News

(video)KGF ಚಿತ್ರಕ್ಕೆ ಶುಭ ಹಾರೈಸಿದ ಸತೀಶ್ ನೀನಾಸಂ! ಈ ವಿಡಿಯೋ ನೋಡಿ

satish

ಸತೀಶ್ ನೀನಾಸಂ ಅವರು ಸದ್ಯ ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು. ಇತ್ತೀಚಿಗೆ ಸತೀಶ್ ನೀನಾಸಂ ನಟಿಸಿದ್ದ ಅಯೋಗ್ಯ ಚಿತ್ರ ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರವೆಂದೇ ಹೇಳಬಹುದು. ಆ ಚಿತ್ರದಲ್ಲಿ ಸೈಟಿಸ್ ನೀನಾಸಂ ಅವರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದರು. ಸದ್ಯ ಸತೀಶ್ ನೀನಾಸಂ ಅವರು ಚಂಬಲ್ ಎನ್ನುವ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಾಕೋಬ್ ವರ್ಗೀಸ್ ಅವರು ನಿರ್ದೇಶನ ಮಾಡಿದ್ದಾರೆ. ಚಂಬಲ್ ಚಿತ್ರದ ಒಂದು ಪ್ರೆಸ್ ಮೀಟ್ ನಲ್ಲಿ KGF ಚಿತ್ರದ ಬಗ್ಗೆ ಸತೀಶ್ ನೀನಾಸಂ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಅವರ ಜೊತೆ ಕನ್ನಡ ನಟಿ ಸೋನು ಗೌಡ ಅವರು ನಟಿಸಿದ್ದಾರೆ. ಚಂಬಲ್ ಚಿತ್ರದ ಶೂಟಿಂಗ್ ಈಗ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಸತೀಶ್ ನೀನಾಸಂ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಹಾಗು KGF ಚಿತ್ರದ ಬಗ್ಗೆ ಕೂಡ ಮಾತಾಡಿದ್ದಾರೆ. KGF ಅಂತಹ ಚಿತ್ರಕ್ಕೆ 40 – 50 ಕೋತಿ ಬಜೆಟ್ ಬೇಕು, ಅದು ಹೆಮ್ಮೆ ಪಡುವ ವಿಷ್ಯ, ನನ್ನ ಸಿನಿಮಾ ಗಳಿಗೆ ಅಷ್ಟೊಂದು ಬಜೆಟ್ ಬೇಡ ಎಂದು ಹೇಳಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೆ ಸತೀಶ್ ನೀನಾಸಂ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಒಳ್ಳೆಯ ಸ್ನೇಹಿತರು. ಇವರಿಬ್ಬರು ಡ್ರಾಮಾ ಚಿತ್ರದಲ್ಲಿ ನಟಿಸಿದ್ದಾರೆ. ಡ್ರಾಮಾ ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ ಕನ್ನಡ ಚಿತ್ರ. ಇದೆ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ನಟಿಸಿದ್ದಾರೆ. ಸತೀಶ್ ಅವರು ಯಶ್ ಅವರಿಗೆ KGF ಚಿತ್ರಕ್ಕೆ ಶುಭ ಹಾರೈಸಿದ್ದಾರೆ. KGF ಚಿತ್ರ ಇನ್ನೇನು ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ನಮ್ಮ ಇಡೀ ದೇಶವೇ KGF ಚಿತ್ರಕ್ಕಾಗಿ ವೇಟ್ ಮಾಡುತ್ತಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top