Film News

ಜು.16 ರಂದು ತೆರೆಮೇಲೆ ಅಬ್ಬರಿಸಲಿದ್ದಾನೆ ರಾಕಿ ಭಾಯ್!

ಬೆಂಗಳೂರು: ಟೀಸರ್ ಮೂಲಕವೇ ಇಡಿ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕೆಜಿಎಫ್ ಚಾಪ್ಟರ್-2 ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆತಿದೆ.

ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವ ದಿನಾಂಕವನ್ನು ಪ್ರಕಟ ಮಾಡುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದ್ದರು. ಅದರಂತೆ ಕೆಜಿಎಫ್ ಚಾಪ್ಟರ್-2 ಚಿತ್ರ ಜುಲೈ 16, 2021 ರಂದು ವಿಶ್ಯದಾದ್ಯಂತ ಬಿಡುಗಡೆಯಾಗಲಿದೆಯಂತೆ.

ಇನ್ನೂ ಈಗಾಗಲೇ ಪಾನ್ ಇಂಡಿಯಾದಡಿ ನಿರ್ಮಾಣವಾದ ಎಲ್ಲಾ ಬಿಗ್ ಬಜೆಟ್ ಸಿನೆಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಕೆಜಿಎಫ್ ಚಿತ್ರ ಮಾತ್ರ ಬಿಡುಗಡೆ ದಿನಾಂಕ ಬಹಿರಂಗ ಮಾಡಿರಲಿಲ್ಲ. ಇದೀಗ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಕೆಜಿಎಫ್ ಅಭಿಮಾನಿಗಳಲ್ಲಿ ಇನಷ್ಟು ಹೈಪ್ ಕ್ರಿಯೇಟ್ ಮಾಡಿದೆ ಚಿತ್ರತಂಡ.

ಫೆಬ್ರವರಿಯಿಂದ ಬಹುತೇಕ ಎಲ್ಲಾ ಬಿಗ್ ಬಜೆಟ್ ಸಿನೆಮಾಗಳು ತೆರೆಗೆ ಏರಲಿದ್ದು, ಆರ್.ಆರ್.ಆರ್ ಹಾಗೂ ರಜನಿಕಾಂತ್ ರವರ ಅಣ್ಣಾತೆ, ವಕೀಲ್ ಸಾಭ್, ಸರ್ಕಾರುವಾರಿ ಪಾಟ ಸೇರಿದಂತೆ ಅನೇಕ ಸ್ಟಾರ್ ನಟರ ಚಿತ್ರಗಳು ಸಹ ಬಿಡುಗಡೆಯಾಗಲಿದ್ದು, ಈ ಚಿತ್ರಗಳು ಬಿಡುಗಡೆಯಾಗುವುದಕ್ಕೂ ಮುನ್ನಾ ಕೆಜಿಎಫ್ ಚಿತ್ರ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್ ಅನ್ನು ಯಾವ ರೀತಿ ಬ್ರೇಕ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Trending

To Top