Film News

ಸಖತ್ ವೈರಲ್ ಆಯ್ತು ಕೆಜಿಎಫ್-3 ನಕಲಿ ಟ್ರೈಲರ್.. ಲಕ್ಷಾಂತರ ವೀಕ್ಷಣೆ ಕಂಡ ವಿಡಿಯೋ…

ಸದ್ಯ ದೇಶ ಸೇರಿದಂತೆ ವಿದೇಶಗಳಲ್ಲೂ ಸಹ ಕೆಜಿಎಫ್-2 ಸಿನೆಮಾದ್ದೆ ಹವಾ. ಸಿನೆಮಾ ಕಲೆಕ್ಷನ್ಸ್ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಗಳು ನಡೆಯುತ್ತಿವೆ. ಬಾಕ್ಸ್ ಆಫೀಸ್ ಲೂಟಿ ಮಾಡುತ್ತಾ ದೇಶದ ಸಿನಿರಂಗದ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ ಬಂದಿದೆ. ಇದೀಗ ಕೆಜಿಎಫ್-3 ಸಿನೆಮಾ ಬಗ್ಗೆ ಸಹ ಚರ್ಚೆಗಳು ಶುರುವಾಗಿದ್ದು, ಕೆಜಿಎಫ್-3 ಸಿನೆಮಾದ ಬಗ್ಗೆ ಅಪ್ಡೇಟ್ ನೀಡಿ ಎಂದು ಕೆಜಿಎಫ್ ಸಿನೆಮಾ ತಂಡದ ಹಿಂದೆ ಅಭಿಮಾನಿಗಳು ದುಂಬಾಲು ಬಿದಿದ್ದಾರೆ.

ಇನ್ನೂ ಇಂದು ಯುಟ್ಯೂಬ್ ನಲ್ಲಿ ಇದ್ದಕ್ಕಿದಂತೆ ಕೆಜಿಎಫ್-3 ಟೀಸರ್‍ ಪ್ರತ್ಯಕ್ಷವಾಗಿಬಿಟ್ಟಿದೆ. ಸಿನೆಮಾ ತಂಡ ಈ ಕುರಿತು ಯಾವುದೇ ಅಪ್ಡೇಟ್ ಸಹ ನೀಡದೇ ಟ್ರೈಲರ್‍ ಹೇಗೆ ಬಿಡುಗಡೆಯಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದರೆ ಟ್ರೈಲರ್‍ ಮಾತ್ರ ಬಿಡುಗಡೆಯಾಗಿ ಲಕ್ಷಾಂತರ ವ್ಯೂವ್ಸ್ ಕಂಡಿದೆ. ಆದರೆ ಇದೊಂದು ನಕಲಿ ಟ್ರೈಲರ್‍ ಆಗಿದೆ. ಕೆಜಿಎಫ್ ಅಭಿಮಾನಿಗಳನ್ನು ಯಾಮಾರಿಸುವ ಸಲುವಾಗಿ ಈ ಟ್ರೈಲರ್‍ ಅನ್ನು ಸೋಷಿಯಲ್ ಮಿಡೀಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೂ ಸಹ ಈ ನಕಲಿ ಟ್ರೈಲರ್‍ ರಿಲೀಸ್ ಆದ ಸ್ವಲ್ಪ ಸಮಯದಲ್ಲೇ ಲಕ್ಷಾಂತರ ವೀಕ್ಷಣೆಯನ್ನು ಕಂಡಿದೆ. ಇದನ್ನು ನೋಡಿದರೇ ಕೆಜಿಎಫ್ ಪಾರ್ಟ್ 3 ಗಾಗಿ ಅದೆಷ್ಟು ಕಾತುರದಿಂದ ಕಾಯುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.

ಸದ್ಯ ಕೆಜಿಎಫ್-2 ಸಿನೆಮಾ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಸಿನೆಮಾಗೆ ಎದುರಾಳಿಯೇ ಇಲ್ಲ ಎಂಬಂತೆ ಕಾಣುತ್ತಿದೆ. ಬಿಡುಗಡೆಯಾಗಿ ೩೦ ದಿನಗಳಾದರೂ ಸಹ ಸಿನೆಮಾದ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ, ಸಿನೆಮಾ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ ಸಾಗಿದೆ. ಇದೀಗ ಮತ್ತೊಂದು ಕುತೂಹಲಕಾರಿ ವಿಚಾರವೆಂದರೇ ಕೆಜಿಎಫ್-3 ಯಾವಾಗ ಬರುತ್ತದೆ ಎಂಬುದು. ವಿಶ್ವದಾದ್ಯಂತ ಕೆಜಿಎಫ್-3 ಸಿನೆಮಾ ಅಪ್ಡೇಟ್ ಗಾಗಿ ಕಾಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಜಿಎಫ್-3 ನಕಲಿ ಟ್ರೈಲರ್‍ ಬಂದರೇ ಸುಮ್ಮನೇ ಇರ್ತಾರಾ ಜನ, ಬಿಡುಗಡೆಯಾದ ಕಡಿಮೆ ಸಮಯದಲ್ಲೇ ನಕಲಿ ಟ್ರೈಲರ್‍ ಅನ್ನು ಸಹ ಬಿಡದೇ ವೀಕ್ಷಣೆ ಮಾಡಿದ್ದಾರೆ.

ಇನ್ನೂ ಇಂತಹ ಘಟನೆಗಳು ನಡೆಯುವುದು ಇದೇ ಮೊದಲೇನಲ್ಲ. ಈ ಹಿಂದೆ ಸಹ ಅನೇಕರು ತಮ್ಮ ನೆಚ್ಚಿನ ಸ್ಟಾರ್‍ ಗಳ ಮುಂದಿನ ಸಿನೆಮಾಗಳ ಬಗ್ಗೆ ಫ್ಯಾನ್ ಮೇಡ್ ಪೊಟೋಗಳು ಟ್ರೈಲರ್‍ ಗಳು ವೈರಲ್ ಆಗುತ್ತಿದ್ದವು. ಇದೇ ರೀತಿಯಲ್ಲಿ ಕೆಜಿಎಫ್-3 ನಕಲಿ ಟ್ರೈಲರ್‍ ಅನ್ನು ಸಹ ಈ ಹೆಸರನ್ನು ಬಳಸಿಕೊಂಡ ಲಾಭ ಗಳಿಸುವ ನಿಟ್ಟಿನಲ್ಲಿ ಬಿಡುಗಡೆ ಮಾಡಿದ್ದಾರೆ. KGF-3 Official Trailer ಎಂಬ ಹೆಸರಿನಲ್ಲಿ ನಕಲಿ ಟ್ರೈಲರ್‍ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ನಕಲಿ ವಿಡಿಯೋ ಎಂದು ತಿಳಿದ ಮೇಲೂ ಸಹ ವಿಡಿಯೋ ಹೆಚ್ಚು ವೀಕ್ಷಣೆ ಕಂಡಿದೆ.

Trending

To Top