Cinema

KGF 2 ಚಿತ್ರದಲ್ಲಿ ಅನಂತ್ ನಾಗ್ ಅವರ ಜಾಗಕ್ಕೆ ಬಾಂದ್ರಾ ಪ್ರಕಾಶ್ ರೈ! ನಿಜವಾದ ಕಾರಣ ಏನು ಗೊತ್ತಾ

ಇವತ್ತಷ್ಟೇ ಭಾರತದ ಬಹು ಬೇಡಿಕೆಯ ಹೆಮ್ಮೆಯ ಕನ್ನಡ ಚಿತ್ರವಾದ KGF 2 ಚಿತ್ರೀಕರಣ ಮತ್ತೆ ಶುರು ಆಗಿದೆ. ಬೆಂಗಳೂರಿನಲ್ಲಿ KGF 2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಆಶ್ಚರ್ಯ ಪಡುವೆ ವಿಷಯ ಏನಪ್ಪಾ ಅಂದರೆ, ಇವತ್ತು KGF 2 ಸೆಟ್ ನಲ್ಲಿ ಕಂಡು ಬಂದಿದ್ದು ಪ್ರಕಾಶ್ ರಾಜ್ ಅವರು. ಹೌದು KGF ೨ ಚಿತ್ರದಲ್ಲಿ ಪ್ರಕಾಶ್ ರಾಜ್ ಅವರ ಚಿತ್ರೀಕರಣ ಆಗುತ್ತಿದ್ದೂ ಈ ಫೋಟೋಗಳನ್ನು ನೋಡಿದ ಎಲ್ಲಾರೂ , ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ಅವರು ಅನಂತ್ ನಾಗ್ ಅವರ ಜಾಗಕ್ಕೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಚಿತ್ರೀಕರಣದ ಕ್ಷಣಗಳು ನೀವು ಕೆಳಗಿನ ಫೋಟೋಗಳನ್ನು ನೋಡಬಹುದು.

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರದ ಮೊದಲ ಭಾಗದಲ್ಲಿ ಅನಂತ್ ನಾಗ್ ಅವರು ಆನಂದ್ ಇಂಗಳಗಿ ಎಂಬ ಪತ್ರಕರ್ತನ ಪಾತ್ರವನ್ನು ಮಾಡಿದ್ದಾರೆ. ಇದಲ್ಲದೆ ಅನಂತ್ ನಾಗ್ ಅವರ ಪಾತ್ರವನ್ನು ನೋಡಿ ಅವರ ನಟನೆಯನ್ನು ನೋಡಿ ಇದೆ ದೇಶವೇ ಮೆಚ್ಚಿಕೊಂಡಿತ್ತು. ಅನಂತ್ ನಾಗ್ ಅವರ ಪಾತ್ರ, ಅವರ ಸಂಭಾಷಣೆ ಹಾಗು ಇಡೀ ಚಿತ್ರದಲ್ಲಿ ಅನಂತ್ ನಾಗ್ ಅವರು ಹೇಳುವ ರಾಖಿಯ ಕಥೆ, ಬಹಳ ಕುತೂಹಲ ಮೂಡಿಸಿತ್ತು ಹಾಗು ಜನರನ್ನು ರೋಮಾಂಚನ ಆಗುವ ತರಹ ಮಾಡಿತ್ತು. ಆದರೆ KGF 2 ರಲ್ಲಿ ಅನಂತ್ ನಾಗ್ ಯಾಕೆ ಇಲ್ಲ, ಅವರ ಜಾಗಕ್ಕೆ ಯಾಕೆ ಪ್ರಕಾಶ್ ರಾಜ್ ಬಂದಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.

ನೀವು KGF 1 ಚಿತ್ರ ನೋಡಿದ್ರೆ, ಅನಂತ್ ನಾಗ್ ಹಾಗು ಮಾಳವಿಕಾ ಒಂದು ಜಾಗದಲ್ಲಿ ಕೂತು, ಮಾಳವಿಕಾ ಅವರಿಗೆ ಅನಂತ್ ನಾಗ್ ಅವರು ರಾಕಿ ಬಗ್ಗೆ ಕಥೆ ಹೇಳುತ್ತಾರೆ. ಅದೇ ರೀತಿಯ ಸೆಟ್ ನಲ್ಲಿ ಇಂದು KGF 2 ಚಿತ್ರೀಕರಣದಲ್ಲಿ ಅನಂತ್ ನಾಗ್ ಅವರ ಜಾಗದಲ್ಲಿ ಪ್ರಕಾಶ್ ರಾಜ್ ಅವರ ಚಿತ್ರೀಕರಣ ನಡೆಯುತ್ತಿದೆ. ಅಸಲಿಗೆ ಅನಂತ್ ನಾಗ್ ಅವರ ಪಾತ್ರವನ್ನು ಪ್ರಕಾಶ್ ರಾಜ್ ಮಾಡುತ್ತಿದ್ದಾರಾ? ಈ ಪ್ರಶ್ನೆಗೆ KGF ತಂಡದಿಂದ ಇನ್ನೂ ಕೂಡ ಸ್ಪಷ್ಟನೆ ಬಂದಿಲ್ಲ ಆದರೆ ಬಲ್ಲ ಮೂಲಗಳ ಪ್ರಕಾರ ಪ್ರಕಾಶ್ ರಾಜ್ ಅವರು ಒಬ್ಬ ದಿಟ್ಟ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ದೃಢ ಪಟ್ಟಿದೆ. ಇದರ ಬಗ್ಗೆ ಖುದ್ದು ಪ್ರಕಾಶ್ ರಾಜ್ ಅವರೇ ಟ್ವೀಟ್ ಮಾಡಿ ಹೇಳಿದ್ದಾರೆ.

ಸದ್ಯ KGF ೨ ಚಿತ್ರದ ಇಂದಿನ ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದು, ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇವತ್ತಿನ KGF ೨ ಚಿತ್ರದ ಚಿತ್ರೀ ಕರಣದ ಕ್ಷಣಗಳನ್ನು, KGF ನಿರ್ದೇಶಕರಾದ ಪ್ರಶಾಂತ್ ನೀಲ್, ಛಾಯಾಗ್ರಾಹಕರಾದ ಭುವನ್ ಗೌಡ, ನಿರ್ಮಾಪಕರು, ಹಾಗು ಖುದ್ದು ಪ್ರಕಾಶ್ ರಾಜ್ ಅವರು ಕೂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರು ಅನಂತ್ ನಾಗ್ ಅವರ ಜಾಗಕ್ಕೆ ಬಂದಿದ್ದಾರೋ ಇಲ್ಲವು ಈ ಪ್ರಶ್ನೆಗೆ KGF ತಂಡವೇ ಅಭಿಮಾನಿಗಳಿಗೆ ಉತ್ತರ ಕೊಡಬೇಕಾಗಿದೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top