ಡಿಸೆಂಬರ್ ಮಾಹೆಯಿಂದ ಕೆಜಿಎಫ್-3 ಸಿನೆಮಾ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.. ನಿರ್ಮಾಪಕ ಬಿಚ್ಚಿಟ್ರು ಸತ್ಯ…

ಇದೀಗ ಎಲ್ಲೆಡೆ ಕೆಜಿಎಫ್-2 ಸಿನೆಮಾದ್ದೆ ಹವಾ. ಬಾಕ್ಸ್ ಆಫೀಸ್ ಅನ್ನು ಲೂಟಿ ಹೊಡೆಯುತ್ತಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ ಬಂದಿದೆ.  ಇನ್ನೂ ಕೆಜಿಎಫ್-2 ಸಿನೆಮಾ ಗ್ರಾಂಡ್ ಸಕ್ಸಸ್ ಆದ ಖುಷಿಯಲ್ಲಿ ಸಿನಿಮಾ ತಂಡವಿದೆ. ಸದ್ಯ ಕೆಜಿಎಫ್-3 ಸಿನೆಮಾದ ಕುರಿತು ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.  ಕೆಜಿಎಫ್-3 ಸಿನೆಮಾದ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಈ ಕುರಿತು ನಿರ್ಮಾಪಕ ವಿಜಯ್ ಕಿರಂಗದೂರ್‍ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.

ಕೆಜಿಎಫ್-2 ಸಿನೆಮಾ ಕೊನೆಯಲ್ಲಿ ಸಿನೆಮಾ ಇನ್ನೂ ಮುಂದುವರೆಯಲಿರುವ ಕುರಿತು ಹಿಂಟ್ ನೀಡಲಾಗಿತ್ತು. ಆದರೆ ಕೆಜಿಎಫ್-3 ಸಿನೆಮಾ ಬಗ್ಗೆ ಯಶ್ ಆಗಲಿ, ನಿರ್ದೇಶಕ ಪ್ರಶಾಂತ್ ನೀಲ್ ಆಗಲಿ ಎಲ್ಲೂ ತಿಳಿಸಿರಲಿಲ್ಲ. ಇದೀಗ ನಿರ್ಮಾಪಕ ವಿಜಯ್ ಕಿರಂಗದೂರ್‍ ಕೆಜಿಎಫ್ 3 ಸಿನೆಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಸುದ್ದಿ ಹೊರಬಂದ ಕೂಡಲೇ ಅಭಿಮಾನಿಗಳು ಕೇಕೆ ಹಾಕಲು ಶುರು ಮಾಡಿದ್ದಾರೆ. ಯಶ್ ಬೇರೆ ಸಿನೆಮಾ ಮಾಡಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ ಎನ್.ಟಿ.ಆರ್‍ ರವರೊಂದಿಗೆ ಹಾಗೂ ಸಲಾರ್‍ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ ಕಾರಣ ಕೆಜಿಎಫ್-3 ಸಿನೆಮಾ ಬರೊಲ್ಲ ಎಂಬ ಅನುಮಾನಗಳು ಮೂಡುತ್ತಿರುವ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್‍ ಗುಡ್ ನ್ಯೂ ನೀಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್‍ ಕೆಜಿಎಫ್-3 ಕುರಿತಂತೆ ಮಾತನಾಡಿದ್ದಾರೆ. ಸದ್ಯ ಪ್ರಶಾಂತ್ ನೀಲ್ ಸಲಾರ್‍ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಶೇ.35 ರಷ್ಟು ಮುಗಿದಿದೆ. ಶೀಘ್ರದಲ್ಲೇ ಮುಂದಿನ ಶೆಡ್ಯೂಲ್ ಸಹ ಆರಂಭವಾಗಲಿದೆ. ಅಕ್ಟೋಬರ್‍ ಅಥವಾ ನವೆಂಬರ್‍ ಮಾಹೆಯಲ್ಲಿ ಸಲಾರ್‍ ಶೂಟಿಂಗ್ ಪೂರ್ಣಗೊಳ್ಳಲಿದ್ದು, ಇದಾದ ಬಳಿಕ ಕೆಜಿಎಫ್ 3 ಶೂಟಿಂಗ್ ಕೆಲಸಗಳನ್ನು ಆರಂಭಿಸಲು ಯೋಜನೆ ಮಾಡಿಕೊಂಡಿದ್ದೇವೆ. ಇನ್ನೂ ಮುಂದಿನ 2024ರೊಳಗೆ ಈ ಕೆಜಿಎಫ್ 3 ಬಿಡುಗಡೆ ಮಾಡುವ ಪ್ಲಾನ ಸಹ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಈ ವಿಚಾರ ಹೊರಬರುತ್ತಿದ್ದಂತೆ ಅಭಿಮಾನಿಗಳು ಕೇಕೆ ಹಾಕಲು ಪ್ರಾರಂಭಿಸಿದ್ದಾರಂತೆ.

ನಿರ್ದೇಶಕ ಪ್ರಶಾಂತ್ ನೀಲ್ ಫೆರ್ಫೆಕ್ಟ್ ಆದ ನಿರ್ದೇಶಕ. ಆದ್ದರಿಂದಲೇ ಅವರ ಸಿನೆಮಾ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕೆಜಿಎಫ್-3 ಸಿನೆಮಾಕ್ಕೆ ಪ್ರಶಾಂತ್ ನೀಲ್ ಬಹಳಷ್ಟು ಸಮಯ ಮೀಸಲಿಡಲು ನಿರ್ಧಾರ ಮಾಡಿದ್ದಾರೆ. ಇನ್ನೂ ಅಕ್ಟೋಬರ್‍ ಮಾಹೆಯ ಅಂತ್ಯದೊಳಗೆ ಸಲಾರ್‍ ಸಿನೆಮಾ ಶೂಟಿಂಗ್ ಪೂರ್ಣಗೊಳಲಿದ್ದು, ಇದಾದ ಬಳಿಕ ಡಿಸೆಂಬರ್‍ ಮಾಹೆಯಲ್ಲಿ ಕೆಜಿಎಫ್ 3 ಸಿನೆಮಾ ಶೂಟಿಂಗ್ ಕೈಗೆತ್ತಿಕೊಳ್ಳಲಿದ್ದೇವೆ ಎಂದಿದ್ದಾರೆ.