ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡಿಗರ ಹೆಮ್ಮೆಯ ಚಿತ್ರ KGF ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರವು ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ , ಹಾಗು ಹಿಂದಿ ಭಾಷೆಯಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಶ್ರೀನಿಧಿ ಶೆಟ್ಟಿ, ರಮ್ಯಾ ಕೃಷ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರದ ಒಂದೊಂದು ಫ್ರೆಮನ್ನು ಅದ್ಭುತ ವಾಗಿ ತೋರಿಸಿದ್ದಾರೆ, ಇದಕ್ಕೆ ಕಾರಣ ಛಾಯಾಗ್ರಕ ಭುವನ್ ಗೌಡ ಅವರು. ಇದಲ್ಲದೆ KGF ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತವನ್ನು ನೀಡಿದ್ದಾರೆ. ಪ್ರತಿಯೊಬ್ಬ ಕನ್ನಡಿಗರು KGF ಚಿತ್ರವನ್ನು ಯಾಕೆ ನೋಡಬೇಕು? ಈ ಕೆಳಗಿನ ವಿಷ್ಯ ಪೂರ್ತಿ ಓದಿರಿ.
ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್.
KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು.
ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡಿದ್ದಾರೆ. ಇಡೀ ಭಾರತದಲ್ಲೇ ಬಾಹುಬಲಿ ಚಿತ್ರವನ್ನು ಬಿಟ್ಟರೆ KGF ಚಿತ್ರದಲ್ಲಿಯೇ ಇಷ್ಟೊಂದು ಕಲಾವಿದರು ಕೆಲಸ ಮಾಡಿರುವುದು.
ಇದು ನಿಮಗೆ ಗೊತ್ತಿರೋ ವಿಷ್ಯ! ಕೆಲವೇ ಕೆಲವು ಕನ್ನಡ ಚಿತ್ರಗಳು ಪರಭಾಷೆಗೆ ಡಬ್ ಆಗುತ್ತವೆ. ಇದೆ ಮೊದಲ ಬಾರಿಗೆ ಒಂದೇ ಬಾರಿ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಎಂದರೆ ಅದು KGF
ಕನ್ನಡ ಸಿನೆಮಾಗಳ ಮಾರ್ಕೆಟ್ ಗೆ ಹೆಚ್ಸೆಂದರೆ 500 ಸ್ಕ್ರೀನ್ ಗಳು ಸಿಗುತ್ತವೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಬರೊಬ್ಬರು 2500 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ KGF
KGF ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಕೆಲವು ಘಂಟೆ ಗಳಲ್ಲಿ ಯೌಟ್ಯೂಬ್ ನ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿತ್ತು. ಇದಲ್ಲದೆ KGF ಚಿತ್ರದ ಎರಡನೇ ಟ್ರೇಲರ್ ಹಾಗು ಹಾಡುಗಳು ಕೂಡ ಯೌಟ್ಯೂಬ್ ನಲ್ಲಿ ಅದೆಷ್ಟೋ ದಿನಗಳ ಕಾಲ ಟ್ರೆಂಡಿಂಗ್ ನಲ್ಲಿ ಇತ್ತು.
ಇದೆ ಮೊದಲ ಬಾರಿಗೆ ಒಂದು ಸಿನಿಮಾದ ಟ್ರೇಲರ್ ಬರೋಬ್ಬರಿ 10 ದಿನಗಳ ಕಾಲ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತು. ಬೇರೆ ಯಾವ ಭಾಷೆಯ ಸಿನಿಮಾಗಳು ಕೂಡ ಇಂತಹ ಒಂದು ಸಾಧನೆಯನ್ನು ಮಾಡಿಲ್ಲ ಕಣ್ರೀ.
ಸೋಶಿಯಲ್ ಮೀಡಿಯಾ ಹೊರೆತು ಪಡಿಸಿ KGF ಗೂಗಲ್ ನಲ್ಲಿ ಕೂಡ ನಂಬರ್ ೧. ನವೆಂಬರ್ ತಿಂಗಳಲ್ಲಿ KGF ಚಿತ್ರದ ಬಗ್ಗೆ ನಮ್ಮ ಭಾರತದ ಜನ ಬರೋಬ್ಬರಿ 10 ಲಕ್ಷ ಸರ್ಚ್ ಗಳನ್ನೂ ಗೂಗಲ್ ನಲ್ಲಿ ಮಾಡಿದ್ದಾರೆ. ಬಾಹುಬಲಿ, ಹಾಗು ರಜನಿಕಾಂತ್ ಅವರ ರೋಬೊ ಬಿಟ್ಟರೆ ಇದೆ ಮೊದಲು ಒಂದು ಕನ್ನಡ ಚಿತ್ರವನ್ನು ಇಷ್ಟೊಂದು ಜನ ಸರ್ಚ್ ಮಾಡಿದ್ದಾರೆ.
ಇದನ್ನೆಲ್ಲಾ ಹೊರತು ಪಡಿಸಿದ್ರೆ, KGF ನಮ್ಮ ಕನ್ನಡದ ಸಿನಿಮಾ ಕಣ್ರೀ! ಕನ್ನಡಿಗರ ಹೆಮ್ಮೆಯ ಸಿನಿಮಾ. ಈ ಚಿತ್ರದಿಂದ ಇಡೀ ಭಾರತವೇ ನಮ್ಮ ಕನ್ನದತ್ತ ತಿರುಗಿ ನೋಡುವಂತೆ ಮಾಡಿದೆ. KGF ಚಿತ್ರ ತಂಡಕ್ಕೆ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಮ್ಮ ನಮನಗಳು. ನಾಳೆ ತಪ್ಪದೆ KGF ಚಿತ್ರವನ್ನು ನೋಡಿ, ಹಾಗು ಒಂದೊಳ್ಳೆ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿ ಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
