News

KGF ಸಿನಿಮಾದಲ್ಲಿ ಬರುವ ಆ ಪುಟ್ಟ ಹುಡುಗ ಯಾರು ಗೊತ್ತಾ! ಒಂದು ಮಾತಿನಿಂದ ಜಗತ್ತು ಗೆದ್ದ ಹುಡುಗ

kgf-boy

KGF ಚಿತ್ರ ಇನ್ನೇನು ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ದೇಶ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರದ ಟ್ರೇಲರ್ ಗಳು ಹಾಗು ಹಾಡುಗಳು ಈಗ ಇದೆ ದೇಶದ ಮನೆ ಮಾತಾಗಿದೆ. KGF ಚಿತ್ರದ ಹಾಡುಗಳು ಮತ್ತೆ ಟ್ರೇಲರ್ ಸುಮಾರು 2 ವಾರಗಳಿಂದ ಯೌಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿದೆ. KGF ಚಿತ್ರದ ಟ್ರೇಲರ್ ನಲ್ಲಿ ಬರುವ ಒಬ್ಬ ಪುಟ್ಟ ಹುಡುಗ ಕೂಡ ಈಗ ದೇಶದ ಮನೆ ಮಾತಾಗಿದ್ದಾನೆ. ಅದು ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಮಾಹಿತಿ.
KGF ಚಿತ್ರದ ಟ್ರೇಲರ್ ನಲ್ಲಿ ಬರುವ ಒಂದು ಡೈಲಾಗ್ “kya chahiye tumko ” ಅದಕ್ಕೆ ಒಬ್ಬ ಪುಟ್ಟ ಹುಡುಗಡೆ ಹೇಳುತ್ತಾನೆ “ದುನಿಯಾ” ಅಂತ. ಈ ಒಂದೇ ಒಂದು ಡೈಲಾಗ್ ಇಡೀ ದೇಶದ ಜನ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಪುಟ್ಟ ಹುಡುಗ ಮುಂದೆ KGF ಚಿತ್ರದಲ್ಲಿ ರಾಕಿ ಅಂದರೆ ಯಶ್ ಆಗುತ್ತಾನೆ. KGF ಚಿತ್ರದ ಟ್ರೇಲರ್ ಬಿಡುಗಡೆ ಆದಾಗ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಬಹಳ ಫೇಮಸ್ ಆದ ಮತ್ತೊಬ್ಬ ನಟ ಅಂದರೆ ಈ ಪುಟ್ಟ ಹುಡುಗ.
ಈ ಪುಟ್ಟ ಹುಡುಗ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ KGF ಚಿತ್ರ ತಂಡ ಮಾತ್ರ ಈ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ನಾವು ಈ ಪುಟ್ಟ ಹುಡುಗನ ಎಲ್ಲಾ ಡೀಟೇಲ್ಸ್ ಹುಡುಕಿದ್ದೇವೆ. ಈ ಪುಟ್ಟ ಹುಡುಗನ ಹೆಸರು Anmol Vijay Bhatkal ಅಂತ. KGF ಚಿತ್ರದಲ್ಲಿ anmol 14 ವರ್ಷದ ಪಾತ್ರವನ್ನು ಮಾಡಿದ್ದಾನೆ. anmol ವಿಜಯ್ ಸದ್ಯ 9 ಕ್ಲಾಸ್ ನಲ್ಲಿ ಓಡುತಿದ್ದಾನೆ. ಕಳೆದ 9 ವರ್ಷಗಳಿಂದ ಈ ಪುಟ್ಟ ಹುಡುಗ ಡಾನ್ಸ್ ಪ್ರಾಕ್ಟೀಸ್ ಮಾಡಿ ಅದಾದ ನಂತರ ಸುಮಾರು ಒಂದು ತಿಂಗಳ ಕಾಲ KGF ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಇದ್ದನಂತೆ. ಪ್ರಶಾಂತ್ ನೀಲ್ ಅವರು ಇವನ ಟ್ಯಾಲೆಂಟ್ ನೋಡಿ ಇವನಿಗೆ ಯಶ್ ಚಿಕ್ಕ ವಯಸ್ಸಿನ ಪಾತ್ರವನ್ನು ಕೊಟ್ಟಿದ್ದಾರೆ.
Anmol Vijay ಭಟ್ಕಳ್ ಹೇಳುವ ಪ್ರಕಾರ “ನನಗೆ ಆಕ್ಟಿಂಗ್ ಅಂದರೆ ತುಂಬಾನೇ ಇಷ್ಟ, ಅಷ್ಟೇ ಅಲ್ಲದೆ ನನ್ನ ಶಾಲೆಯ ಚಾಮರಾಜ ಮೇಷ್ಟ್ರು ನನಗೆ ಒಂದು ತಿಂಗಳು KGF ಗಾಗಿ ರಾಜ ಕೂಡ ಕೊಟ್ಟು ಬಹಳ ಪ್ರೋತ್ಸಾಹ ನೀಡಿದರು” . ” ನನಗೆ KGF ಟ್ರೇಲರ್ ನಲ್ಲಿ ನನ್ನ ನಟನೆ ನೋಡಿ ಬಹಳ ಖುಷಿ ಆಗಿದೆ” ಎಂದು ಹೇಳಿದ್ದಾನೆ. ಇದಕ್ಕಿಂತ ಹೆಚ್ಚು ಮಾಹಿತಿಯನ್ನು ಹೇಳಬಾರದು ಎಂದು ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಹೇಳಿದ್ದಾರೆ ಎಂದು ಈ ಪುಟ್ಟ ಹುಡುಗ ಹೇಳಿದ್ದಾನೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top