Film News

ಕೆಜಿಎಫ್-2: ಅಧೀರನ ಶೂಟಿಂಗ್ ಮುಕ್ತಾಯ!

ಬೆಂಗಳೂರು: ಇಡೀ ದೇಶದ ಸಿನಿಪ್ರಿಯರೆಲ್ಲಾ ಕಾಯುತ್ತಿರುವ ಕೆಜಿಎಫ್-2 ಚಿತ್ರದಲ್ಲಿನ ವಿಲನ್ ಅಧೀರನ ಪಾತ್ರಕ್ಕೆ ಸಂಬಂಧಿಸಿದಂತೆ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ಅಧೀರನ ಪಾತ್ರ ಪೋಷಿಸಿದ ಸಂಜಯ್ ದತ್ ರವರೊಂದಿಗೆ ಪೋಟೊ ತೆಗೆಸಿಕೊಂಡ ಪೋಟೊಗಳು ವೈರಲ್ ಆಗಿದೆ.


ಕೆಜಿಎಫ್-2 ಚಿತ್ರವನ್ನು ಸುಮಾರು 2 ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದು, ಹೈದರಾಬಾದ್ ನಲ್ಲಿ ಕ್ಲೈಮಾಕ್ಸ್ ಹಂತದ ಶೂಟಿಂಗ್ ಸಹ ಮುಗಿಸಿದ್ದಾರೆ. ಲಾಕ್ ಡೌನ್ ಬಳಿಕ ಆರಂಭವಾದ ಚಿತ್ರೀಕರಣ ಮುಗಿದಿರುವ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ.


ಇನ್ನೂ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ನಲ್ಲಿ ಸಂಜಯ್ ಅವರು ನಿಜ ಜೀವನದಲ್ಲೂ ವಾರಿಯರ್ ಇದ್ದಂಗೆ, ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿದಿದೆ. ನಟ ಯಶ್ ರವರ ಜೊತೆ ಕೆಲಸ ಮಾಡುವುದು ದಿನನಿತ್ಯ ಹಬ್ಬಂದತೆ ಇರುತ್ತದೆ. ಕೆಜಿಎಫ್ ಚಾಪ್ಟರ್-೨ ಚಿತ್ರವನ್ನು ತೆರೆಮೇಲೆ ನೊಡಲು ಇಡೀ ಜಗತ್ತು ಕಾಯುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಕೆಜಿಎಫ್ ಭಾಗ-1 ಸಿನೆಮಾ ತೆರೆಕಂಡು ನಾಳೆ ಅಚಿದರೇ ಡಿ.21 ಕ್ಕೆ ಎರಡು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಾಳೆ ಕೆಜಿಎಫ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ. ಈ ಕುರಿತು ಚಿತ್ರತಂಡವೇ ಟ್ವಿಟರ್ ನಲ್ಲಿ ಬಹಿರಂಗಪಡಿಸಿದೆ.

Trending

To Top