ತಿರುವನಂತಪುರ: ಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ಯಶ್ ರಂತೆ ಪವರ್ಪುಲ್ ಪಾತ್ರ ನಿರ್ವಹಿಸಿದ ಗರುಡ ಪಾತ್ರಧಾರಿ ರಾಮಚಂದ್ರ ರಾಜು ಇದೀಗ ಮಾಲಿವುಡ್ ಗೆ ಹಾರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಲಯಾಳಂ ಸ್ಟಾರ್ ನಟನ ಚಿತ್ರವೊಂದರಲ್ಲಿ ವಿಲನ್ ಪಾತ್ರ ಪೋಷಿಸಲಿದ್ದಾರೆ ಗರುಡ.
ಮಲಯಾಳಂ ಸೂಪರ್ ಸ್ಟಾರ್ ಮೋಹನ ಲಾಲ್ ರವರ ಚಿತ್ರದಲ್ಲಿ ಗರುಡಾ ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದು, ಈ ಚಿತ್ರವನ್ನು ಉನ್ನಿಕೃಷ್ಣನ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಗರುಡ ಮೋಹನಲಾಲ್ ರವರ ವಿರುದ್ದ ವಿಲನ್ ಪಾತ್ರದಲ್ಲಿ ನಟಿಸಲಿದ್ದು, ಯಾವ ರೀತಿಯಲ್ಲಿ ಅಭಿನಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಲಯಾಳಂ ಸಿನಿರಂಗದ ಖ್ಯಾತ ನಿರ್ದೇಶಕ ಉನ್ನಿಕೃಷ್ಣನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಅರಟ್ಟು ಎಂಬ ಚಿತ್ರದಲ್ಲಿ ಮೋಹನ್ ಲಾಲ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನೆಮಾ ಆಕ್ಷನ್ ಆಧಾರಿತ ಚಿತ್ರವಾಗಿದ್ದು, ಸಿನೆಮಾದ ಶೂಟಿಂಗ್ ಸಹ ಪ್ರಾರಂಭವಾಗಿದೆ. ಇನ್ನೂ ಚಿತ್ರದ ಕಥೆಯ ವಿಚಾರಕ್ಕೆ ಬಂದರೇ ಚಿತ್ರದಲ್ಲಿನ ನಾಯಕ ಪಟ್ಟಣದಿಂದ ಹಳ್ಳಿಯೊಂದಕ್ಕೆ ದೊಡ್ಡ ಉದ್ದೇಶ ಪೂರೈಸುವ ನಿಟ್ಟನಲ್ಲಿ ಹೋಗುತ್ತಾರೆ. ಅಲ್ಲಿನ ಸ್ಥಳೀಯರೊಂದಿಗೆ ಹೋರಾಟ ಮಾಡುವಂತಹ ಕಥೆಯೇ ಅರಟ್ಟು ಎಂದು ಹೇಳಲಾಗುತ್ತಿದ್ದು, ಈ ಸಿನೆಮಾದಲ್ಲಿ ಸ್ಯಾಂಡಲ್ವುಟ್ ನಟಿ ಶ್ರದ್ಧಾ ಶ್ರೀನಾಥ್ ಸಹ ಬಣ್ಣ ಹಚ್ಚಲಿದ್ದಾರೆ.
