Film News

ಯಶ್ ಹುಟ್ಟುಹಬ್ಬದಂದು ಕೆಜಿಎಫ್-೨ ಟೀಸರ್ ಬಿಡುಗಡೆ!

ಬೆಂಗಳೂರು: ಬಹುನಿರೀಕ್ಷೆಯ ಕೆಜಿಎಫ್-೨ ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.

ಹೊಂಬಾಳೆ ಬ್ಯಾನರ್‌ನಡಿ ನಿರ್ಮಾಣವಾಗಿರುವ ಕೆಜಿಎಫ್ ಮೊದಲನೆ ಪಾರ್ಟ್ ಈಗಾಗಲೇ ದೇಶ ಸೇರಿದಂತೆ ವಿದೇಶದಲ್ಲಿಯೂ ಸಹ ಭಾರಿ ಸದ್ದು ಮಾಡಿದ್ದು, ಅದರ ಮತ್ತೊಂದು ಭಾಗವಾದ ಕೆಜಿಎಫ್ ಛಾಪ್ಟರ್ ೨ ಚಿತ್ರೀಕರಣ ಭರದಿಂದ ಸಾಗಿದೆ. ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರೀಕರಣ, ಲಾಕ್‌ಡೌನ್ ತೆರವಾದ ನಂತರ ಉಡುಪಿ, ಬೆಂಗಳೂರು ಮೊದಲಾದ ಕಡೆ ಚಿತ್ರೀಕರಣ ಮುಗಿಸಿ ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇನ್ನೂ ರಾಖಿ ಭಾಯ್ ಯಶ್ ಹಾಗೂ ಅಧಿರಾ ನಡುವಿನ ಆಕ್ಷನ್ ಸೀನ್ ಮಾತ್ರ ಬಾಕಿಯಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಧಿರಾ ಪಾತ್ರದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ.

ಇನ್ನೂ ಯಶ್ ಹುಟ್ಟುಹಬ್ಬದಂದೇ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಆದ ಬಳಿಕ ನಟಿ ರವೀನಾ ಟಂಡನ್ ಪೋಸ್ಟರ್ ಸಹ ರಿಲೀಸ್ ಮಾಡಲಿದೆಯಂತೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಯಾಗಿದ್ದು, ರಾಖಿ ಭಾಯಿ ಅಭಿಮಾನಿಗಳು ಟೀಸರ್‌ಗಾಗಿ ಕಾಯುತ್ತಿದ್ದಾರೆ. ಜೊತೆಗೆ ಸಿನೆಮಾ ತಂಡ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಟೀಸರ್ ಯಾವಾಗ ಎಂಬ ಪ್ರಶ್ನೆಗಳು ಬರುತ್ತಿದೆ. ಇನ್ನೂ ಅಭಿಮಾನಿಯೊಬ್ಬ ಕಾರ್ತಿಕ್‌ಗೌಡ ರವರಿಗೆ ೩ ವರ್ಷ ಆಯ್ತು ಗುರು, ಬಾಸ್ ಟೀಸರ್ ನೋಡಿ ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರಿಸಿದ ಕಾರ್ತಿಕ್‌ಗೌಡ ಬರ್ತಡೇಗೆ ನೋಡ್ತಿಯಾ, ಬೇರೆ ರೇಂಜ್‌ನಲ್ಲೇ ಇರುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ. ಜನವರಿ ೮ಕ್ಕೆ ಯಶ್ ಹುಟ್ಟುಹಬ್ಬವಿದ್ದು, ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದೊಂದಿಗೆ ಕೆಜಿಎಫ್-೨ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಮನಸ್ಸನ್ನು ಕದಿಯಲಿದೆ ಎನ್ನಲಾಗುತ್ತಿದೆ.

Trending

To Top