News

KGF ಚಿತ್ರಕ್ಕೆ ಇಡೀ ದೇಶವೇ ಫಿದಾ! ಇಲ್ಲಿದೆ KGF ಚಿತ್ರದ exclusive review ಆದಷ್ಟು ಶೇರ್ ಮಾಡಿ

KGF-review

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ. KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ. ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು. ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡಿದ್ದಾರೆ. ಇಡೀ ಭಾರತದಲ್ಲೇ ಬಾಹುಬಲಿ ಚಿತ್ರವನ್ನು ಬಿಟ್ಟರೆ KGF ಚಿತ್ರದಲ್ಲಿಯೇ ಇಷ್ಟೊಂದು ಕಲಾವಿದರು ಕೆಲಸ ಮಾಡಿರುವುದು. ಇದು ನಿಮಗೆ ಗೊತ್ತಿರೋ ವಿಷ್ಯ! ಕೆಲವೇ ಕೆಲವು ಕನ್ನಡ ಚಿತ್ರಗಳು ಪರಭಾಷೆಗೆ ಡಬ್ ಆಗುತ್ತವೆ. ಇದೆ ಮೊದಲ ಬಾರಿಗೆ ಒಂದೇ ಬಾರಿ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಎಂದರೆ ಅದು KGF ಕನ್ನಡ ಸಿನೆಮಾಗಳ ಮಾರ್ಕೆಟ್ ಗೆ ಹೆಚ್ಸೆಂದರೆ 500 ಸ್ಕ್ರೀನ್ ಗಳು ಸಿಗುತ್ತವೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಬರೊಬ್ಬರು 2500 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ KGF KGF ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಕೆಲವು ಘಂಟೆ ಗಳಲ್ಲಿ ಯೌಟ್ಯೂಬ್ ನ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿತ್ತು. ಇದಲ್ಲದೆ KGF ಚಿತ್ರದ ಎರಡನೇ ಟ್ರೇಲರ್ ಹಾಗು ಹಾಡುಗಳು ಕೂಡ ಯೌಟ್ಯೂಬ್ ನಲ್ಲಿ ಅದೆಷ್ಟೋ ದಿನಗಳ ಕಾಲ ಟ್ರೆಂಡಿಂಗ್ ನಲ್ಲಿ ಇತ್ತು. ಇದೆ ಮೊದಲ ಬಾರಿಗೆ ಒಂದು ಸಿನಿಮಾದ ಟ್ರೇಲರ್ ಬರೋಬ್ಬರಿ 10 ದಿನಗಳ ಕಾಲ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತು. ಬೇರೆ ಯಾವ ಭಾಷೆಯ ಸಿನಿಮಾಗಳು ಕೂಡ ಇಂತಹ ಒಂದು ಸಾಧನೆಯನ್ನು ಮಾಡಿಲ್ಲ ಕಣ್ರೀ. ಸೋಶಿಯಲ್ ಮೀಡಿಯಾ ಹೊರೆತು ಪಡಿಸಿ KGF ಗೂಗಲ್ ನಲ್ಲಿ ಕೂಡ ನಂಬರ್ ೧. ನವೆಂಬರ್ ತಿಂಗಳಲ್ಲಿ KGF ಚಿತ್ರದ ಬಗ್ಗೆ ನಮ್ಮ ಭಾರತದ ಜನ ಬರೋಬ್ಬರಿ 10 ಲಕ್ಷ ಸರ್ಚ್ ಗಳನ್ನೂ ಗೂಗಲ್ ನಲ್ಲಿ ಮಾಡಿದ್ದಾರೆ. ಬಾಹುಬಲಿ, ಹಾಗು ರಜನಿಕಾಂತ್ ಅವರ ರೋಬೊ ಬಿಟ್ಟರೆ ಇದೆ ಮೊದಲು ಒಂದು ಕನ್ನಡ ಚಿತ್ರವನ್ನು ಇಷ್ಟೊಂದು ಜನ ಸರ್ಚ್ ಮಾಡಿದ್ದಾರೆ.
ಇದನ್ನೆಲ್ಲಾ ಹೊರತು ಪಡಿಸಿದ್ರೆ, KGF ನಮ್ಮ ಕನ್ನಡದ ಸಿನಿಮಾ ಕಣ್ರೀ! ಕನ್ನಡಿಗರ ಹೆಮ್ಮೆಯ ಸಿನಿಮಾ. ಈ ಚಿತ್ರದಿಂದ ಇಡೀ ಭಾರತವೇ ನಮ್ಮ ಕನ್ನದತ್ತ ತಿರುಗಿ ನೋಡುವಂತೆ ಮಾಡಿದೆ. KGF ಚಿತ್ರ ತಂಡಕ್ಕೆ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಮ್ಮ ನಮನಗಳು. ನಾಳೆ ತಪ್ಪದೆ KGF ಚಿತ್ರವನ್ನು ನೋಡಿ, ಹಾಗು ಒಂದೊಳ್ಳೆ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಎಲ್ಲಾ ಲೇಟೆಸ್ಟ್ ಮಾಹಿತಿ ಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಪ್ರತಿಯೊಬ್ಬ ಭಾರತೀಯ ಕೂಡ ಈ ಚಿತ್ರವನ್ನು ನೋಡಲೇಬೇಕು. ಇದು KGF ಚಿತ್ರ ತಂಡದ ಗೆಲುವು ಅಲ್ಲ, ಇದು ಕನ್ನಡಿಗರ ಗೆಲುವು ಎಂದೇ ಹೇಳಬಹುದು. KGF ಚಿತ್ರಕ್ಕೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಲ್ಲ ಮೂಲಗಳ ಪ್ರಕಾರ KGF ಚಿತ್ರದ ಮೊದಲ ದಿನದ ಒಟ್ಟು ಕಲೆಕ್ಷನ್ ಸುಮಾರು 50 ಕೋಟಿ ಗೂ ಹೆಚ್ಚು. ತಪ್ಪದೆ KGF ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ಮಿಸ್ ಮಾಡದೆ ನೋಡಿರಿ.

Trending

To Top