Film News

ಘೋಷಣೆಯಾಯ್ತು KGF-2 ಸಿನಿಮಾ ಟೀಸರ್ ರಿಲೀಸ್ ಡೇಟ್!

ಬೆಂಗಳೂರು: ಕೆಜಿಎಫ್-1 ರಿಲೀಸ್ ಆಗಿ ಇಂದಿಗೆ 2 ವರ್ಷ ಆಗಿದೆ. ಇದೇ ದಿನ ಸಹ ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ ಎನ್ನಲಾಗಿದೆ.

ಭಾರತೀಯ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಕೆಜಿಎಫ್-2 ಸಿನೆಮಾ ಶೂಟಿಂಗ್ ಮುಕ್ತಾಯವಾಗಿದ್ದು, ಡಿ.21 ರಂದು ಬಿಗ್ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟು ಹಬ್ಬ ಜನವರಿ 8 ರಂದೇ ಕೆಜಿಎಫ್-2 ಟೀಸರ್ ಬಿಡುಗಡೆ ಮಾಡುತ್ತಾರಂತೆ. ಜನವರಿ 8ರ ಬೆಳಿಗ್ಗೆ 10:18 ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು, ಟೀಸರ್ ರಿಲೀಸ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹೃದಯ ಬಡಿತ ಮತಷ್ಟು ಹೆಚ್ಚಾಗಿದೆ.

ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟರ್ ನಲ್ಲಿ ಪೆÇೀಸ್ಟ್ ಒಂದು ಹಾಕಿದ್ದು, ಜೊತೆಗೆ ಚಿತ್ರದ ಪೆÇೀಸ್ಟರ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಆ ಸಾಮ್ರಾಜ್ಯದ ಒಂದು ನೋಟ, ಇದನ್ನು ಸೃಷ್ಟಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿರಬಹುದು, ಆದರೆ ನಾವು ಮತಷ್ಟು ಬಲಿಷ್ಟವಾಗಿ ಆಗಮಿಸುತ್ತಿದ್ದೇವೆ ಎಂದು ಟ್ವಟಿರ್ ನಲ್ಲಿ ಬರೆದುಕೊಂಡಿದ್ದಾರೆ. ಕೆಜಿಎಫ್-2 ಚಿತ್ರದ ಟೀಸರ್ ಯಶ್ ರವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು, ಇದೀಗ ಪ್ರಶಾಂತ್ ನೀಲ್ ರವರ ಪೆÇೀಸ್ಟ್ ಖಚಿತ ಪಡಿಸಿದೆ.

ನಿನ್ನೆಯಷ್ಟೆ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿ ಅಧೀರ ಪಾತ್ರ ಅಲಂಕರಿಸಿದ್ದ ಸಂಜಯ್ ದತ್ ರವರನ್ನು ಚಿತ್ರತಂಡ ಬೀಳ್ಕೊಟ್ಟಿತ್ತು. ಈ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಹೈದರಾಬಾದ್ ನಲ್ಲಿ ಚಿತ್ರೀಕರಿಸಲಾಗಿದೆ. ಕೆಜಿಎಫ್ ತಂಡಕ್ಕೆ ಡಿಸೆಂಬರ್ 21 ಮಹತ್ವದ ದಿನವಾಗಿದ್ದು, ಇದೇ ದಿನ ಸಿನೆಮಾ ಕುರಿತು ಅಪ್ಡೇಟ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದ್ದಾರೆ.

Trending

To Top