Film News

ಊಹೆ ಸಹ ಮಾಡಲಾಗದ ಪೋಸ್ಟ್ ರಿಲೀಸ್ ಮಾಡಿದ ಕೆಜಿಎಫ್ ತಂಡ!

ಬೆಂಗಳೂರು: ಕೆಲವು ದಿನಗಳಿಂದ ಪೋಸ್ಟ್ ಗಳ ಮೂಲಕವೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುವ ಕೆಜಿಎಫ್ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟ್ ಮೂಲಕ ಕೆಜಿಎಫ್ ಅಭಿಮಾನಿಗಳಿಗೆ ಸಡನ್ ಸರ್ಪ್ರೈಸ್ ನೀಡಿದೆ ಎನ್ನಲಾಗಿದೆ.

ಹೌದು ಕೆಜಿಎಫ್ ಚಿತ್ರದ ಭಾಗ-೨ನ್ನು ಕಾಣಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಅಭಿಮಾನಿಗಳು. ಇನ್ನೂ ಚಿತ್ರತಂಡ ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂಬ ಉದ್ದೇಶದಿಂದ ಸದಾ ಒಂದೊಂದು ಬಿಗ್ ಅಪ್ ಡೇಟ್ ನೀಡುತ್ತಾ ಬರುತ್ತಿದೆ. ಈ ಹಾದಿಯಲ್ಲಿ ಜ.೪ ರಂದೇ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಇದೀಗ ಮತ್ತೊಂದು ಪೋಸ್ಟ ರಿಲೀಸ್ ಮಾಡಿದೆ.

ಇನ್ನೂ ಹೊಂಬಾಳೆ ಫಿಲಂಸ್ ವತಿಯಿಂದ ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಯಾರು ಕೂಡ ಈ ಬಗ್ಗೆ ನಿರೀಕ್ಷೆ ಮಾಡಲಾಗದಂತಹ ಪೋಸ್ಟ್ ಇದಾಗಿದೆ. ಹೊಂಬಾಳೆ ಫಿಲ್ಮ್ಸಂ ವತಿಯಿಂದ ’ಕೆಜಿಎಫ್ ಟೈಮ್ಸ್’ ಎಂಬ ಹೆಸರಿನಲ್ಲಿ ವಿಶೇಷ ಪತ್ರಿಕೆಯೊಂದನ್ನು ಪೋಸ್ಟ್ ಮಾಡಲಾಗಿದೆ. ಈ ಪತ್ರಿಕೆಯಲ್ಲಿ ಕೆಜಿಎಫ್ ಸಿನೆಮಾದ ಅನುಭವ ಕಥೆ, ಪಾತ್ರಗಳ ಪರಿಚಯ ಸೇರಿದಂತೆ ಅನೇಕ ವಿಷಯಗಳು ಇದರಲ್ಲಿ ಸಿಗಬಹುದಂತೆ. ಜನವರಿ 4 ರಿಂದ ಆರಂಭವಾಗುವ ಈ ವಿಶೇಷ ಸಂಚಿಕೆಯ ವಿವರ ಪೂರ್ಣವಾಗಿ ಲಭ್ಯವಾಗಿಲ್ಲ. ಇನ್ನೂ ನಿರ್ಮಾಪಕರ ಈ ಕೆಲಸಕ್ಕೆ ಇಡೀ ಚಿತ್ರರಂಗ ಕುತೂಹಲದಿಂದ ನೋಡುತ್ತಿದೆ.

ಜನವರಿ ಮಾಹೆಯ ಅಂತ್ಯದೊಳಗೆ ಕೆಜಿಎಫ್-೨ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಶೀಘ್ರವೇ ಚಿತ್ರದ ಬಿಡುಗಡೆಗೆ ಪ್ಲಾನ್ ಸಹ ಮಾಡಿದೆಯಂತೆ. ಇನ್ನೂ ಕೆಜಿಎಫ್ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಸಹ ರಿಲೀಸ್ ಆಗಲಿದೆ ಎನ್ನಲಾಗಿದೆ.

Trending

To Top