News

KGF ಹಾಗು ಯಶ್ ಅವರ ಮೇಲೆ ಶಾರುಖ್ ಫ್ಯಾನ್ಸ್ ಗರಂ! ಕಾರಣ ಏನು ಗೊತ್ತ

KGF3

ನಿಮಗೆಲ್ಲ ಗೊತ್ತಿರೋ ಹಾಗೆ ಇದೆ ತಿಂಗಳು ಭಾರತದ ಬಹು ನಿರೀಕ್ಷೆಯ ಚಿತ್ರ KGF 21 ಕ್ಕೆ ದೇಶದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರವೂ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. 21 ನೇ ತಾರೀಕು KGF ಚಿತ್ರದ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ZERO ಎಂಬ ಚಿತ್ರ ಕೂಡ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರ KGF ಟ್ರೈಲರ್ ಹಾಗು ಬಿಡುಗಡೆ ದಿನಾಂಕ ಅನೌನ್ಸ್ ಆದ ಮೇಲೆ ಶಾರುಖ್ ಫ್ಯಾನ್ಸ್ ಯಶ್ ಹಾಗು ತಂಡದ ಮೇಲೆ ಗರಂ ಆಗಿದ್ದಾರೆ.
ಶಾರುಖ್ ಖಾನ್ ಅವರ ZERO ಚಿತ್ರದ ಟ್ರೇಲರ್ ಯೌಟ್ಯೂಬ್ ನಲ್ಲಿ ನೀರೀಕ್ಷೆ ಯಂತೆ ಸಡ್ಡು ಮಾಡಲಿಲ್ಲ. ಯೌಟ್ಯೂಬ್ ನಲ್ಲೆ ZERO ಚಿತ್ರದ ಟ್ರೇಲರಿಗೆ ಜನರು ಬೈದಿದ್ದೆ ಹೆಚ್ಚು. ಆದರೆ ನಮ್ಮ ಕನ್ನಡದ ಹೆಮ್ಮೆಯ ಚಿತ್ರ KGF ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಳಲ್ಲಿ ಇಡೀ ಭಾರತದ ಚಿತ್ರ ರಂಗವು ಬೆರಗಾಗಿತ್ತು. ಬಾಲಿವುಡ್ ಇಂದ ಮಾಲಿವೂಡ್ (ಕೇರಳ) ವರೆಗೆ ಎಲ್ಲಾ ಚಿತ್ರ ರಸಿಕರು, ನಿರ್ದೇಶಕರು, ನಟರು ಹಾಗು ತಂತ್ರಜ್ಞರು KGF ಚಿತ್ರದ ಟ್ರೇಲರನ್ನು ನೋಡಿ ವಾವ್ ಅಂದಿದ್ದರು. ಈಗ ಇದೆ ಕಾರಣಕ್ಕೆ ಶಾರುಖ್ ಅವರ ZERO ಚಿತ್ರಕ್ಕೆ ಮುಂಬೈ ಅಲ್ಲೇ KGF ಕಿಂತ ಕಡಿಮೆ ಚಿತ್ರಮಂದಿರಗಳು ದೊರೆತಿವೆ. ಇದು ಕನ್ನಡಿಗರ ಸಾಧನೆ ಎಂದೇ ಹೇಳಬಹುದು. ಈ ವಿಷ್ಯಕ್ಕಾಗಿ ಶಾರುಖ ಫ್ಯಾನ್ಸ್ ಗರಂ ಆಗಿ ಯಶ್ ಅವರ ಮೇಲೆ, ಕನ್ನಡಿಗರ ಮೇಲೆ ಟ್ರೊಲ್ ಮಾಡುತ್ತಿದ್ದಾರೆ.
ಏನೇ ಆಗಲಿ ನಮ್ಮ ಕನ್ನಡದ ಹೆಮ್ಮೆಯ ಚಿತ್ರ KGF ಇನ್ನೇನು 21 ಕ್ಕೆ ಬಿಡುಗಡೆ ಆಗಲಿದೆ. ಇಡೀ ದೇಶವೇ ಈ ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಭಾರತದಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲಿ ಕೂಡ ಬಿಡುಗಡೆ ಆಗಲಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಪ್ರೊಮೋಷನ್ಸ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಮುಂಬೈ ನಲ್ಲಿ ಟಾಪ್ ಚಾನೆಲ್ ಗಳಲ್ಲಿ ಸಂದರ್ಶನ ಕೊಟ್ಟಿದ್ದಾರೆ. ಯಶ್ ಹಾಗು KGF ಚಿತ್ರ ತಂಡಕ್ಕೆ ಶುಭವಾಗಲಿ. ಈ ಸುದ್ದಿ ಇಷ್ಟ ವಾಡಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top