Film News

ಹೊಸ ಇತಿಹಾಸ ಸೃಷ್ಟಿಸಿದ ಕೆಜಿಎಫ್2

ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ. ಯಶ್ ಅಭಿಮಾನಿಗಳಿಗೆ ಈ ವಿಶೇಷ ಧನ್ಯವಾದಗಳು ಹೇಳಲು ಕಾರಣವಿದೆ. 6 ತಿಂಗಳ ಹಿಂದೆ ಜನವರಿ 6 ರಂದು ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿತ್ತು.ಇದೀಗ ಈ ಟೀಸರ್ ಒಟ್ಟು 20 ಕೋಟಿ ವೀಕ್ಷಣೆ ಕಂಡಿದೆ.

ಇದೀಗ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. 20 ಕೋಟಿ ವೀಕ್ಷಣೆ ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲಿಮ್ಸ್ 22 ಸೆಕೆಂಡ್ ಗಳ ವಿಡಿಯೋವನ್ನ ಅಪ್ಲೋಡ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ 22 ಸೆಕೆಂಡ್ ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

https://www.instagram.com/p/CRYllCOFCWM/?utm_medium=copy_link

ಒಟ್ಟು 2 ನಿಮಿಷ 16 ಸೆಕೆಂಡ್ ಇರುವ ಕೆಜಿಎಫ್ ಟೀಸರ್ ಗೆ 84 ಲಕ್ಷ ಲೈಕ್ ಸಿಕ್ಕಿದೆ, ಮತ್ತು 90 ಸಾವಿರ ಕಮೆಂಟ್ ಬಂದಿದೆ ಈ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ ಚಿತ್ರತಂಡ ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂಬ ವಿಷಯ ತಿಳಿಸಿಲ್ಲ.

Trending

To Top