Uncategorized

KGF ಸಲಾಂ bhai ಹಾಡಿನ ಮೇಲೆ ಕನ್ನಡಿಗರು ಗರಂ! ಅಷ್ಟಕ್ಕೂ ಆಗಿದ್ದೇನು ಗೊತ್ತ

bhai

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ KGF ಚಿತ್ರದ ಹೊಸ ಹಾಡು ಸಲಾಂ bhai ಬಿಡುಗಡೆ ಆಗಿತ್ತು. KGF ಚಿತ್ರದ ಈ ಹಾಡನ್ನು ಒಂದೇ ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಈ ಹಾಡು ಸದ್ಯ ಯೌಟ್ಯೂಬ್ ನಲ್ಲಿ ಸಿಕ್ಕಾ ಪಟ್ಟೆ ಟ್ರೆಂಡ್ ಆಗುತ್ತಿದೆ. ಆದರೆ ಕಾನಂದಿಗರು ಈ ಹಾಡಿನ ಮೇಲೆ, ಹಾಗು ಇಡೀ ಚಿತ್ರ ತಂಡದ ಮೇಲೆ ಗರಂ ಆಗಿದ್ದಾರೆ. ಯಾಕೆ ಅಂದ್ರೆ ಈ ಹಾಡಿನ ಸುಮಾರು 70 ರಷ್ಟು ಭಾಗ ಹಿಂದಿ ಯಲ್ಲಿ ಇದೆ ಉಳಿದ ಭಾಗ ಕನ್ನಡದಲ್ಲಿ ಇದೆ. ಅದೇ ತಮಿಳು ವರ್ಷನ್ ನಲ್ಲಿ ೧೦೦% ಭಾಗ ತಮಿಳಿನಲ್ಲೇ ಇದೆ. ಯಾಕೆ ಈ ತಾತ್ಸಾರ? ಕನ್ನಡಿಗರು ಏನು ಮಾಡಿದ್ರು ನೋಡ್ತಾರಾ ಅಂತ ಜನರು ಗರಂ ಆಗಿದ್ದಾರೆ. ತಮಿಳು ಭಾಷೆಗೆ ಒಂದು ರೂಲ್ಸ್ ನಮ್ಮ ಭಾಷೆಗೆ ಒಂದು ರೂಲ್ಸ್ ? ಎಂದು ಜನರು ಈ ಹಾಡಿನ ಮೇಲೆ ಗರಂ ಆಗಿದ್ದರೆ. ಅದಲ್ಲದೆ ಈ ಹಾಡನ್ನು ಬರೆದವರು ನಾಗೇಂದ್ರ ಪ್ರಸಾದ್ ಅವರು. ಅವರ ಮೇಲು ಕೂಡ ಜನರು ಗರಂ ಆಗಿದ್ದಾರೆ. ಇದಕ್ಕೆ ಈ ಕೆಳಗಿನ ಟ್ರೊಲ್ ಗಳು ಹಾಗು ಕಾಮೆಂಟ್ ಗಳೇ ಸಾಕ್ಷಿ. ನೀವು ಒಮ್ಮೆ ಈ ಕೆಳಗಿನ ಟ್ರೊಲ್ ನೋಡಿರಿ.
ಈ ಕೆಳಗಿನ ಮತ್ತೊಂದು ಟ್ರೊಲ್ ನೋಡಿರಿ. ಇದರಲ್ಲಿ ಹಿಂದಿ ಪದ ಬಳಕೆಯ ಹಾಗು ಕನ್ನಡ ಪದ ಬಳಕೆಯ ಅಷ್ಟು ವಿವರಗಳು ಕೊಟ್ಟಿದ್ದಾರೆ. ನೀವು ನೋಡುವ ಹಾಗೆ ಹಾಡಿನ 70 ರಷ್ಟು ಭಾಗ ಹಿಂದಿಯಲ್ಲೇ ಇದೆ. ನಾವು ಕನ್ನಡಿಗರು ವಿಶಾಲ ಹೃದಯವರು, ನಮ್ಮ ಭಾಷೆ ಗಿಂತ ಬೇರೆ ಭಾಷೆಗೆ ಜಾಸ್ತಿ ಪ್ರೋತ್ಸಾಹ ಕೊಡುತ್ತೇವೆ ಎಂಬ ಉಪೇಂದ್ರ ಅವರ ಡೈಲಾಗ್ ಈಗ ನಿಜ ಅನ್ನಿಸ್ತಿದೆ ಕಣ್ರೀ! ಈ ಕೆಳಗಿನ ಟ್ರೊಲ್ ಒಮ್ಮೆ ನೋಡಿರಿ ಇನ್ನು ಬೇಜಾರು ಬರುವ ವಿಷ್ಯ ಏನಪ್ಪಾ ಅಂದರೆ ತಮಿಳಿನಲ್ಲಿ KGF ಹಾಡಿಗೆ ಎಲ್ಲಾ ಪದಗಳು ತಮಿಳು ಭಾಷೆಯಲ್ಲೇ ಉಪಯೋಗಿಸಿದ್ದಾರೆ. ತೆಲುಗು ಹಾಗು ಮಲಯಾಳಂ ನಲ್ಲಿ ಕೂಡ ಹಾಗೆ ಮಾಡಿದ್ದಾರೆ. ಆದರೆ ಕನ್ನಡ ಭಾಷೆಯ ಹಾಡಲ್ಲಿ ಮಾತ್ರ ಹಿಂದಿ ಯನ್ನು ಉಪಯೋಗಿಸಿದ್ದಾರೆ. ಈಗ ಸದ್ಯ ಈ ಹಾಡಿನ ವಿರುದ್ಧ ಒಂದು ಅಭಿಯಾನ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ಟ್ರೊಲ್ ಪೇಜುಗಳು ಶುರು ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ, ಫೇಸ್ಬುಕ್ ನಲ್ಲಿ ಹಾಗು ಟ್ವಿಟ್ಟರ್ ನಲ್ಲಿ ಈ ಹಾಡಿನ ವಿರುದ್ಧ ಜನರು ಟ್ರೊಲ್ ಮಾಡುತ್ತಿದ್ದಾರೆ. ಅದಲ್ಲದೆ ಯೌಟ್ಯೂಬ್ ನಲ್ಲಿ ಕೂಡ ಈ ಹಾಡಿಗೆ ಭಾರಿ ತಿರಸ್ಕಾರ ಬರುತ್ತಿದೆ.
ಅದಲ್ಲದೆ ಫೇಸ್ಬುಕ್ ನಲ್ಲಿ ಕೂಡ ಈ ಹಾಡಿನ ಪೋಸ್ಟ್ ಕೆಳಗೆ ಸುಮಾರು 2000 ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ. ಅದರಲ್ಲಿ ಕೆಲವರು KGF ಹಾಡಿನ ವಿರುದ್ಧ ಗುಡುಗಿದ್ದಾರೆ. ಇನ್ನೂ ಕೆಲವರು ನೀವು ಕನ್ನಡದ ಒಂದು ಒಳ್ಳೆಯ ಚಿತ್ರವನ್ನು ಪ್ರೋತ್ಸಾಹಿಸಲೇಬೇಕು. KGF ಚಿತ್ರಕ್ಕಾಗಿ ಇಡೀ ಭಾರತ ವೇಟ್ ಮಾಡ್ತಾ ಇದ್ದಾರೆ. ನಾವು ಕನ್ನಡಿಗರಾಗಿ ಇದನ್ನು ಒಪ್ಪಿಕೊಳ್ಳಬೇಕು ಎಂದು KGF ಹಾಡನ್ನು ಹಾಡಿ ಹೊಗಳಿದ್ದಾರೆ. ಈ ಕೆಳಗಿನ ಫೇಸ್ಬುಕ್ ಕಾಮೆಂಟ್ಸ್ ಒಮ್ಮೆ ನೋಡಿರಿ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕೂಡ ಕಾಮೆಂಟ್ ಮೂಲಕ ನಮಗೆ ತಿಳಿಸಿ ಏನೇ ಆಗಲಿ ಸ್ನೇಹಿತರೆ! ಒಂದೊಳ್ಳೆ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸೋಣ. KGF ಚಿತ್ರ ತಂಡ ಬಹಳ ಕಷ್ಟ ಪಟ್ಟು ಸುಮಾರು 3 ವರ್ಷಗಳಿಂದ ಇಂತಹ ಅದ್ಭುತ ಸಿನೆಮಾವನ್ನು ಕಾನಂದಿಗರಿಗೆ ಕೊಟ್ಟಿದ್ದಾರೆ. ನಾವು ಇದನ್ನು ಆದಷ್ಟು ಪ್ರೋತ್ಸಾಹಿಸಬೇಕು. ನಿಮಗೆಲ್ಲ ಗೊತ್ತಿರೋ ಹಾಗೆ KGF ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. KGF ಚಿತ್ರಕ್ಕಾಗಿ ನಮ್ಮ ಕರ್ನಾಟಕ ದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಕನ್ನಡ ಸೇರಿ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿನ ಹೆಸರು “ಸಲಾಂ bhai ” ಅಂತ. ಈ ಹಾಡಿನ ಲಿರಿಕ್ಸ್ ಸಮೇತ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಲಹರಿ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದ್ದಾರೆ. KGF ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ವನ್ನು ನೀಡಿದ್ದಾರೆ. ಈ ಹಾಡನ್ನು Singer’s: Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs ಅವರು ಹಾಡಿದ್ದಾರೆ. ಈ ಅದ್ಭುತ ಹಾಡನ್ನು ನೀವು ಒಮ್ಮೆ ನೋಡಿರಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಹಾಗು ಇದನ್ನು ಆದಷ್ಟು ಶೇರ್ ಮಾಡಿರಿ

Trending

To Top