ಬೆಂಗಳೂರು: ಕನ್ನಡ ಭಾಷೆಗೆ ಇರುವಷ್ಟು ಇತಿಹಾಸ ಬೇರೆ ಯಾವುದೇ ಭಾಷೆಗೂ ಇಲ್ಲ. ಈಗಿರುವಾಗ ಕನ್ನಡ ಉಳಿಸುವ ಮಾತ್ಯಾಕೆ. ಕನ್ನಡತನವನ್ನು ಕಿತ್ತುಕೊಳ್ಳುವ ತಾಕತ್ತು ಯಾರಿಗೂ ಇಲ್ಲ ಎಂದು ಕಿಚ್ಚ ಸುದೀಪ್ ಕನ್ನಡ ಸಂಘಟನೆಗಳಿಗೆ ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಸುದೀಪ್ ರವರನ್ನು ಭೇಟಿಯಾಗಲು ಬಂದ ಕನ್ನಡ ಸಂಘಟನೆಗಳಿಗೆ ಕೆಲವೊಂದು ಕಿವಿಮಾತುಗಳನ್ನು ಹೇಳಿದ್ದಾರೆ. ಕನ್ನಡ ಭಾಷೆ ಪುರಾತನ ಇತಿಹಾಸ ಹೊಂದಿರುವ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಕಿತ್ತುಕೊಳ್ಳುವ ತಾಕತ್ತು ಯಾರಿಗೂ ಇಲ್ಲ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇಲ್ಲದವರನ್ನು ಬಿಟ್ಟು ಬಿಡಿ. ಕನ್ನಡದ ಬಗ್ಗೆ ಅಭಿಮಾನ ಇರುವವರನ್ನು ಪ್ರೋತ್ಸಾಹಿಸಿ. ಜೊತೆಗೆ ಕನ್ನಡ ಕಲಿಸುವ ಕೆಲಸ ಮಾಡಿ ಎಂದಿದ್ದಾರೆ.
ಇತ್ತೀಚಿಗಷ್ಟೆ ದುಬೈನ ಬುರ್ಜಾ ಖಲೀಫಾ ಕಟ್ಟಡದ ಮೇಲೆ ಕನ್ನಡದ ಭಾವುಟ ಹಾರಿಸಿದ ಸುದೀಪ್ ರವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಅಭಿನಂದಿಸಿದ್ದಾರೆ. ಇದೇ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿದಾರೆ. ಕನ್ನಡಪರ ಹೋರಾಟ ನಡೆಸುವ ಸಂಘಟನೆಗಳಲ್ಲಿಯೇ ಅನೇಕ ರೀತಿಯಲ್ಲಿ ಗೊಂದಲಗಳಿವೆ. ಮೊದಲು ನಿವೇಲ್ಲಾ ಒಂದು ನಿರ್ಧಾರಕ್ಕೆ ಬನ್ನಿ. ತೆಲುಗು ತಮಿಳು ಭಾಷೆ ಬಲ್ಲವರು ಇಲ್ಲಿ ಬಂದು ಕನ್ನಡ ಹೇಗೆ ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ಅಂತೆಯೇ ನಾವು ಸಹ ಅವರ ರಾಜ್ಯಗಳಿಗೆ ಹೋದಾಗ ಸ್ಪಷ್ಟವಾಗಿ ಅವರ ಭಾಷೆಯಲ್ಲಿ ಮಾತನಾಡುವುದಿಲ್ಲ.
ಎಲ್ಲಾ ಭಾಷೆಗಳ ಮೇಲೂ ನಾವೆಲ್ಲ ಗೌರವ ಇಟ್ಟುಕೊಳ್ಳಬೇಕು. ಕಲಾವಿದರಿಗೆ ಇರುವುದು ಅಭಿಮಾನಿಗಳು ಮಾತ್ರ. ನಿಮ್ಮ ಕೈಗೆ ಕೊನೆಗೆ ಸಿಗೋದು ಕಲಾವಿದ ಮಾತ್ರ. ಬೇರೆ ಭಾಷೆಯವರು ಇಲ್ಲಿ ಬಂದು ಕನ್ನಡ ಮಾತನಾಡಿದರೇ ಗಲಾಟೆ ಮಾಡಬಾರದು. ಅವರನ್ನು ಗೌರವಿಸಬೇಕು ಎಂದಿದ್ದಾರೆ.
