆಮಾ ನೋಡಿದ ಕೂಡಲೇ ನನಗೆ ವಾವ್ ಎಂಬ ಭಾವನೆ ಬಂದಿದೆ. ಸಿನೆಮಾದ ಬರವಣಿಗೆ ಅದ್ಬುತವಾಗಿದೆ. ಸಿನೆಮಾದ ತಂತ್ರಗಾರಿಕೆ ಪ್ರತಿಯೊಬ್ಬರಿಗೂ ಪಾಠ ಕಲಿಸುವಂತಿಗೆ. ಸಿನೆಮಾದಲ್ಲಿನ ಎಲ್ಲಾ ಪಾತ್ರಗಳು ಅತ್ಯಧ್ಬುತವಾಗಿದೆ. ಎಲ್ಲಾ ಪಾತ್ರಗಳಲ್ಲಿ ನಟಿಸಿದ ಕಲಾವಿದರು ಅದ್ಭುತವಾಗಿ ಕೆಲಸ ಮಾಡಿದ್ದಾರೆ.  ಸಿನೆಮಾದ ಸರಳತೆ ಸಿನೆಮಾದಲ್ಲಿನ ದೊಡ್ಡ ಅಂಶವಾಗಿದೆ. ಸಂಗೀತ ಸಹ ಉತ್ತಮವಾಗಿದ್ದು ಸಂಗೀತ ನಿರ್ದೇಶಕ ಮುಕುಂದ್ ಗೆ ಅಭಿನಂದನೆ ಎಂದು ಹೇಳಿದ ಅವರು ನಿರ್ದೇಶಕ ರಾಜ್ ಶೆಟ್ಟಿಯವರನ್ನು ಸಹ ಮನಸಾರೆ ಹೊಗಳಿದ್ದಾರೆ.

Previous articleಧಾಕಡ್ ಸಿನೆಮಾದ ‘ಶಿ ಈಸ್ ಆನ್ ಫೈರ್’ ಸಾಂಗ್ ರಿಲೀಸ್, ಯೂಟ್ಯೂಬ್ ನಲ್ಲಿ ಟ್ರೆಂಡ್..
Next articleಸೂಪರ್ ಸ್ಟಾರ್ ರಜನಿ ಜೊತೆ ಶಿವಣ್ಣ ಸಿನೆಮಾ ಫಿಕ್ಸ್.. ಅತಿಥಿ ಪಾತ್ರದಲ್ಲಿ ಶಿವಣ್ಣ…