Film News

ಕೆಜಿಎಫ್ 2 ನಲ್ಲಿ ಹೇಗಿರಲಿದೆ ಅಧೀರನ ಇಂಟ್ರೊಡಕ್ಷನ್ ಹಾಡು!

ಇಡೀ ಭಾರತ ಚಿತ್ರರಂಗ ಅತ್ಯಂತ ಕಾತುರತೆಯಿಂದ ಎದುರು ನೋಡಿತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಕೆಜಿಎಫ್1 ಸಿನಿಮಾ 2018 ರ ಕೊನೆಯಲ್ಲಿ ತೆರೆಕಂಡು ಭಾರತ ಚಿತ್ರರಂಗ ಮಾತ್ರವಲ್ಲದೆ ವಿದೇಶಿಗರು ಸಹ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಮಾಡಿತು.

ಚಾಪ್ಟರ್ 1 ಸೃಷ್ಟಿಸಿದ್ದ ಕ್ರೇಜ್ ಇಂದಾಗಿ ಸಿನಿಪ್ರಿಯರಿಗೆ ಕೆಜಿಎಫ್ ಚಾಪ್ಟರ್ 2 ಮೇಲಿನ ನಿರೀಕ್ಷೇ ಇನ್ನಷ್ಟು ಹೆಚ್ಚಾಯಿತು. ಅಭಿಮಾನಿಗಳ ನಿರೀಕ್ಷೆ ಇನ್ನು ಹೆಚ್ಚಾಗುವ ಹಾಗೆ ಕೆಜಿಎಫ್ ಚಾಪ್ಟರ್2 ನ ತಾರಾಗಣ ಬಹಳ ಸ್ಟ್ರಾಂಗ್ ಆಗುತ್ತಾ ಹೋಯಿತು. ಸಂಜಯ್ ದತ್ ಅವರು ಅಧೀರ ಪಾತ್ರದಲ್ಲಿ ಕಾಣಿಸಿಕೊಂಡರೆ, ರವೀನಾ ಟಂಡನ್ ರಮಿಕಾ ಸೇನ್ ಪಾತ್ರ. ಇನ್ನುಳಿದಂತೆ ನಟಿ ಈಶ್ವರಿ ರಾವ್, ರಾವ್ ರಮೇಶ್ ಸೇರಿದಂತೆ ಬಹು ತಾರಾಗಣವೇ ಇದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ತಿಂಗಳು ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕೋವಿಡ್ 2ನೇ ಅಲೆಯ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಪ್ರಸ್ತುತ ಕೆಜಿಎಫ್ ಚಾಪ್ಟರ್ 2 ಸಿನಿಮಾ ತಂಡ ಅಧೀರನ ಇಂಟ್ರೊಡಕ್ಷನ್ ಸಾಂಗ್ ಚಿತ್ರೀಕರಣದಲ್ಲಿ ತೊಡಗಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ರಾಕಿ ಭಾಯ್ ಇಂಟ್ರೊಡಕ್ಷನ್ ಹಾಡಿಗಿಂತ ಅಧೀರನ ಇಂಟ್ರೊಡಕ್ಷನ್ ಹಾಡು ಭರ್ಜರಿಯಾಗಿ ಮೂಡಿಬರಲಿದೆ ಎನ್ನಲಾಗುತ್ತಿದೆ.

Trending

To Top