News

(video)ಕನ್ನಡದ ಅತೀ ದೊಡ್ಡ ಸೂಪರ್ ಹಿಟ್ ಚಿತ್ರ ಕೆಜಿಫ್ ಶೀಘ್ರದಲ್ಲೇ ಕಿರುತೆರೆಯಲ್ಲಿ! ಯಾವಾಗ ಗೊತ್ತ?

colors kannada movie kgf

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಬಿಡುಗಡೆ ಆಗಿ ಬರೋಬ್ಬರಿ 2 ತಿಂಗಳಾದರೂ ಬಹಳಷ್ಟು ಚಿತ್ರ ಮಂದಿರಗಳ್ಲಲಿ ಯಶಸ್ವಿ ಆಗಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ, ಇಡೀ ಭಾರತವೇ ಕನ್ನಡದ ಕಡೆ, ಕನ್ನಡ ಚಿತ್ರಗಳ ಬಗ್ಗೆ, ತಿರುಗಿ ನೋಡಿಕೊಳ್ಳುವಂತೆ ಮಾಡಿದ ಕೆಜಿಫ್ ಚಿತ್ರ ತಂಡಕ್ಕೆ, ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲಾಂ! ಕೆಜಿಫ್ ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿತ್ತು. ಸದ್ಯ ನಮ್ಮ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಕಿರುತೆರೆಯಲ್ಲಿ ಕೂಡ ದಾಖಲೆ ಬರೆಯಲು ರೆಡಿ ಆಗಿದೆ! ಅತೀ ಶೀಘ್ರದಲ್ಲಿ ಟಿವಿ ಯಲ್ಲಿ ಬರಲಿದೆ ಕೆಜಿಫ್! ನಮ್ಮ ಕಲರ್ಸ್ ಕನ್ನಡದಲ್ಲಿ ಕೆಜಿಫ್ ಚಿತ್ರ ಅತೀ ಶೀಘ್ರದಲ್ಲಿ ಪ್ರಸಾರ ವಾಗಲಿದೆ! ಅದರ ಪ್ರೊಮೊ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡದ ಹೆಮ್ಮೆಯ ಚಿತ್ರ ಕೆಜಿಫ್ ಕಳೆದ ತಿಂಗಳು ಬಿಡುಗಡೆ ಆಗಿ ಈಗ ಬರೋಬ್ಬರಿ 40 ದಿನವಾದರೂ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ನಮ್ಮ ರಾಜ್ಯ ಅಲ್ಲದೆ, ಪಕ್ಕದ ರಾಜ್ಯಗಳಲ್ಲಿ, ಉತ್ತರ ಭಾರತದ ದಲ್ಲಿ ಹಾಗು ಹೊರ ದೇಶಗಳಲ್ಲಿ ಕೂಡ ಕೆಜಿಫ್ ಚಿತ್ರ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ಅಮೇರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ದುಬೈ ದೇಶಗಳಲ್ಲಿ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ ಕೆಜಿಫ್ ಚಿತ್ರ ಪಾಕಿಸ್ತಾನ ದಲ್ಲಿ ಕೂಡ ಬಿಡುಗಡೆ ಆಗಿ ಭರ್ಜರಿ ಸದ್ದು ಮಾಡಿತ್ತು. ಈಗ ಕನ್ನಡಿಗರಿಗೆ ಮತ್ತೊಂದು ಖುಷಿ ಪಡುವ ಸುದ್ದಿ ಏನಪ್ಪಾ ಅಂದರೆ ದೂರದ ಜಪಾನ್ ದೇಶದಲ್ಲಿ ಕೂಡ ಕೆಜಿಫ್ ಬಿಡುಗಡೆ ಆಗಿ ಅಲ್ಲಿನ ಜನರನ್ನು ಥಿಯೇಟರ್ ಕಡೆ ಸೆಳೆದಿದೆ, ಜಪಾನ್ ದೇಶದಲ್ಲಿ ಕೆಜಿಫ್ ಚಿತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೆಜಿಫ್ ಚಿತ್ರ ಕಳೆದ ತಿಂಗಳು ಬಿಡುಗಡೆ ಆಗಿ ಎಲ್ಲೆಡೆ ಭಾರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ನಮ್ಮ ಕೆಜಿಫ್ ಚಿತ್ರದ ಸಕ್ಸಸ್ ಪಾರ್ಟಿ ಕೂಡ ಬೆಂಗಳೂರಿನಲ್ಲಿ ನಡೆದಿತ್ತು. ಕರ್ನಾಟಕ ಅಲ್ಲದೆ ಕೆಜಿಫ್ ಚಿತ್ರ ಹೊರ ರಾಜ್ಯ ಗಳಲ್ಲಿ ಹಾಗು ಹೊರ ದೇಶ ಗಳಲ್ಲಿ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ತನ್ನ 25 ದಿನಗಳನ್ನು ಮುಗಿಸಿ ಈಗ 50 ದಿನಗಳತ್ತ ಮುನ್ನುಗ್ಗುತ್ತಿದೆ. ಕೆಜಿಫ್ ಚಿತ್ರವನ್ನು ನೋಡಿ ಬಾಲಿವುಡ್ ನಟರು, ಬಾಲಿವುಡ್ ನಿರ್ದೇಶಕರು, ಬಾಲಿವುಡ್ ನಿರ್ಮಾಪಕರು, ತೆಲುಗು , ತಮಿಳು ಚಿತ್ರದ ನಟರು, ಮಲಯಾಳಂ ಕಲಾವಿದರು ಕೂಡ ಕೆಜಿಫ್ ಚಿತ್ರವನ್ನು, ಯಶ್ ಅವರನ್ನು ಹಾಡಿ ಹೊಗಳಿದ್ದರು. ಆದರೆ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಗಳು, ಕನ್ನಡದ ದೊಡ್ಡ ದೊಡ್ಡ ನಟರು ಯಾಕೆ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ? ಚಿತ್ರವನ್ನು ಇನ್ನೂ ಕೂಡ ನೋಡಿಲ್ಲ? ಇದಕ್ಕೆ ಕಾರಣ ಏನಿರಬಹುದು! ಇದರ ಬಗ್ಗೆ ನಮ್ಮ ಒಂದು ಅನಿಸಿಕೆ, ಈ ಸ್ಟೋರಿ ಓದಿರಿ
ಮೊನ್ನೆ ಅಷ್ಟೇ ಕೆಜಿಫ್ ಚಿತ್ರವನ್ನು ತಮಿಳು ನಟರಾದ ವಿಜಯ್, ವಿಕ್ರಂ, ಹಾಗು ಪ್ರಭುದೇವ ಅವರು ನೋಡಿ ಕೆಜಿಫ್ ತಂಡವನ್ನು, ಯಶ್ ಅವರನ್ನು ಹದಿ ಹೊಗಳಿದ್ದಾರೆ. ಇದಲ್ಲದೆ ಒಂದು ವಾರದ ಹಿಂದೆ ತೆಲುಗು ಸ್ಟಾರ್ ರಾಮ್ ಚರಣ್ ಹಾಗು ಅಲ್ಲೂ ಅರ್ಜುನ್ ಅವರು ಕೂಡ ಚಿತ್ರವನ್ನು ನೋಡಿ ಭೇಷ್ ಅಂದಿದ್ದರು. ಇದಲ್ಲದೆ ಬಾಲಿವುಡ್ ನಂತರದ faran ಅಕ್ತರ್, ಶಾರುಖ್ ಖಾನ್, ರವೀನಾ ಟಂಡನ್ ಸೇರಿ ಹಲವಾರು ನಟರು ಕೂಡ ಈ ಚಿತ್ರದ ಬಗ್ಗೆ ಮಾತಾಡಿದ್ದರು. ಆದರೆ ನಮ್ಮ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಹಾಗು ಶಿವಣ್ಣ ಅವರನ್ನು ಬಿಟ್ಟರೆ ಯಾವ ಕನ್ನಡ ನಟರು ಕೂಡ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಇದು ನಿಜಕ್ಕೂ ಬೇಸರ ತಂದಿರುವ ವಿಷ್ಯ. ಕನ್ನಡ ಸೂಪರ್ ಸ್ಟಾರ್ ಆದ ಕಿಚ್ಚ ಸುದೀಪ್ ಅವರು ಹಾಗು ಯಶ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶ್ ಅವರು ಕೂಡ ಭಾಗವಹಿಸಿದ್ದರು. ಇವರಿಬ್ಬರ ದೋಸ್ತಿ ಬಹಳ ಚನ್ನಾಗಿದೆ. ಆದರೂ ಕೂಡ ನಮ್ಮ ಕಿಚ್ಚ ಸುದೀಪ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಅಥವಾ ಟ್ವೀಟ್ ಕೂಡ ಮಾಡಿಲ್ಲ. ಇದಲ್ಲದೆ ಇತ್ತೀಚಿಗೆ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಹಳ ಅದ್ಭುತ ರೀತಿಯಲ್ಲಿ ಮೈಸೂರು ದಸರಾ ಬಗ್ಗೆ ಮಾತಾಡಿದ್ದರು. ದರ್ಶನ್ ಹಾಗು ಯಶ್ ಅವರು ಕೂಡ ಒಳ್ಳೆಯ ಸ್ನೇಹಿತರು ಎಂದೇ ಹೇಳಬಹುದು. ಆದರೂ ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಅಥವಾ ಟ್ವೀಟ್ ಕೂಡ ಮಾಡಿರಲಿಲ್ಲ. ಬಲ್ಲ ಮೂಲಗಳ ಪ್ರಕಾರ ಇದಕೆಲ್ಲ ಕಾರಣ ಅವರವರ ಅಭಿಮಾನಿಗಳು ಅಂತ ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ಸುದೀಪ್ ಹಾಗು ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿಲ್ಲ ಅಂತ ಕೆಲವು ಹೇಳುತ್ತಿದ್ದಾರೆ.
ಇನ್ನೊಂದೆಡೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ಶಿವಣ್ಣ ಅವರು ಕೆಜಿಫ್ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ಪುನೀತ್ ರಾಜಕುಮಾರ್ ಅವರು ಹೊರ ದೇಶದಲ್ಲಿದ್ದರು ಒಂದು ವಿಡಿಯೋ ಮಾಡಿ ಕೆಜಿಫ್ ಚಿತ್ರಕ್ಕೆ, ಯಶ್ ಅವರಿಗೆ ಶುಭ ಹಾರೈಸಿದ್ದರು. ಇದಲ್ಲದೆ ಶಿವಣ್ಣ ಅವರು ಒಂದು ಕಾರ್ಯಕ್ರಮದಲ್ಲಿ ಯಶ್ ಹಾಗು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿ, ಕನ್ನಡದಲ್ಲಿ ಇಂತಹ ಪ್ರಯತ್ನಗಳು ಇನ್ನೂ ಬರಬೇಕು, ಕನ್ನಡ ಚಿತ್ರರಂಗದ ಮಾರ್ಕೆಟ್ ಇನ್ನೂ ಬೆಳೀಬೇಕು ಎಂದು ಹೇಳಿದ್ದರು. ಇದಲ್ಲದೆ ಕನ್ನಡದ ಮತೊಬ್ಬ ಹಿರಿಯ ನಟರಾದ ನವರಸ ನಾಯಕ ಜಗ್ಗೇಶ್ ಅವರು ಕೂಡ ಕೆಜಿಫ್ ಚಿತ್ರದ ಬಗ್ಗೆ ಮಾತಾಡಿ ಅದನ್ನು ಹೊಗಳಿದ್ದರು. ಆದರೆ ಕನ್ನಡದ ಬೇರೆ ಸೂಪರ್ ಸ್ಟಾರ್ಸ್ ಗಳು ಹಾಗು ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರು ಕೆಜಿಫ್ ಚಿತ್ರದ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಇದರ ಬಗ್ಗೆ ಒಂದು ಪ್ರಶ್ನೆ ಈಗ ಪ್ರತಿಯೊಬ್ಬ ಕನ್ನಡ ಚಿತ್ರ ರಸಿಕನಿಗೂ ಕಾಡುತ್ತಿದೆ. ನಮ್ಮವರೇ ನಮ್ಮನ್ನು ಯಾಕೆ ತುಳಿಯುತ್ತಿದ್ದಾರೆ ಎಂದು ಕೆಲವರು ಕೇಳುತ್ತಿದ್ದಾರೆ.

Trending

To Top